Education Loan: ಪೋಷಕರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಎಂಬ ಕಾರಣ ಹೇಳಿ ಬ್ಯಾಂಕುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು (Education Loan) ನಿರಾಕರಿಸುವಂತಿಲ್ಲ ಎಂದು ಕೇರಳ (Kerala) ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ, ಪ್ರತಿಭಾವಂತೆ ವಿದ್ಯಾರ್ಥಿಗೆ ಸಾಲವನ್ನು ತಕ್ಷಣ ಪಾವತಿಸುವಂತೆ ಹೈಕೋರ್ಟ್ (Kerala High Court) ಬ್ಯಾಂಕಿಗೆ ನಿರ್ದೇಶನ ನೀಡಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು ಶಿಕ್ಷಣ ಸಾಲದ ಉದ್ದೇಶವೆಂದರೆ ಕಷ್ಟಪಟ್ಟು ದುಡಿಯುವ ವಿದ್ಯಾರ್ಥಿಗಳಿಗೆ ಹಣದ ಕೊರತೆಯಿಂದಾಗಿ ಅಧ್ಯಯನದಿಂದ ವಂಚಿತರಾಗಬಾರದು ಎಂಬುದಾಗಿರಬೇಕು ಎಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- Interesting Fact: ರಸಗುಲ್ಲಾಗೆ ಇಂಗ್ಲೀಷ್ ನಲ್ಲಿ ಏನು ಹೇಳ್ತಾರೆ ? ಇದು ಇಂಟರ್ ವ್ಯೂ ನಲ್ಲಿ ಕೇಳಿದ ಪ್ರಶ್ನೆ , ನಿಮ್ಮ ಬಳಿ ಇದೆಯಾ ಉತ್ತರ ?


ಪ್ರಕರಣದ ಅರ್ಜಿದಾರ ಆಯುರ್ವೇದ ಔಷಧಿ ಹಾಗೂ ಶಸ್ತ್ರಚಿಕಿತ್ಸೆಯ ವಿದ್ಯಾರ್ಥಿನಿಯಾಗಿದ್ದಾಳೆ (Ayurved Medicine And Surgery).  ತನ್ನ ಶೈಕ್ಷಣಿಕ ಸಾಲದ ಅರ್ಜಿ ತಿರಸ್ಕೃತಗೊಂಡ ಬಳಿಕ  ಆಕೆ ನ್ಯಾಯಾಲಯದ ಮೊರೆಹೋಗಿದ್ದಾಳೆ. ಈ ಕುರಿತು ತನ್ನ ಅರ್ಜಿಯಲ್ಲಿ ವಾದ ಮಂಡಿಸಿದ್ದ ವಿದ್ಯಾರ್ಥಿನಿ ತಾನು 2019 ರಲ್ಲಿ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET EXAM 2019) ಶ್ರೇಣಿಯ ಆಧಾರದ ಮೇಲೆ ಕೇಂದ್ರೀಕೃತ ಸೀಟು ಹಂಚಿಕೆ ಪ್ರಕ್ರಿಯೆಯಡಿ 2019 ರಲ್ಲಿ ತಾವು ಪ್ರವೇಶ ಪಡಿದಿರುವುದಾಗಿ ಹೇಳಿದ್ದಾರೆ. ಆದರೆ,  ತನ್ನ ಕುಟುಂಬಕ್ಕೆ ಶಿಕ್ಷಣ ವೆಚ್ಚವನ್ನು ಭರಿಸಲಾಗದ ಕಾರಣ, 7.5 ಲಕ್ಷ ರೂ.ಗಳ ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದಾಳೆ.  ಶಿಕ್ಷಣ ಸಾಲದಲ್ಲಿ ಈ ಮೊತ್ತಕ್ಕೆ ಯಾವುದೇ ಭದ್ರತೆ ಅವಶ್ಯಕತೆ ಇಲ್ಲ. ಇದರ ಹೊರತಾಗಿಯೂ, ಯುವತಿಯ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ಹೇಳಿ ಬ್ಯಾಂಕ್ ಸಾಲ (Bank Loan) ನೀಡಲು ನಿರಾಕರಿಸಿತ್ತು. ಯುವತಿಯ ತಂದೆ ಸಣ್ಣ ವ್ಯವಹಾರವನ್ನು ಹೊಂದಿದ್ದರು, ಆದರೆ ಅದೂ ಕೂಡ ಕರೋನಾ ಸಾಂಕ್ರಾಮಿಕ ಕಾರಣ ಸ್ಥಗಿತಗೊಂಡಿದೆ. ಹೀಗಾಗಿ ಅವರಿಂದ ಸಾಲ ಮರುಪಾವತಿ ಸಾಧ್ಯವಿಲ್ಲ ಎಂದು ಹೇಳಿ ಬ್ಯಾಂಕ್ ಸಾಲ ನೀಡಲು ನಿರಾಕರಿಸಿತ್ತು ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-"ಎರಡು ಡೋಸ್ ಲಸಿಕೆ ಶೇ 95 ರಷ್ಟು ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ"


ಒಂದು ವೇಳೆ ಈ ರೀತಿ ಮುಂದೆಯೂ ನಡೆದರೆ,  ಶೈಕ್ಷಣಿಕ ಸಾಲ ಯೋಜನೆಯ ಉದ್ದೇಶ ಈಡೇರುವುದಿಲ್ಲ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಶೈಕ್ಷಣಿಕ ಸಾಲದ ಉದ್ದೇಶವೆಂದರೆ ಹಣದ ಕೊರತೆಯಿಂದಾಗಿ ಪ್ರತಿಭಾನ್ವಿತ ವಿದ್ಯಾರ್ಥಿಯ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂದು ನ್ಯಾಯಾಲಯ ಹೇಳಿದೆ. ಬ್ಯಾಂಕುಗಳು ಇಂತಹ ಮನೋಭಾವವನ್ನು ಅಳವಡಿಸಿಕೊಂಡರೆ ಶೈಕ್ಷಣಿಕ ಸಾಲ ಯೋಜನೆಯ ಉದ್ದೇಶ ಈಡೇರುವುದಿಲ್ಲ ಎಂದು ಸಿಂಗಲ್ ಬೆಂಚ್ ಕೋರ್ಟ್ ಆಫ್ ಜಸ್ಟಿಸ್ ಪಿ.ಬಿ.ಸುರೇಶ್ ಕುಮಾರ್ ಹೇಳಿದ್ದಾರೆ. ಹೀಗಾಗಿ ಬ್ಯಾಂಕ್ ವಿದ್ಯಾರ್ಥಿನಿಗೆ ವಿಧಿಸಿರುವ ಷರತ್ತುಗಳನ್ನು ಬದಿಗೊತ್ತಿ, ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ತಕ್ಕ್ಷಣದಲ್ಲಿ ಸಾಲ ಬಿಡುಗಡೆ ಮಾಡುವಂತೆ ನ್ಯಾಯಪೀಠ ಬ್ಯಾಂಕ್ ಗೆ ಆದೇಶಿಸಿದೆ.


ಇದನ್ನೂ ಓದಿ-"ಕೊರೊನಾ ಮೂರನೇ ಅಲೆ ಹಿನ್ನಲೆಯಲ್ಲಿ ಮುಂದಿನ 100 ದಿನಗಳು ನಿರ್ಣಾಯಕ"


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ