ನವದೆಹಲಿ: ಬೋರ್ಡಿಂಗ್ ಪಾಸ್ ಹಾಗೂ ಚಹಾ ಕಪ್ ಮೇಲೆ ಮೈ ಭಿ ಚೌಕಿದಾರ್ ಘೋಷಣೆ ಜೊತೆಗೆ ಮೋದಿ ಫೋಟೋ ಪ್ರಕಟಿಸಿದ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯಕ್ಕೆ ನೋಟಿಸ್ಗಳನ್ನು ಕಳುಹಿಸಿದೆ.ಈಗ ಎರಡು ಸಚಿವಾಲಯಗಳು ಶನಿವಾರದಂದು ಪ್ರತಿಕ್ರಿಯೆ ನೀಡಬೇಕಾಗಿದೆ.



COMMERCIAL BREAK
SCROLL TO CONTINUE READING

ಮಾರ್ಚ್ 25 ರಂದು ಏರ್ ಇಂಡಿಯಾದ ಪ್ರಯಾಣಿಕನೊಬ್ಬನು ಮೋದಿ ಚಿತ್ರವಿರುವ ಬೋರ್ಡಿಂಗ್ ಪಾಸ್ ಗಳನ್ನು ಟ್ವೀಟ್ ಮಾಡಿದ್ದನ್ನು ನಂತರ ಈ ಟ್ವೀಟ್ ವೈರಲ್ ಆದ ಹಿನ್ನಲೆಯಲ್ಲಿ ತಕ್ಷಣ ಎಚ್ಚೆತ್ತುಕೊಂಡ ಏರ್ ಲೈನ್ ಬೋರ್ಡಿಂಗ್ ಪಾಸ್ ಗಳನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು. ಇದಾದ ನಂತರವೂ ಏರ್ ಇಂಡಿಯಾದ ಮತ್ತೊಬ್ಬ ಪ್ರಯಾಣಿಕ ಮಧುರೈನಿಂದ ಪ್ರಯಾಣಿಸುತ್ತಿದ್ದ ಪ್ರಧಾನಿ ಮೋದಿ ಹಾಗೂ ರುಪಾನಿ ಚಿತ್ರವಿರುವ ವೈಬ್ರಂಟ್ ಗುಜರಾತ್ ನ ಜಾಹಿರಾತು ಇರುವ ಪಾಸ್ ಗಳನ್ನು ಟ್ವೀಟ್ ಮಾಡಿ ಚುನಾವಣಾ ನೀತಿ ಸಂಹಿತೆಯನ್ನು ಇದು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದರು.



ಇನ್ನೊಂದು ವಿವಾದ ಕಥಗೊಡಂನ ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಟಿ ಕಪ್ ಮೇಲೆ ಮೈ ಬಿ ಚೌಕಿದಾರ್ ಘೋಷಣೆ ಇರುವ ಕಪ್ ನ್ನು ರೈಲ್ವೆಯಲ್ಲಿ ಸರಬರಾಜು ಮಾಡಲಾಗಿತ್ತು.ಆದರೆ ನಂತರ ಐಆರ್ಸಿಟಿಸಿ ಈ ಕಪ್ ಗಳನ್ನು ಸ್ಥಗಿತಗೊಳಿಸಿದ್ದಲ್ಲದೆ ಟೆಕೆದಾರನಿಗೆ 1ಲಕ್ಷ ರೂ ದಂಡವನ್ನು ವಿಧಿಸಿತ್ತು.ಈಗ ಎರಡು ಘಟನೆಗಳ ಹಿನ್ನಲೆಯಲ್ಲಿ ದೂರು ಬಂದ ಹಿನ್ನಲೆಯಲ್ಲಿ ಈಗ ಚುನಾವಣಾ ಆಯೋಗ ಎರಡು ಸಚಿವಾಲಯದಿಂದ ಉತ್ತರ ಕೇಳಿದೆ.ಈ ಹಿನ್ನಲೆಯಲ್ಲಿ ಈಗ ಎರಡು ಸಚಿವಾಲಯಗಳು ಶನಿವಾರದಂದು ಉತ್ತರ ನೀಡಬೇಕಾಗಿದೆ.