ನವದೆಹಲಿ: ಪ್ರಧಾನ ಮಂತ್ರಿಯವರ ಆರ್ಥಿಕ ಸಲಹೆ ಮಂಡಳಿಯು (ಇಎಸಿ-ಪಿಎಮ್) ನಾಲ್ಕನೇ ಸಭೆಯು ಬಜೆಟ್ ಅಧಿವೇಶನದಲ್ಲಿ ಮಂಡಿಸಲಾದ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಧಾನಗಳ ಬಗ್ಗೆ ಸೋಮವಾರದಂದು ನಡೆದ ಸಭೆಯಲ್ಲಿ ಚರ್ಚಿಸಿತು.


COMMERCIAL BREAK
SCROLL TO CONTINUE READING

2018 ರ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಲಾದ  ಕೇಂದ್ರ ಸರ್ಕಾರವು ಬಜೆಟ್ ನಲ್ಲಿ  ರಾಷ್ಟ್ರೀಯ ಆರೋಗ್ಯ ಯೋಜನೆಯೊಂದನ್ನು ಘೋಷಣೆ ಮಾಡಿತ್ತು ಈಗ ಅದನ್ನು ಜಾರಿಗೆಗೊಳಿಸುವ ಬಗ್ಗೆ  ಚರ್ಚಿಸಲಾಗಿದೆ ಎಂದು ಪತ್ರಿಕಾ  ಪ್ರಕಟಣೆಯಲ್ಲಿ ತಿಳಿಸಿದೆ.ಇದೆ ಸಂದರ್ಭದಲ್ಲಿ ಹಲವಾರು ವಲಯಗಳಿಗೆ ಕುರಿತಾದ ವಿಷಯಗಳು ಮತ್ತು ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.


ಸಭೆಯಲ್ಲಿ ಶಮಿಕಾ ರವಿ ಆರೋಗ್ಯ ಸುಧಾರಣೆಗಳ ಬಗ್ಗೆ ಚರ್ಚಿಸಿದರೆ, ಅಶಿಮಾ ಗೋಯಲ್ ಅವರು ಹಣಕಾಸು ವಿಷಯದ ಕುರಿತಾಗಿ ಚರ್ಚಿಸಿದರು.ಕೌನ್ಸಿಲ್ನ ಸಭೆಯು ಇಎಸಿ-ಪಿಎಮ್ ಮುಖ್ಯಸ್ಥ ಬಿಬೆಕ್ ಡೆಬ್ರಾಯ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.