ನವದೆಹಲಿ: Election Commission Of India - ತೃಣಮೂಲ ಕಾಂಗ್ರೆಸ್ (TMC) ದೂರಿನ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರವನ್ನು ಕೋವಿಡ್ -19 ವ್ಯಾಕ್ಸಿನೇಷನ್ (Covid-19 Vaccination) ಪ್ರಮಾಣಪತ್ರದಿಂದ ತೆಗೆದುಹಾಕುವಂತೆ ಚುನಾವಣಾ ಆಯೋಗ (Election Commission) ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸೂಚಿಸಿದೆ. ಕೋವಿಡ್ -19 (Covid-19)ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಪಿಎಂ ಮೋದಿಯವರ (Prime Minister Narendra Modi) ಛಾಯಾಚಿತ್ರ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು TMC ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಕುರಿತು ಚುನಾವಣಾ ಆಯೋಗವು ಚುನಾವಣಾ ನಿಯಮಗಳನ್ನು ಅಕ್ಷರಶಃ ಪಾಲಿಸುವಂತೆ ಆರೋಗ್ಯ ಸಚಿವಾಲಯಕ್ಕೆ ಆದೇಶ ನೀಡಿದೆ. ಆರೋಗ್ಯ ಸಚಿವಾಲಯಕ್ಕೆ ಕಳುಹಿಸಿದ ಪತ್ರದಲ್ಲಿ, ಚುನಾವಣಾ ಆಯೋಗವು ಸರ್ಕಾರದ ಖರ್ಚಿನ ಮೇಲೆ ಜಾಹೀರಾತನ್ನು ನಿಷೇಧಿಸುವ ನೀತಿ ಸಂಹಿತೆಯ ಕೆಲವು ನಿಬಂಧನೆಗಳನ್ನು ಉಲ್ಲೇಖಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಪ್ರಧಾನಿ ಮೋದಿ ಹಾಗೂ ವಿಜಯ್ ವರ್ಗಿಯಾ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು


ಚುನಾವಣಾ ಆಯೋಗ ಮತ್ತು ಸಚಿವಾಲಯದ ನಡುವಿನ ಸಂವಹನದ ಬಗ್ಗೆ ತಿಳಿದಿರುವ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಚುನಾವಣಾ ಆಯೋಗವು ಯಾವುದೇ ವ್ಯಕ್ತಿ ಅಥವಾ ವ್ಯಕ್ತಿತ್ವವನ್ನು ಉಲ್ಲೇಖಿಸಿಲ್ಲ, ಆದರೆ ನೀತಿ ಸಂಹಿತೆಯ ನಿಬಂಧನೆಗಳನ್ನು ಅಕ್ಷರಶಃ ಪಾಲಿಸುವಂತೆ ಆರೋಗ್ಯ ಸಚಿವಾಲಯಕ್ಕೆ ಹೇಳಿದೆ. ಇದಕ್ಕಾಗಿ ಇದೀಗ ಆರೋಗ್ಯ ಸಚಿವಾಲಯ ಫಿಲ್ಟರ್‌ಗಳನ್ನು ಬಳಸಬೇಕಾಗಲಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲಿ (ಚುನಾವಣೆಗಳು ನಡೆಯಬೇಕಿರುವ ರಾಜ್ಯಗಳು) ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ಇರುವುದಿಲ್ಲ. ಈ ಫಿಲ್ಟರ್ ಅನ್ನು ಸಿಸ್ಟಮ್‌ಗೆ ಅಪ್‌ಲೋಡ್ ಮಾಡಲು ಸಮಯ ಬೇಕಾಗಲಿದೆ. 


ಇದನ್ನೂ ಓದಿ- "ಪ್ರಧಾನಿ ಮೋದಿಯ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸುವುದು ಗಂಗೂಲಿಗೆ ಬಿಟ್ಟದ್ದು"


ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ (Trinamool Congress) ಮಂಗಳವಾರ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು . ತನ್ನ ದೂರಿನಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಇತರೆ ಚುನಾವಣಾ ರಾಜ್ಯಗಳಲ್ಲಿ ಕೊವಿನ್ ಮೂಲಕ ನೀಡಲಾಗುವ ಕೊವಿಡ್-19 ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು. ಭಾರತೀಯ ಜನತಾಪಕ್ಷ ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ತೃಣಮೂಲ ಕಾಂಗ್ರೆಸ್ ತನ್ನ ದೂರಿನಲ್ಲಿ ಆರೋಪಿಸಿತ್ತು. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೆರಿಗಳಲ್ಲಿ ವಿಧಾನ ಸಭೆಯ ಚುನಾವಣೆಗಳಿಗೆ ದಿನಾಂಕಗಳ ಘೋಷಣೆಯ ಬೆನ್ನಲ್ಲೇ ಫೆಬ್ರುವರಿ 26ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. 


ಇದನ್ನು ಓದಿ - ಮೇ 2 ಕ್ಕೆ ಡೆಡ್ ಲೈನ್ ನೀಡಿದ ಚುನಾವಣಾ ಚತುರ...!