ನವದೆಹಲಿ : 2022ರಲ್ಲಿ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಚುನಾವಣಾ(Chief Election Commissioner) ಆಯುಕ್ತ, ಬಿಹಾರ ಹಾಗೂ ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆ ಆಯೋಜನೆ ನಂತರ 2022ರಲ್ಲಿ ಚುನಾವಣೆ ನಡೆಸಲು ಆಯೋಗ ಸಜ್ಜಾಗಿದೆ. ಕೋವಿಡ್ 19 ನಡುವೆ ಸುರಕ್ಷಿತ ಕ್ರಮ ಅನುಸರಿಸುವ ವಿಧಾನವನ್ನು ಅಧಿಕಾರಿಗಳು ಕಂಡು ಕೊಂಡಿದ್ದಾರೆ. ಅತ್ಯಂತ ಯಶಸ್ವಿಯಾಗಿ ಚುನಾವಣೆ ಪ್ರಕ್ರಿಯೆ ನಡೆಸುವ ವಿಶ್ವಾಸ ಆಯೋಗಕ್ಕಿದೆ ಎಂದಿದ್ದಾರೆ.


ಇದನ್ನೂ ಓದಿ : ವೈಜ್ಞಾನಿಕವಾಗಿ ಸಾಬೀತಾಗುವವರೆಗೆ ಲಸಿಕೆಯನ್ನು ಮಿಶ್ರಣ ಮಾಡುವ ಪ್ರಶ್ನೆಯೇ ಇಲ್ಲ ಎಂದ ಕೇಂದ್ರ


ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ, ಪುದುಚೇರಿ ಅಲ್ಲದೆ ದೇಶದ ವಿವಿಧೆಡೆ ಉಪ ಚುನಾವಣೆಗಳನ್ನು ಕೋವಿಡ್ 19(COVID-19) ಸಾಂಕ್ರಾಮಿಕದ ನಡುವೆ ಆಯೋಜಿಸಲಾಗಿತ್ತು. ಹೆಚ್ಚಿನ ಹಾನಿಯಾಗದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿತ್ತು. ಇದಕ್ಕೆ ಸಾರ್ವಜನಿಕರು ಸಹಕರಿಸಿದ್ದರು.


ಇದನ್ನೂ ಓದಿ : Sputnik V Vaccines : ಭಾರತಕ್ಕೆ ತಲುಪಿದ 3 ಮಿಲಿಯನ್ ಸ್ಪುಟ್ನಿಕ್ V ಲಸಿಕೆ!


2022ರಲ್ಲಿ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್ ಮತ್ತು ಗುಜರಾತ್ ಸೇರಿದಂತೆ ಹಲವಾರು ವಿಧಾನಸಭಾ ಚುನಾವಣಾ ಯುದ್ದಕ್ಕೆ ಬಿಜೆಪಿ(BJP) ಸಜ್ಜಾಗುತ್ತಿರುವ ಸುದ್ದಿ ಬಂದ ಬೆನ್ನಲ್ಲೇ ಚುನಾವಣಾ ಆಯೋಗ ಕೂಡಾ ನಿಗದಿಯಂತೆ ಚುನಾವಣೆ ನಡೆಸಲು ಮುಂದಾಗಿರುವ ಸುದ್ದಿ ಬಹಿರಂಗವಾಗಿದೆ.


ಇದನ್ನೂ ಓದಿ : ಕೊರೊನಾದಿಂದ ಅನಾಥರಾದ ಮಕ್ಕಳಿಗಿರುವ ಯೋಜನೆಗಳ ವಿವರ ಕೋರಿದ ಸುಪ್ರೀಂ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ