ನವದೆಹಲಿ: ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿರುವ 750 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ನಡೆಯುತ್ತಿದ್ದು, ಆಯಾ ಸ್ಥಾನಗಳಿಂದ ನೇರ ಅಥವಾ ತ್ರಿಕೋನ ಸ್ಪರ್ಧೆಗಳಲ್ಲಿ ಲಾಕ್ ಆಗಿರುವ ಅಭ್ಯರ್ಥಿಗಳ ಭವಿಷ್ಯವನ್ನು ಈಗ ಇವಿಎಮ್ ಗಳಲ್ಲಿ ಭದ್ರವಾಗಿದೆ.


COMMERCIAL BREAK
SCROLL TO CONTINUE READING

ಸಂಜೆ 5 ಗಂಟೆಗೆ, ಈ ಕೆಳಗಿನ ರಾಜ್ಯಗಳಲ್ಲಿ ಅಸ್ಸಾಂ (78.94%), ಕೇರಳ (69.95%), ತಮಿಳುನಾಡು (63.47%), ಪಶ್ಚಿಮ ಬಂಗಾಳ (77.68%), ಮತ್ತು ಪುದುಚೇರಿ (77.90%) ರಷ್ಟು ಮತದಾನ ದಾಖಲಾಗಿದೆ.


ಇದನ್ನೂ ಓದಿ: WB, Assam Polling:ಇಂದು ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ


ಬಂಗಾಳದಲ್ಲಿ, ಟಿಎಂಸಿ ನಾಯಕ ಗೌತಮ್ ಘೋಷ್ ಅವರ ನಿವಾಸದಲ್ಲಿ ಮೂರು ಇವಿಎಂಗಳು ಮತ್ತು ನಾಲ್ಕು ವಿವಿಪಿಎಟಿ ಯಂತ್ರಗಳು ಪತ್ತೆಯಾದ ನಂತರ ಚುನಾವಣಾ ಆಯೋಗವು ವಲಯದ ಅಧಿಕಾರಿಯನ್ನು ಅಮಾನತುಗೊಳಿಸಿತು.


ಇದನ್ನೂ ಓದಿ: West Bengal Assembly Election 2021: ರಾಂಪುರದಲ್ಲಿ ಬಾಂಬ್ ಸ್ಫೋಟ, 6 ಬಿಜೆಪಿ ಕಾರ್ಯಕರ್ತರಿಗೆ ಗಾಯ


ಏತನ್ಮಧ್ಯೆ, ಬಿಜೆಪಿ ಕಾರ್ಯಕರ್ತರು ಪಕ್ಷದ ಮುಖಂಡ ಸುಜಾತಾ ಮೊಂಡಾಲ್ ಅವರನ್ನು ಮತದಾನ ಕೇಂದ್ರವೊಂದರ ಬಳಿ ಬೆನ್ನಟ್ಟಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಈ ವಿಚಾರವಾಗಿ ಗಮನ ಹರಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.