ನವದೆಹಲಿ: ಆರ್ಥಿಕ ತಜ್ಞ ಜಿನ್ ಡ್ರೆಜ್ ಸೇರಿ ಮೂವರು ಆಹಾರದ ಹಕ್ಕು ಹೋರಾಟಗಾರರನ್ನು ಎರಡು ಗಂಟೆಗಳ ಕಾಲ ಜಾರ್ಖಂಡ್ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸಭೆ ನಡೆಸಲು ಪೋಲೀಸರ ಅನುಮತಿ ತೆಗೆದುಕೊಳ್ಳದಿರುವುದಕ್ಕೆ ಗರವಾ ಜಿಲ್ಲೆಯ ವಿಷ್ಣುಪುರಾ ಪೋಲಿಸ್ ಠಾಣೆ ವಾಪ್ತಿಯಲ್ಲಿ ಹೋರಾಟಗಾರರನ್ನು ಬಂಧಿಸಲಾಗಿದೆ.ಇದೆ ವೇಳೆ ಹೋರಾಟಗಾರರಿಗೆ ಬಾಂಡ್ ಮೇಲೆ ಸರ್ಕಾರದ ವಿರುದ್ಧ ತಮ್ಮದು ಯಾವುದೇ ದೂರು ಇಲ್ಲವೆಂದು ಬರೆದುಕೊಡಲು ಪೊಲೀಸರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.ನಂತರ ಅವರ ಮೇಲೆ ಯಾವುದೇ ದೂರು ದಾಖಲಿಸಿದೆ ಪೊಲೀಸರು ಬಿಡುಗಡೆ ಮಾಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.


ಇದೇ ವೇಳೆ ಜಿನ್ ಡ್ರೆಜ್ ಪ್ರತಿಕ್ರಿಯಿಸುತ್ತಾ " ನಾವು ಇಂದೇ ಸಭೆಯನ್ನು ನಡೆಸಬೇಕಾಗಿದೆ.ಈ ಹಿಂದಿನ ದಿನ ಇದೆ ಗ್ರಾಮದಲ್ಲಿ ಯಾವುದೇ ಅನುಮತಿ ನೀಡದೆ ಸಭೆ ನಡೆಸಲಾಗಿತ್ತು" ಎಂದು ಹೇಳಿದರು.59 ವರ್ಷದ ಜಿನ್ ಡ್ರೆಜ್ ಅವರು 1970 ರಿಂದ ಭಾರತದಲ್ಲಿ ಅಭಿವೃದ್ದಿ ಅರ್ಥಶಾಸ್ತ್ರದಲ್ಲಿನ ವಿಷಯದ ಕುರಿತಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಅವರು ಹಲವು ಕೃತಿಗಳನ್ನು ನೊಬೆಲ್ ಪುರಸ್ಕೃತ ಅಮರ್ತ್ಯಸೇನ್ ಅವರ ಜೊತೆ ಸೇರಿ ರಚಿಸಿದ್ದಾರೆ. ಭಾರತದ ಪೌರತ್ವವನ್ನು ಪಡೆದಿರುವ ಅವರು ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.