ಮುಂಬೈ: ಕೇಂದ್ರ ಸರ್ಕಾರ(BJP Government)ದ ವಿರುದ್ಧ ಶಿವಸೇನಾ ಸಂಸದ ಸಂಜಯ್ ರಾವತ್ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಾರಿ ನಿರ್ದೇಶನಾಲಯದ ಕ್ರಮದ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ಶೋಷಣೆಯನ್ನು ಬಹಿರಂಗಪಡಿಸುವಾಗಿ ಹೇಳಿದ್ದರು. ಅದರಂತೆ ಅವರು ಪ್ರಧಾನಿ ಮೋದಿ(PM Modi) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.  


COMMERCIAL BREAK
SCROLL TO CONTINUE READING

ಇಡಿ ವಿರುದ್ಧ ಸಂಜಯ್ ರಾವುತ್ ವಾಗ್ದಾಳಿ


ಪತ್ರಿಕಾಗೋಷ್ಠಿಯ ಆರಂಭದಲ್ಲಿ ಸಂಜಯ್ ರಾವುತ್(Sanjay Raut) ಅವರು ಮಹಾವಿಕಾಸ್ ಅಘಾಡಿ ಸರ್ಕಾರ(Mahavikas Aghadi Government)ದ 14 ಜನರು ಮತ್ತು ಪಶ್ಚಿಮ ಬಂಗಾಳದ 7 ಜನರನ್ನು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಕೆಲ ಇಡಿ ಅಧಿಕಾರಿಗಳು ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಮತ್ತು ಉತ್ತರ ಪ್ರದೇಶದ ಸುಮಾರು 50 ಅಭ್ಯರ್ಥಿಗಳ ವೆಚ್ಚವನ್ನೂ ಅವರು ಭರಿಸಿದ್ದಾರೆ ಅಂತಾ ಆರೋಪಿಸಿದ್ದಾರೆ.


ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶಪಡಿಸಲು ಯತ್ನಿಸುತ್ತಿದೆ- ಮಮತಾ ಬ್ಯಾನರ್ಜೀ


‘ಜಾರಿ ನಿರ್ದೇಶನಾಲಯ ಬಿಜೆಪಿಯ ಎಟಿಎಂ ಯಂತ್ರ’


ಈ ಸಂಬಂಧ ಪ್ರಧಾನಿಯವರೊಂದಿಗೂ ವಿವರ ಹಂಚಿಕೊಂಡಿದ್ದೇವೆ. ಜಾರಿ ನಿರ್ದೇಶನಾಲಯ(Enforcement Directorate) ಕೆಲವು ಅಧಿಕಾರಿಗಳು ಸುಲಿಗೆಯಲ್ಲಿ ತೊಡಗಿದ್ದು, ಕೋಟಿಗಟ್ಟಲೆ ಹಣವನ್ನು ಸುಲಿಗೆ ಮಾಡುತ್ತಿದೆ. ಇದರ ಬಗ್ಗೆ ವಿವರವಾದ ಮಾಹಿತಿಯನ್ನು ಪ್ರಧಾನಿ ಮೋದಿಯವರಿಗೆ ನೀಡಲಾಗಿದೆ. ಜಾರಿ ನಿರ್ದೇಶನಾಲಯವು ಬಿಜೆಪಿಯ ಎಟಿಎಂ ಯಂತ್ರವಾಗಿ ಮಾರ್ಪಟ್ಟಿದೆ ಅಂತಾ ಟೀಕಿಸಿದರು.


ಬಿಎಂಸಿ ಚುನಾವಣೆ ಮೇಲೆ ಪ್ರಭಾವ ಬೀರಿದ ಆರೋಪ


ಮುಂಬೈನಲ್ಲಿ ಇಂದು ಸಾಕಷ್ಟು ಸಂಚಲನ ಸೃಷ್ಟಿಯಾಗಿದೆ. ಅನೇಕ ಸ್ಥಳಗಳಲ್ಲಿ ಶಿವಸೇನಾ ನಾಯಕರ ನೆಲೆಗಳ ಮೇಲೆ ಆದಾಯ ತೆರಿಗೆ ದಾಳಿಗಳು ನಡೆಯುತ್ತಿವೆ. ಬಿಎಂಸಿ ಚುನಾವಣೆ(BMC Elections) ನಡೆಯುವವರೆಗೂ ಆದಾಯ ತೆರಿಗೆ ಇಲಾಖೆ ಮುಂಬೈನ ಪ್ರತಿಯೊಂದು ವಾರ್ಡ್‌ನಲ್ಲಿಯೂ ಇದೇ ರೀತಿ ದಾಳಿ ನಡೆಸಲಿದೆಯಂತೆ.


ಇದನ್ನೂ ಓದಿ: ಜನ ಸಾಮಾನ್ಯರಿಗೆ ಆರ್‌ಬಿಐನಿಂದ ಹೊಸ ಸೌಲಭ್ಯ...ಏನಿದೆ ಇದರಲ್ಲಿ ಅಂತಹ ವಿಶೇಷತೆ?


ಮಹಾರಾಷ್ಟ್ರ ಸರ್ಕಾರ ಬೀಳಿಸಲು ಸಂಚು!


ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಸರ್ಕಾರ(Maharashtra Government)ವನ್ನು ಬೀಳಿಸಲು ಕೇಂದ್ರ ಸರಕಾರ ಸಂಚು ಮಾಡುತ್ತಿದೆ ಎಂದು ಸಂಜಯ್ ರಾವತ್ ಆರೋಪಿಸಿದರು. ಮಹಾ ವಿಕಾಸ್ ಅಘಾಡಿ ಸರ್ಕಾರದ ನಾಯಕರು, ಶಿವಸೇನೆ ನಾಯಕರ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.


ಕೇಂದ್ರೀಯ ಸಂಸ್ಥೆಗಳ ಈ ಕ್ರಮದ ಮೇಲೆ ಒತ್ತಡ ಹೇರುವ ಮೂಲಕ ಮಹಾರಾಷ್ಟ್ರದ ಆಡಳಿತಾರೂಢ ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಲಾಗುತ್ತಿದೆ. ಇಡೀ ದೇಶದಲ್ಲಿ ಮಹಾರಾಷ್ಟ್ರದಲ್ಲಿ ಮಾತ್ರ ಗರಿಷ್ಠ ಇಡಿ ದಾಳಿ(Enforcement Directorate) ಅಥವಾ ಕ್ರಮ ಏಕೆ ನಡೆಯುತ್ತಿದೆ? ಅಂತಾ ಅವರು ಪ್ರಶ್ನಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.