ನವದೆಹಲಿ: ಆರ್ಥಿಕ ಬೆಳವಣಿಗೆ ಇಳಿದಿರಬಹುದು ಆದರೆ ಆರ್ಥಿಕ ಹಿಂಜರಿತವಿಲ್ಲ, ಮತ್ತು ದೇಶದಲ್ಲಿ ಯಾವುದೇ ಆರ್ಥಿಕ ಹಿಂಜರಿತ ಉಂಟಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯಸಭೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕುರಿತ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್ 'ಭಾರತದ ಜಿಡಿಪಿ ಬೆಳವಣಿಗೆ 2009-2014ರ ಕೊನೆಯಲ್ಲಿ 6.4% ರಷ್ಟಿದ್ದರೆ, 2014-2019ರ ನಡುವೆ ಅದು 7.5% ರಷ್ಟಿದೆ" ಎಂದು ಹೇಳಿದರು. 'ನೀವು ಆರ್ಥಿಕತೆಯನ್ನು ವಿವೇಚನೆಯ ದೃಷ್ಟಿಯಿಂದ ನೋಡುತ್ತಿದ್ದರೆ, ಬೆಳವಣಿಗೆ ಇಳಿದಿರಬಹುದು ಆದರೆ ಅದು ಇನ್ನೂ ಆರ್ಥಿಕ ಹಿಂಜರಿತವಲ್ಲ, ಇದು ಎಂದಿಗೂ ಆರ್ಥಿಕ ಹಿಂಜರಿತವಾಗುವುದಿಲ್ಲ 'ಎಂದು ಹೇಳಿದರು.


ಆರ್ಥಿಕತೆಯ ಸ್ಥಿತಿ ಕುರಿತ ಚರ್ಚೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಆರ್ಥಿಕತೆಗೆ ಸಾಕಷ್ಟು ಬೆಂಬಲ ಬೇಕು ಮತ್ತು ಸರ್ಕಾರ ಕೈಗೊಳ್ಳುವ ಪ್ರತಿಯೊಂದು ಹೆಜ್ಜೆಯೂ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಕುಸಿತವನ್ನು ಗುರುತಿಸಿದೆ ಮತ್ತು ಈ ವಲಯದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.


ಎನ್‌ಡಿಎ ಮತ್ತು ಹಿಂದಿನ ಯುಪಿಎ ಆಡಳಿತದ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಅಂಕಿ ಅಂಶಗಳನ್ನು ಹಣಕಾಸು ಸಚಿವರು ಹೋಲಿಸಿದ್ದಾರೆ. ಎಫ್‌ಡಿಐ ಒಳಹರಿವು 2019 ರಲ್ಲಿ 283.9 ಬಿಲಿಯನ್ ಡಾಲರ್ ಗೆ ಏರಿದ್ದರೆ, 2009-2014ರಲ್ಲಿ 189.5 ಬಿಲಿಯನ್ ಡಾಲರ್ ಆಗಿತ್ತು ಎಂದು ಅವರು ಹೇಳಿದ್ದಾರೆ.