ನವದೆಹಲಿ: ಚುನಾವಣಾ ಆಯೋಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಹಣ ಬಳಕೆ ತಡೆಗೆ ಉನ್ನತ ಸಮಿತಿಯೊಂದನ್ನು ರಚನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಮೂಲಗಳ ಪ್ರಕಾರ ಹಣಕಾಸು ಸೇವೆಗಳ ಸದಸ್ಯರು ಮತ್ತು ರಕ್ಷಣಾ ಏಜೆನ್ಸಿಗಳ ಸದಸ್ಯರು ಉನ್ನತ ಸಮಿತಿಯ ಭಾಗವಾಗಿರಲಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈ ಉನ್ನತ ಸಮಿತಿಯನ್ನು ಚುನಾವಣಾ ಬೌದ್ದಿಕತೆಯ ಬಹು ಇಲಾಖೆ ಎಂದು ಕರೆಯಲಾಗಿದೆ. ಇದರಲ್ಲಿ ಕೇಂದ್ರೀಯ ನೇರ ತೆರಿಗೆ ಬೋರ್ಡ್ ನ ಅಧಿಕಾರಿಗಳು, ಪರೋಕ್ಷ ತೆರಿಗೆ ಅಧಿಕಾರಿಗಳು, ಜಾರಿ ನಿರ್ದೇಶನಾಲಯ, ಕಂದಾಯ ನಿರ್ದೇಶನಾಲಯ, ,ಕೇಂದ್ರೀಯ ಆರ್ಥಿಕ ಗುಪ್ತಚರ ದಳ ಮತ್ತು ಆರ್ಥಿಕ ಗುಪ್ತಚರ ಘಟಕಗಳು ಕೂಡ ಒಳಗೊಳ್ಳಲಿವೆ ಎನ್ನಲಾಗಿದೆ.


ಈ ಉನ್ನತ ಸಮಿತಿಯಲ್ಲಿ ಬಿಎಸ್ಎಫ್ ಡಿಜಿ ರಜನಿ ಕಾಂತ್ ಮಿಶ್ರಾ, ಸಿಆರ್ಪಿಎಫ್ ಡಿ.ಜಿ. ರಾಜೀವ್ ಭಟ್ನಾಗರ್, ಸಿಐಎಸ್ಎಫ್ ಡಿಜಿ ರಾಜೇಶ್ ರಂಜನ್, ಸಶಸ್ತ್ರ ಸೀಮಾ ಬಲ ಡಿ.ಜಿ. ಎಸ್. ದೆಶ್ವಾಲ್, ಮಾದಕ ವಸ್ತು ನಿಯಂತ್ರಣ ದಳದ ಡಿ.ಜಿ. ಅಭಯ್ ಕುಮಾರ್, ಆರ್ಪಿಎಫ್ ಡಿ.ಜಿ. ಅರುಣ್ ಕುಮಾರ್ ಮತ್ತು ನಾಗರಿಕ ವಿಮಾನಯಾನ ಭದ್ರತಾ ಡಿ.ಜಿ. ರಾಕೇಶ್ ಅಸ್ತಾನಾ ಅವರು ಈ ಸಮಿತಿಯ ಆಹ್ವಾನಿತ ಸದಸ್ಯರಾಗಿರುತ್ತಾರೆ ಎಂದು ಉನ್ನತ ಸಮಿತಿ ತಿಳಿಸಿದೆ.


ಈ ಉನ್ನತ ಸಮಿತಿಯು ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಹಣದ ಬಳಕೆ ಮೇಲೆ ನಿಯಂತ್ರಣ ತರುವ ನಿಟ್ಟಿನಲ್ಲಿ ಈ ಸಮಿತಿಯನ್ನು ಚುನಾವಣಾ ಯೋಗ ರಚನೆ ಮಾಡಿದೆ.ಅಕ್ರಮ ಹಣದ ಬಳಕೆ ವಿಚಾರದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ತಮಿಳುನಾಡು ರಾಜ್ಯಗಳ ಪಾಲು ಅಧಿಕವಿರುವುದರಿಂದ ಚುನಾವಣಾ ಆಯೋಗ ಈ ರಾಜ್ಯಗಳ ಮೇಲೆ ಹೆಚ್ಚಿನ ನಿಗಾವಹಿಸಲಿದೆ ಎನ್ನಲಾಗಿದೆ.