ನವದೆಹಲಿ: ಬುಧವಾರ ಮತದಾರರ ಪರಿಶೀಲನಾ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಬಗೆಗಿನ ಪ್ರತಿಪಕ್ಷದ ಬೇಡಿಕೆಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. 


COMMERCIAL BREAK
SCROLL TO CONTINUE READING

ಮಂಗಳವಾರದಂದು 22 ಪ್ರತಿಪಕ್ಷಗಳನೋಳಗೊಂಡ ನಿಯೋಗವು ಚುನಾವಣಾ ಆಯೋಗಕ್ಕೆ ಭೇಟಿ ಮಾಡಿ ಇವಿಎಂ ಕಾರ್ಯಚಟುವಟಿಕೆ ಬಗ್ಗೆ ದೂರನ್ನು ದಾಖಲಿಸಿ ಹಲವು ಬೇಡಿಕೆಗಳನ್ನು ಆಯೋಗದ ಮುಂದೆ ಇಟ್ಟಿತ್ತು. ಅದರಲ್ಲಿ ಪ್ರಮುಖವಾಗಿ ವಿವಿಪ್ಯಾಟ್ ತುಲನೆಯನ್ನು ಮತ ಎಣಿಕೆಗೂ ಮೊದಲು ಪ್ರತಿ ಅಸೆಂಬ್ಲಿ ವಿಭಾಗದಲ್ಲಿ ಐದು ಮತದಾನ ಕೇಂದ್ರಗಳಲ್ಲಿ ಇವಿಎಂ ಗಳೊಂದಿಗೆ ತಾಳೆ ನೋಡಬೇಕು ಎಂದು ಆಗ್ರಹಿಸಿತ್ತು. 


ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ ವಿವಿಪ್ಯಾಟ್ ಪರಿಶಿಳನೆಯನ್ನು ಮತ ಎಣಿಕೆ ನಂತರ ಮಾಡಲಾಗುವುದು ಎಂದು ಹೇಳಿತು.ಸುಪ್ರೀಂ ಕೋರ್ಟ್ ನ ಆದೇಶದ ಹಿನ್ನಲೆಯಲ್ಲಿ ಈಗ ವಿವಿಪ್ಯಾಟ್ ತುಲನೆ ಕಡ್ಡಾಯವಾಗಿದೆ. ಆದರೆ ಪ್ರತಿಪಕ್ಷಗಳು ಮತ ಎಣಿಕೆಗೂ ಮೊದಲು ವಿವಿಪ್ಯಾಟ್ ತುಲನೆ ಮಾಡಲು ಆಗ್ರಹಿಸಿದ್ದವು. ಇನ್ನೊಂದೆಡೆಗೆ ವಿವಿಪ್ಯಾಟ್ ನಲ್ಲಿ ಯಾವುದಾರರೂ ಲೋಪ ಕಂಡು ಬಂದಲ್ಲಿ ಅಸೆಂಬ್ಲಿ ವಿಭಾಗದಲ್ಲಿ ಬರುವ ಎಲ್ಲ ಮತದಾನ ಕೇಂದ್ರಗಳಲ್ಲಿ ಶೇ 100 ರಷ್ಟು ವಿವಿಪ್ಯಾಟ್ ಪೇಪರ್ ಸ್ಲಿಪ್ ಗಳನ್ನು ಎನಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು.ಆದರೆ ಈ ಎಲ್ಲ ಬೇಡಿಕೆಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.


ಸುಪ್ರೀಂಕೋರ್ಟ್ ಮುಂದೆ ವಿವಿಪಪ್ಯಾಟ್ ತುಲನೆಯು ಮತ ಎಣಿಕೆವೇಳೆ ಅಧಿಕ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ಚುನಾವಣಾ ಆಯೋಗ ವಾದಿಸಿತ್ತು. ಆದರೆ ವಿವಿಪ್ಯಾಟ್ ತುಲನೆಯು ಮತದಾರರಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ನೆಮ್ಮದಿಯನ್ನು ನೀಡುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.