Maharashtra Political Crisis : ಸುಮಾರು ಎರಡು ವಾರಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ರಾಜಕೀಯ ಗೊಂದಲಗಳಿಗೆ ಇದೀಗ ಹೊಸ ಸರ್ಕಾರ ರಚನೆಯೊಂದಿಗೆ ಅಂತ್ಯಗೊಳ್ಳುವ ಲಕ್ಷಣ ಕಂಡುಬರುತ್ತಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್, "ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲಿದ್ದಾರೆ, ಇಂದು ಸಂಜೆ 7.30 ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ" ಘೋಷಿಸಿದರು.


ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಬೇಕೆಂದು ಶಿವಸೇನಾ ಶಾಸಕರು ಒತ್ತಾಯಿಸುತ್ತಿದ್ದರು ಆದರೆ ಉದ್ಧವ್ ಠಾಕ್ರೆ ಈ ಶಾಸಕರನ್ನು ನಿರ್ಲಕ್ಷಿಸಿದರು ಮತ್ತು ಎಂವಿಎ ಮೈತ್ರಿ ಪಾಲುದಾರರಿಗೆ ಆದ್ಯತೆ ನೀಡಿದರು, ಅದಕ್ಕಾಗಿಯೇ ಈ ಶಾಸಕರು ಬಂಡಾಯ ಎದ್ದರು.


ಹಿಂದುತ್ವ ಮತ್ತು ಸಾವರ್ಕರ್ ವಿರುದ್ಧ ಇರುವವರ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿದೆ. ಶಿವಸೇನೆ ಜನರ ಆದೇಶವನ್ನು ಅವಮಾನಿಸಿದೆ ಎಂದರು.


ನಂತರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಏಕನಾಥ್ ಶಿಂಧೆ, ನಾವು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎಂದು ಮನಗಂಡ ನಾವು ನಮ್ಮ ಕ್ಷೇತ್ರದ ಕುಂದುಕೊರತೆಗಳು ಮತ್ತು ಅಭಿವೃದ್ಧಿ ಕೆಲಸಗಳೊಂದಿಗೆ ಮಾಜಿ ಸಿಎಂ ಠಾಕ್ರೆ ಅವರ ಬಳಿಗೆ ಹೋಗಿದ್ದೆವು. ಅಲ್ಲದೆ, ನಾವು ಬಿಜೆಪಿ ಜೊತೆ ಸಹಜ ಮೈತ್ರಿಗೆ ಬೇಡಿಕೆ ಇಟ್ಟಿದ್ದೇವೆ ಎಂದರು.


ನಾವು ತೆಗೆದುಕೊಂಡಿರುವ ನಿರ್ಧಾರವು ಬಾಳಾಸಾಹೇಬರ ಹಿಂದುತ್ವಕ್ಕೆ ಮತ್ತು ನಮ್ಮ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಬದ್ಧವಾಗಿದೆ. ನಮ್ಮೊಂದಿಗೆ 50 ಶಾಸಕರಿದ್ದಾರೆ. 


ಬಿಜೆಪಿ 120 ಶಾಸಕರನ್ನು ಹೊಂದಿದ್ದರೂ ದೇವೇಂದ್ರ ಫಡ್ನವೀಸ್ ಸಿಎಂ ಸ್ಥಾನಕ್ಕೇರಲಿಲ್ಲ. ಅವರು ಉದಾರತೆ ತೋರಿ ಬಾಳಾಸಾಹೇಬರ ಸೈನಿಕರನ್ನು (ಪಕ್ಷದ ಕಾರ್ಯಕರ್ತ) ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


ಶಿವಸೇನೆಯ 40 ಶಾಸಕರು ಸೇರಿದಂತೆ ಒಟ್ಟು 50 ಶಾಸಕರು ನಮ್ಮೊಂದಿಗಿದ್ದಾರೆ...ಅವರ ನೆರವಿನಿಂದ ನಾವು ಈ ಹೋರಾಟವನ್ನು ಇಲ್ಲಿಯವರೆಗೆ ಮಾಡಿದ್ದೇವೆ...ಈ 50 ಶಾಸಕರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಒಂದು ಚೂರು ಸಹ ಹಾಳಾಗಲು ಮಾಡಲು ನಾನು ಬಿಡುವುದಿಲ್ಲ. ಆ ನಂಬಿಕೆ ನನಗಿದೆ ಎಂದರು. 


ಇದಲ್ಲದೇ ಜುಲೈ 3ರಂದು ಇನ್ನೆರಡು ಬಣಗಳ 3-3 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉಭಯ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿದ್ದು, ಸ್ವಲ್ಪ ಹೊತ್ತಿನಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. 


ಇಂದು ಬಿಜೆಪಿ ಕೋಟಾದಿಂದ ಗಿರೀಶ್ ಮಹಾಜನ್, ಪ್ರವೀಣ್ ದಾರೆಕರ್, ಸುಧೀರ್ ಮಂಗಂಟಿವಾರ್, ಚಂದ್ರಕಾಂತ್ ಪಾಟೀಲ್ ಸಚಿವರಾಗಬಹುದು. ಇದೇ ವೇಳೆ ಶಿಂಧೆ ಬಣದಿಂದ ಭರತ್ ಗೊಗವಾಲೆ, ಉದಯ್ ಸಾಮಂತ್, ತಾನಾಜಿ ಸಾವಂತ್, ಸಂಜಯ್ ಶಿರ್ಸಾತ್ ಮತ್ತು ಸಂದೀಪನ್ ಬುಮ್ರೆನನ್ನ ಸಚಿವರನ್ನಾಗಿ ಮಾಡಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.