ನವದೆಹಲಿ: ಮುಸ್ಲಿಮರ ಪವಿತ್ರ ಮಾಸವಾದ ರಂಜಾನ್ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮತದಾನ ಸಮಯವನ್ನು ಬದಲಿಸಬೇಕು ಎಂಬ ಬೇಡಿಕೆಯನ್ನು ಭಾರತ ಚುನಾವಣಾ ಆಯೋಗ ತಿರಸ್ಕರಿಸಿದ್ದು, ಸಮಯ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದೆ. 


COMMERCIAL BREAK
SCROLL TO CONTINUE READING

ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, ಏಳು ರಾಜ್ಯಗಳ 51 ಕ್ಷೇತ್ರಗಳಿಗೆ ಮತದಾನದ ಎಲ್ಲಾ ಸಿದ್ಧತೆಗಳು ನಡೆದಿದೆ. 


"ರಂಜಾನ್ ಆರಂಭ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಲೋಕಸಭಾ ಚುನಾವಣೆ 2019ರ ಐದು, ಆರು ಮತ್ತು ಏಳನೇ ಹಂತದ ಮತದಾನದ ವೇಳಾಪಟ್ಟಿಯನ್ನು ಬದಲಿಸಲು ಸಾಧ್ಯವಿಲ್ಲ" ಎಂದು ಸ್ಥಳೀಯ ಆಡಳಿತಾತ್ಮಕ ಹಾಗೂ ಇನ್ನಿತರ ಸಮಸ್ಯೆಗಳನ್ನು ವಿವರಿಸಿ ಚುನಾವಣಾ ಆಯೋಗ ಹೇಳಿದೆ.


ಈ ಹಿಂದೆ 2019 ರಲೋಕಸಭಾ ಚುನಾವಣೆಯ 5, ,6 ಹಾಗೂ 7 ನೇ ಹಂತದ ಮತದಾನದ ಸಮಯವನ್ನು ಬೆಳಿಗ್ಗೆ 7 ಗಂಟೆ ಬದಲಿಗೆ ಐದು ಗಂಟೆಯಿಂದ ಮತದಾನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮೊಹಮ್ಮದ್ ನಿಜಾಮುದ್ದೀನ್ ಪಾಶಾ ಎಂಬ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು. ಮೇ 2ರಂದು ಕೋರ್ಟ್ ಆಯೋಗವು ಚುನಾವಣೆ ಮತದಾನದ ಸಮಯ ಬದಲಾವಣೆಗೆ ಅವಕಾಶ ಮಾಡಿಕೊಡುವ ಬಗ್ಗೆ ನಿರ್ಧರಿಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಸಾಧ್ಯವಿಲ್ಲ ಎಂದು ಭಾನುವಾರ ಚುನಾವಣಾ ಆಯೋಗ ಹೇಳಿದೆ.