Maharashtra Crisis : ಠಾಕ್ರೆಗೆ ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾದ ಶಿಂಧೆ, ಹೊಸ ಪಕ್ಷ ಕಟ್ಟಲು ನಿರ್ಧಾರ!
ಶಿಂಧೆ ಬೆಂಬಲಿಗರು ತಮ್ಮ ಪ್ರತ್ಯೇಕ ಬಣದ ಹೆಸರನ್ನು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರು `ಶಿವಸೇನೆ-ಬಾಳಾಸಾಹೇಬ್ ಠಾಕ್ರೆ ಬಣ` (Shiv Sena (Balasaheb)) ಎಂಬ ಹೆಸರನ್ನು ಇಡಲು ನಿರ್ಧರಿಸಿದೆ.
Eknath Shinde Camp goes with Shiv Sena Balasaheb Gut : ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆಯೇ ರಾಜ್ಯದ ರಾಜಕೀಯ ಯಾವ ದಿಕ್ಕಿಗೆ ತಿರುವು ಪಡೆಯಲಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ, ಈ ನಡುವೆ ಸಿಎಂ ಉದ್ಧವ್ ಠಾಕ್ರೆಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಏಕನಾಥ್ ಶಿಂಧೆ ಪಾಳಯದಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನಡೆದಿದೆ.
ಶಿಂಧೆ ಬೆಂಬಲಿಗರಿಂದ ಹೊಸ ಪಾರ್ಟಿ!
ಶಿಂಧೆ ಬೆಂಬಲಿಗರು ತಮ್ಮ ಪ್ರತ್ಯೇಕ ಬಣದ ಹೆಸರನ್ನು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರು 'ಶಿವಸೇನೆ-ಬಾಳಾಸಾಹೇಬ್ ಠಾಕ್ರೆ ಬಣ' (Shiv Sena (Balasaheb)) ಎಂಬ ಹೆಸರನ್ನು ಇಡಲು ನಿರ್ಧರಿಸಿದೆ. ಸದ್ಯ ಸುಮಾರು 40 ಶಾಸಕರು ಈ ಬಂಡಾಯ ಪಾಳೆಯದಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ಹೀಗಾಗಿ, ಶಿಂಧೆ ಬೆಂಬಲಿಗರು ಈ ಹೆಸರಿನ ಬಗ್ಗೆ ಔಪಚಾರಿಕ ಘೋಷಣೆಯನ್ನು ಶೀಘ್ರದಲ್ಲೇ ಮಾಡಬಹುದು.
ಇದನ್ನೂ ಓದಿ : "ಮೋದಿ, ಶಿವನು ವಿಷ ಕುಡಿದಂತೆ ನೋವು ಸಹಿಸಿಕೊಂಡಿದ್ದರು"
ಎರಡು ಭಾಗವಾಗಲಿದೆ ಶಿವಸೇನೆ ತಜ್ಞರ ಪ್ರಕಾರ, ಈಗ ಶಿವಸೇನೆಯು ಬಾಳಾಸಾಹೇಬ್ ಬಣ ಮತ್ತು ಇನ್ನೊಂದು (ಉದ್ಧವ್) ಬಣ ಎಂದು ಎರಡು ಭಾಗಗಳಾಗಿ ವಿಭಜನೆಯಾಗಲಿದೆ ಎಂಬುದು ಈ ಹೆಸರಿನಿಂದ ಸ್ಪಷ್ಟವಾಗಿದೆ. ಈ ಮೂಲಕ ಹೆಚ್ಚೆಚ್ಚು ಶಿವಸೇನೆ ಕಾರ್ಯಕರ್ತರು, ನಾಯಕರು ತಮ್ಮ ಬಣದೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸುತ್ತಾರೆ ಎಂದು ಏಕನಾಥ್ ಶಿಂಧೆ ಬಣ ಊಹಿಸುತ್ತಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.