ನವದೆಹಲಿ: ದೇಶಾದ್ಯಂತ ಇಂದು ಮುಸ್ಲಿಂ ಬಾಂಧವರು ಈದ್ ಸಂಭ್ರಮಾಚರಣೆಯಲ್ಲಿದ್ದಾರೆ. ಬುಧವಾರ ಬೆಳಿಗ್ಗೆ, ಜನರು ದೇಶದ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾರೆ. ರಂಜಾನ್ ಎಂದರೆ ಉಪವಾಸ ಮಾತ್ರವಲ್ಲ, ಅರ್ಹರಿಗೆ, ಅಗತ್ಯವಿರುವವರಿಗೆ ದಾನ, ಧರ್ಮ ಮಾಡಿ ಅದರ ಮೂಲಕ ಅಲ್ಲಾಹುವನ್ನು ಸಂಪ್ರೀತಗೊಳಿಸುವುದಾಗಿದೆ. ಇದು ಮುಸಲ್ಮಾನ್ ಬಾಂಧವರ ಪವಿತ್ರ ಆಚರಣೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ದೇಶದ ಎಲ್ಲಾ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯ ಕೋರಿದ್ದಾರೆ.


COMMERCIAL BREAK
SCROLL TO CONTINUE READING


"ರಂಜಾನ್ ಪವಿತ್ರ ಮಾಸ ಕೊನೆಗೊಳ್ಳುವ ಈ ಉತ್ಸವವು ನಮ್ಮ ಧರ್ಮ, ಸಹೋದರತ್ವ ಮತ್ತು ದಯೆ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ" ಎಂದು ರಾಷ್ಟ್ರಪತಿಗಳು ತಿಳಿಸಿದ್ದಾರೆ. "ಈ ದಿನ ನಾವು ನಮ್ಮ ನಾಗರಿಕತೆಯನ್ನು ಪ್ರತಿಬಿಂಬಿಸುವ ಶಾಶ್ವತ ಮೌಲ್ಯಗಳಿಗೆ ನಮ್ಮನ್ನು ನಾವೇ ಅರ್ಪಿಸಿಕೊಳ್ಳಬೇಕು" ಎಂದಿದ್ದಾರೆ.



ಈದ್ ಸಂದರ್ಭದಲ್ಲಿ, ಓಲ್ಡ್ ದೆಹಲಿಯ ಚುನ್ವಿವಾಲ್ನ ಮಸೀದಿಯಲ್ಲಿ ಬೆಳಿಗ್ಗೆ 5 ಗಂಟೆ 45 ನಿಮಿಷಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಐತಿಹಾಸಿಕ ಶಾಹಿ ಜಾಮಾ ಮಸೀದಿಯಲ್ಲಿ, ಬೆಳಿಗ್ಗೆ 7:30 ಗಂಟೆಗೆ ಚಾಂದಿನಿ ಚೌಕ್ನಲ್ಲಿರುವ ಮುಘಲ್ ಫತೇಪುರಿ ಮಸೀದಿಯಲ್ಲಿ ಬೆಳಗ್ಗೆ 8:30 ಕ್ಕೆ ಪ್ರಾರ್ಥನೆ ಸಲ್ಲಿಸಲಾಗುವುದು.