ಕಾಂಗ್ರೆಸ್ ಶಾಸಕ ಕವಾಸಿ ಲಖ್ಮಾಗೆ ಚುನಾವಣಾ ಆಯೋಗ ನೋಟಿಸ್
ಶಾಸಕ ಕವಾಸಿ ಅವರಿಗೆ ರಾಜ್ಯ ಚುನಾವಣಾಧಿಕಾರಿಗಳು ನೋಟಿಸ್ ನೀಡಿದ್ದು, ಮೂರು ದಿನಗಳೊಳಗೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದ್ದಾರೆ.
ನವದೆಹಲಿ: ಇವಿಎಂ ಬಟನ್ ಬಗ್ಗೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಚತ್ತೀಸ್ಗಢದ ಕಾಂಗ್ರೆಸ್ ಶಾಸಕ ಕವಾಸಿ ಲಖ್ಮಾಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಶಾಸಕ ಕವಾಸಿ ಅವರಿಗೆ ರಾಜ್ಯ ಚುನಾವಣಾಧಿಕಾರಿಗಳು ನೋಟಿಸ್ ನೀಡಿದ್ದು, ಮೂರು ದಿನಗಳೊಳಗೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದ್ದಾರೆ.
ಚತ್ತೀಸ್ಗಢದ ಕಾಂಕರ್ ಜಿಲ್ಲೆಯ ಕೋರಾರ್ನಲ್ಲಿ ನಡೆದ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ, ಇವಿಎಂ ನ ಎರಡನೇ ಬಟನ್ ಒತ್ತುವ ಮೂಲಕ ಮತದಾರರು ವಿದ್ಯುತ್ ಶಾಕ್ ಅನುಭವಿಸಲಿದ್ದಾರೆ ಎಂದು ಲಖ್ಮಾ ಹೇಳಿದ್ದರು.
ಇ.ವಿ.ಎಂ ಕಾರ್ಯಚಟುವಟಿಕೆಯ ಬಗ್ಗೆ ಲಖ್ಮಾ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಲಖ್ಮಾಗೆ ನೋಟಿಸ್ ಜಾರಿ ಮಾಡಿದೆ.