Election Commission: ಪಂಚರಾಜ್ಯಗಳ ಚುನಾವಣೆ ದಿನಾಂಕ ಪ್ರಕಟ: ಇಲ್ಲಿದೆ ಫುಲ್ ಮಾಹಿತಿ!
ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿಯನ್ನು ಇಂದು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ನವದೆಹಲಿ: ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿಯನ್ನು ಇಂದು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ಅವರು ವೇಳಾಪಟ್ಟಿ ಪ್ರಕಟಿಸಿದರು. ಈ ಎಲ್ಲ ರಾಜ್ಯಗಳ ಚುನಾವಣೆ ಫಲಿತಾಂಶ ಮೇ 2 ರಂದು ಪ್ರಕಟವಾಗಲಿದೆ.
ಐದೂ ರಾಜ್ಯಗಳಲ್ಲಿ ಒಟ್ಟು 18.5 ಕೋಟಿ ಮತದಾರರಿದ್ದಾರೆ. 2.74 ಲಕ್ಷ ಮತದಾನ(Voting) ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಅವರು ತಿಳಿಸಿದರು. ಬಿಹಾರದಲ್ಲಿ ಕೊರೊನಾ ಸಂದರ್ಭದಲ್ಲೂ ಯಶಸ್ವಿ ಚುನಾವಣೆ ನಡೆಸಿದ್ದೇವೆ. ಕೊರೊನಾಕ್ಕೆ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಈ ಐದೂ ರಾಜ್ಯಗಳ ಚುನಾವಣೆಯನ್ನೂ ಯಶಸ್ವಿಯಾಗಿ ನಡೆಸುತ್ತೇವೆ. ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ಹೆಚ್ಚುವರಿ ಒಂದು ಗಂಟೆ ನೀಡಲಾಗಿದೆ ಎಂದು ಅರೋರಾ ತಿಳಿಸಿದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಖಿ ಸಾವಂತ್ ತಾಯಿಗೆ ಸಲ್ಮಾನ್ ಖಾನ್ ಆರ್ಥಿಕ ನೆರವು
ಪಶ್ಚಿಮ ಬಂಗಾಳ(West Bengal) (ಒಟ್ಟು ಕ್ಷೇತ್ರ 294)
ತಮಿಳುನಾಡು (ಒಟ್ಟು ಕ್ಷೇತ್ರ 234)
ಕೇರಳ (ಒಟ್ಟು ಕ್ಷೇತ್ರ 140): ಕೇರಳದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ಏಪ್ರೀಲ್ 6 ರಂದು ಚುನಾವಣೆ ನಡೆಯಲಿದೆ.
Unlock 5.O: ಕೇಂದ್ರ ಸರ್ಕಾರದಿಂದ ಮಾ.31ರವರೆಗೆ 'ಅನ್ ಲಾಕ್ 5.0 ಮಾರ್ಗಸೂಚಿ' ವಿಸ್ತರಣೆ!
ಅಸ್ಸಾಂ (ಒಟ್ಟು ಕ್ಷೇತ್ರ 126): ಅಸ್ಸಾಂ(Assam)ನಲ್ಲಿ ಒಟ್ಟು ಮೂರು ಹಂತದ ಮತದಾನ ನಡೆಯಲಿದೆ. ಮಾರ್ಚ್ 27 ರಂದು ಒಂದನೇ ಹಂತದ ಮತದಾನ, ಏಪ್ರೀಲ್ 1 ರಂದು ಎರಡನೇ ಹಂತದ ಮತದಾನ ಹಾಗೂ ಏಪ್ರೀಲ್ 6 ರಂದು ಮೂರನೇ ಹಂತದ ಮತದಾನ ಅಸ್ಸಾಂನಲ್ಲಿ ನಡೆಯಲಿದೆ.
ಪುದುಚೇರಿ (ಒಟ್ಟು ಕ್ಷೇತ್ರ 33)
Share Market Updates Today: SENSEX ಸೂಚ್ಯಂಕದಲ್ಲಿ ಭಾರಿ ಕುಸಿತ...!
80 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ನಾಮಪತ್ರ ಸಲ್ಲಿಸುವ ವೇಳೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು. ಮನೆ ಮನೆಗೆ ತೆರಳಿ ಪ್ರಚಾರ ನಡೆಸುವುದಕ್ಕೆ ಕೇಲವ ಐದು ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. ಚುನಾವಣೆ ನಡೆಯುವ ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನು ನಿಯೋಜಿಸಲಾಗುತ್ತಿದೆ. ನಾಮಪತ್ರ ಸಲ್ಲಿಸುವುದನ್ನು ಆನ್ಲೈನ್ ಮೂಲಕ ಹಾಗೂ ಡಿಪಾಸಿಟ್ ಹಣ ತುಂಬುವುದೂ ಸಹ ಆನ್ಲೈನ್ ಮೂಲಕ ಮಾಡಲಾಗುತ್ತಿದೆ. ಪ್ರಚಾರಕ್ಕೆ ಕೇವಲ ಐದು ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದ್ದು, ಪಶ್ಚಿಮ ಬಂಗಾಳಕ್ಕೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗುತ್ತದೆ ಎಂದರು.
DGCA Latest Update - Check-In Bag ಇಲ್ಲದೆ ವಿಮಾನ ಯಾತ್ರೆ ಕೈಗೊಳ್ಳುವವರಿಗೆ ಅಗ್ಗದ ದರದಲ್ಲಿ ಟಿಕೆಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.