Madras HC ಕಟು ಟಿಪ್ಪಣಿ ಪ್ರಶ್ನಿಸಿ SC ತಲುಪಿದ Election Commission ಕಾರಣ ಇಲ್ಲಿದೆ
EC Approaches SC Against Madras HC - ಏಪ್ರಿಲ್ 26ರಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ, ಕೊರೊನಾದಿಂದ ಬಿಗಡಾಯಿಸಿದ ಪರಸ್ಥಿತಿ ಹಿನ್ನೆಲೆ ಚುನಾವಣಾ ಆಯೋಗದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಕೇವಲ ಚುನಾವಣಾ ಆಯೋಗದ ಕಾರಣ ದೇಶದಲ್ಲಿ ಎರಡನೇ ಕೊರೊನಾ ಅಲೆ ಸೃಷ್ಟಿಯಾಗಿದೆ ಎಂದು ಅವರು ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದರು.
ನವದೆಹಲಿ: EC Approaches SC Against Madras HC - ಮದ್ರಾಸ್ ಹೈಕೋರ್ಟ್‌ನ ಕಟು ಟಿಪ್ಪಣಿಯ ವಿರುದ್ಧ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ (Supreme Court Of India) ಕದ ತಟ್ಟಿದೆ. ಕರೋನದ ಎರಡನೇ ಅಲೆಗೆ ಹೈಕೋರ್ಟ್ ಚುನಾವಣಾ ಆಯೋಗವನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಿದೆ. ಅಲ್ಲದೆ, ಆಯೋಗದ ಅಧಿಕಾರಿಗಳನ್ನು ಹತ್ಯೆಯ ಆರೋಪದ ಹಿನ್ನೆಲೆ ವಿಚಾರಣೆಗೆ ಒಳಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಕದ ತಟ್ಟಿರುವ ಚುನಾವಣಾ ಆಯೋಗ , ಒಂದು ಸಾಂವಿಧಾನಿಕ ಸಂಸ್ಥೆ ಮತ್ತೊಂದು ಸಾಂವಿಧಾನಿಕ ಸಂಸ್ಥೆಯ ಮೇಲೆ ಈ ರೀತಿಯ ಟಿಪ್ಪಣೆ ಮಾಡುವುದು ಉಚಿತವಲ್ಲ ಎಂದು ವಾದಿಸಿದೆ.
ಏಪ್ರಿಲ್ 26ರಂದು ಮದ್ರಾಸ್ ಹೈಕೋರ್ಟ್ (Madras High Court) ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ, ಕೊರೊನಾದಿಂದ ಬಿಗಡಾಯಿಸಿದ ಪರಸ್ಥಿತಿ ಹಿನ್ನೆಲೆ ಚುನಾವಣಾ ಆಯೋಗದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಕೇವಲ ಚುನಾವಣಾ ಆಯೋಗದ ಕಾರಣ ದೇಶದಲ್ಲಿ ಎರಡನೇ ಕೊರೊನಾ (Coronavirus) ಅಲೆ ಸೃಷ್ಟಿಯಾಗಿದೆ ಎಂದು ಅವರು ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಲ್ಲದೆ ಆಯೋಗ ಚುನಾವಣೆಗಳ ಸಂದರ್ಭದಲ್ಲಿ ಕೊವಿಡ್ (Covid-19) ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ವಿಫಲವಾಗಿದೆ . ಈ ಹಿನ್ನೆಲೆ ಚುನಾವಣಾ ಅಧಿಕಾರಿಗಳ ಮೇಲೆ ಹತ್ಯೆಯ ಪ್ರಕರಣ ದಾಖಲಿಸಬೇಕು ಎಂದು ಅವರು ಹೇಳಿದ್ದರು.
ಅಮಿತ್ ಶರ್ಮಾ ಹೆಸರಿನ ವಕೀಲರೊಬ್ಬರ ಮೂಲಕ ದಾಖಲಿಸಲಾಗಿರುವ ಈ ಅರ್ಜಿಯಲ್ಲಿ ಚುನಾವಣಾ ಆಯೋಗ (Election Commission Of India), "ಚುನಾವಣೆಗಳನ್ನು ಆಯೋಜಿಸುವುದು ಆಯೋಗದ ಪ್ರಜಾತಾಂತ್ರಿಕ ಹಾಗೂ ಸಾಂವಿಧಾನಿಕ ಹೊಣೆಗಾರಿಕೆಯಾಗಿದೆ ಎಂದಿದೆ. ಜೊತೆಗೆ ಹೈಕೋರ್ಟ್ ರೀತಿಯೇ ಚುನಾವಣಾ ಆಯೋಗ ಕೂಡ ಒಂದು ಸಾಂವಿಧಾನಿಕ ಸಂಸ್ಥೆಯಾಗಿದೆ. ಈ ರೀತಿ ಒಂದು ಸಾಂವಿಧಾನಿಕ ಸಂಸ್ಥೆ ಮತ್ತೊಂದು ಸಾಂವಿಧಾನಿಕ ಸಂಸ್ಥೆಯ ಕುರಿತು ಟಿಪ್ಪಣಿ ಮಾಡುವುದು ಉಚಿತವಲ್ಲ. ಇದರಿಂದ ಎರಡೂ ಸಂಸ್ಥೆಗಳ ಪ್ರತಿಷ್ಠೆಗೆ ಧಕ್ಕೆ ಉಂಟಾಗುತ್ತದೆ" ಎಂದಿದೆ.
ಇದನ್ನೂ ಓದಿ- ಕೊರೊನಾ ಎರಡನೇ ಅಲೆ ತಡೆಯಲು ಆಕ್ರಮಣಕಾರಿ ಲಾಕ್ ಡೌನ್ ಅಗತ್ಯ -ಏಮ್ಸ್ ಮುಖ್ಯಸ್ಥ
ಹೈಕೋರ್ಟ್ ನ ಈ ರೀತಿಯ ಟಿಪ್ಪಣಿಯ ಬಳಿಕ ಹಲವರು ಆಯೋಗದ ಮೇಲೆ ಹತ್ಯೆಯ ಪ್ರಕರಣ ದಾಖಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಇದಲ್ಲದೆ ಈ ರೀತಿಯ ಪ್ರಕರಣಗಳಲ್ಲಿ ಮಾಧ್ಯಮದವರು ಕೇವಲ ಔಪಚಾರಿಕ ಆದೇಶಗಳ ಕುರಿತು ಮಾತ್ರ ವರದಿಗಾರಿಕೆ ಮಾಡಬೇಕು ಎಂಬುದನ್ನು ನ್ಯಾಯಪೀಠ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ವಾದ-ಪ್ರತಿವಾದದ ಸಂದರ್ಭದಲ್ಲಿ ನಡೆದ ವಕೀಲರ ಮೌಖಿಕ ಟಿಪ್ಪಣಿಗಳ ಸಂಚಲನಾತ್ಮಕ ವರದಿಗಾರಿಗೆ ಮಾಡಬಾರದು ಎಂದು ಕೋರಿದೆ.
ಇದನ್ನೂ ಓದಿ- ವಿದೇಶದಲ್ಲಿ ಕೊರೊನಾ ಲಸಿಕೆ ಉತ್ಪಾದನೆಗೆ ಮುಂದಾದ Serum Institute
ಇದಕ್ಕೂ ಮೊದಲು ಆಯೋಗ ಮದ್ರಾಸ್ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಹಾಗೂ ಜಸ್ಟಿಸ್ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರನ್ನೊಳಗೊಂಡ ಪೀಠಕ್ಕೆ ಪ್ರಕರಣದಲ್ಲಿ ಸ್ಪಷ್ಟೀಕರಣ ನೀಡುವಂತೆ ಆಯೋಗ ಆಗ್ರಹಿಸಿತ್ತು. ವಿಪರೀತ ಪರಿಸ್ಥಿತಿಗಳಲ್ಲಿ ಚುನಾವಣೆಗಳನ್ನು ಆಯೋಜಿಸುವುದು ಒಂದು ಸವಾಲಿನ ಪ್ರಶ್ನೆಯಾಗಿತ್ತು ಮತ್ತು ಆಯೋಗ ಅದನ್ನು ನೆರವೇರಿಸಿದೆ. ಆದರೆ, ಹೈ ಕೋರ್ಟ್ ಇದನ್ನು ಅಲ್ಲಗಳೆದಿತ್ತು. ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಚುನಾವಣಾ ಆಯೋಗದ ಈ ಅರ್ಜಿಯ ಕುರಿತು ಸುಪ್ರೀಂ ನ್ಯಾಯಮೂರ್ತಿ ಜಸ್ಟಿಸ್ ಡಿ.ವೈ ಚಂದ್ರಚೂಡ್ ಹಾಗೂ ಎಂ. ಆರ್ ಷಾಹ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಲಿದೆ. ಕೊವಿಡ್ ಗೆ ಸಂಬಂಧಿಸಿದ ಮತ್ತೊಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಶುಕ್ರವಾರ ಮಾತನಾಡಿರುವ ಜಸ್ಟಿಸ್ ಚಂದ್ರಚೂಡ್, ನ್ಯಾಯಾಧೀಶರು ಅನೈಚ್ಚಿಕ ಟಿಪ್ಪಣಿಗಳನ್ನು ಮಾಡುವುದರಿಂದ ದೂರವಿರಬೇಕು ಎಂದಿದ್ದರು.
ಇದನ್ನೂ ಓದಿ- Good News: ಭಾರತ ತಲುಪಿದ ರಷ್ಯಾದ ಕೊರೊನಾ ಲಸಿಕೆ Sputnik V First Consignment
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.