ನವದೆಹಲಿ: ಭಾರತದಾದ್ಯಂತ ಜೂನ್ 16ರ ಶನಿವಾರದಂದು ಈದ್-ಉಲ್-ಫಿತರ್ ಆಚರಿಸುವುದಾಗಿ ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಘೋಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ಗುರುವಾರ ನಡೆದ ಚಂದ್ರ-ದೃಶ್ಯ ಸಮಿತಿ ಸಭೆ ಬಳಿಕ ಮಾತನಾಡಿದ ಶಾಹಿ ಇಮಾಮ್ ಅವರು,  ದೇಶಾದ್ಯಂತ ಚಂದ್ರ ಕಾಣಿಸಿಕೊಳ್ಳುವ ಯಾವುದೇ ಸೂಚನೆ ದೊರೆಯದ ಕಾರಣ ಶನಿವಾರದಂದು ದೆಹಲಿ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಈದ್ ಆಚರಿಸುವುದಾಗಿ ಘೋಷಿಸಿದ್ದಾರೆ. 


ರಂಜಾನ್ ಮುಸಿಮರ ಪವಿತ್ರ ತಿಂಗಳಾಗಿದ್ದು, ಚಂದ್ರ ದರ್ಶನದೊಂದಿಗೆ ಉಪವಾಸ ಆರಂಭಿಸಿ ತಿಂಗಳ ಕೊನೆಯ ದಿನ ಚಂದಿರನ ದರ್ಶನ ಮಾಡಿ ಉಪವಾಸ ಮುರಿಯುವುದು ಮುಸ್ಲೀಂರ ಪ್ರತೀತಿ ಇದೆ. ಉಪವಾಸದ ಕೊನೆಯ ದಿನ ಆದರೆ ಗುರುವಾರ ಚಂದ್ರ ಕಾಣದ ಕಾರಣ ಒಂದು ದಿನ ತಡವಾಗಿ ರಂಜಾನ್ ಆಚರಣೆಗೆ ನಿರ್ಣಯ ಕೈಗೊಳ್ಳಲಾಗಿದೆ.