'ಚುನಾವಣಾ ನಿರಂಕುಶಾಧಿಕಾರ'ದ ಪರಿಕಲ್ಪನೆಯನ್ನು ಡಾ. ಆಡ್ರಿಯನ್ ಡೆಲ್ ರಿಯೊ ಅವರು ಬೆಕ್ಕು-ನಾಯಿಯ ರಚನೆ ಎಂದು ಕರೆಯುತ್ತಾರೆ. ಅದರಲ್ಲಿ ಒಂದು ಬೆಕ್ಕಾಗಿರಬೇಕು ಇಲ್ಲವೇ ನಾಯಿಯಾಗಿರಬೇಕು,ಆದರೆ ನಾವು ಎರಡನ್ನೂ ಏಕಕಾಲಕ್ಕೆ ಕರೆಯಲು ಸಾಧ್ಯವಿಲ್ಲ.ಇನ್ನೂ ಕೆಲವು ಪಾಶ್ಚಾತ್ಯ ತಜ್ಞರು ಮತ್ತು ರೇಟಿಂಗ್ ಏಜೆನ್ಸಿಗಳು ಬೆಕ್ಕು-ನಾಯಿ ಎಂದು ಕರೆಯಬಹುದು ಎನ್ನುತ್ತಾರೆ.ಆದರೆ ಅಷ್ಟಕ್ಕೂ ನಿಖರವಾಗಿ ಇದು ಏನನ್ನು ಸೂಚಿಸುತ್ತದೆ ಎನ್ನುವುದರಲ್ಲಿಯೇ ತಜ್ಞರಲ್ಲಿ ಗೊಂದಲವಿದೆ.


COMMERCIAL BREAK
SCROLL TO CONTINUE READING

ಒಂದು ದೇಶವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳೊಂದಿಗೆ ಪ್ರಜಾಪ್ರಭುತ್ವವನ್ನು ಹೊಂದಿರಬಹುದು, ಅಥವಾ ಅದು ಒಬ್ಬ ವ್ಯಕ್ತಿಯು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಲ್ಲದೆ ಇರುವ ನಿರಂಕುಶಾಧಿಕಾರವನ್ನು ಹೊಂದಿರಬಹುದು ಎನ್ನುವುದನ್ನು ಸಾಮಾನ್ಯ ಜ್ಞಾನವು ತಿಳಿಸುತ್ತದೆ.ಆದಾಗ್ಯೂ, ಪಾಶ್ಚಿಮಾತ್ಯ 'ತಜ್ಞರು' ನಿಸ್ಸಂಶಯವಾಗಿ ಆಡಳಿತದ ಸ್ವರೂಪವನ್ನು ವರ್ಗೀಕರಿಸಲು ತಮ್ಮ ಹೆಚ್ಚು ಅಸಾಧಾರಣ ಅರ್ಥವನ್ನು ಅವಲಂಬಿಸಿದ್ದಾರೆ, ಹೀಗಾಗಿ ಅವರು ಒಮ್ಮೊಮ್ಮೆ ಇವರೆಡೂ ಇಲ್ಲವೆನ್ನಬಹುದು.


ಆಡಳಿತ ಪಕ್ಷವು ವರ್ಚಸ್ವಿ ನಾಯಕನ ನೇತೃತ್ವ ವಹಿಸಿದಾಗ, ದೇಶವು ನಿರಂಕುಶ ಪ್ರಭುತ್ವವಾಗಿದೆ ಎಂದು ಯಾರಾದರೂ ಹೇಳುತ್ತಾರೆಯೇ ? 1721 ರಿಂದ 1742 ರವರೆಗೆ ಸುಮಾರು 21 ವರ್ಷಗಳ ಕಾಲ ರಾಬರ್ಟ್ ವಾಲ್ಪೋಲ್ ಪ್ರಧಾನಿಯಾಗಿದ್ದಾಗ ಅಥವಾ 1979 ರಿಂದ 1990 ರವರೆಗೆ ಮಾರ್ಗರೆಟ್ ಥ್ಯಾಚರ್ ಪ್ರಧಾನಿಯಾಗಿದ್ದಾಗ ಯುಕೆ ನಿರಂಕುಶಾಧಿಕಾರವಾಯಿತು ಎಂದು ನಾವು ಎಂದಾದರೂ ಹೇಳಿದ್ದೇವೆಯೇ?  ಅದೇ ರೀತಿ ಮಾರ್ಕ್ ರುಟ್ಟೆ 12 ವರ್ಷಗಳಿಂದ ಹಾಲೆಂಡ್‌ನ ಪ್ರಧಾನಿಯಾಗಿದ್ದಾರೆ. ಹಾಲೆಂಡ್ ಚುನಾವಣಾ ನಿರಂಕುಶಾಧಿಕಾರಿಯಾಗಿ ಮಾರ್ಪಟ್ಟಿದೆಯೇ? ಏಂಜೆಲಾ ಮರ್ಕೆಲ್ ಅವರು 22 ನವೆಂಬರ್ 2005 ರಿಂದ 8 ಡಿಸೆಂಬರ್ 2021 ರವರೆಗೆ 16 ವರ್ಷಗಳ ಕಾಲ ಚಾನ್ಸೆಲರ್ ಆಗಿದ್ದಾಗ ಜರ್ಮನಿಯನ್ನು ಚುನಾವಣಾ ನಿರಂಕುಶಾಧಿಕಾರಿಯನ್ನಾಗಿ ಮಾಡಿದ್ದಾರೆಯೇ? ಎನ್ನುವ ಪ್ರಶ್ನೆಗಳು ನಮಗೆ ಮೂಡುತ್ತವೆ.


ಪ್ರಧಾನಿ ಮೋದಿ ಕೇವಲ 8 ವರ್ಷಗಳ ಕಾಲ ಪ್ರಧಾನಿಯಾಗಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಭಾರತದಲ್ಲಿ ಹಲವಾರು ಮುಕ್ತ ಮತ್ತು ನ್ಯಾಯಸಮ್ಮತವಾದ ಕೇಂದ್ರ ಮತ್ತು ರಾಜ್ಯ ಚುನಾವಣೆಗಳು ನಡೆದಿವೆ.ಈ ಪೈಕಿ ಕೆಲವೆಡೆ ಅವರ ಪಕ್ಷ ಸೋತಿದೆ, ಕೆಲವೆಡೆ ಗೆದ್ದಿದೆ.


ಪ್ರಧಾನಿ ಮೋದಿ ಅವರು 2014 ರಲ್ಲಿ ಒಮ್ಮೆ ಮತ್ತು 2019 ರಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಎರಡು ಬಾರಿ ಅಧಿಕಾರಕ್ಕೆ ಬಂದಿದ್ದಾರೆ.


2019 ರಲ್ಲಿ, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) 37.36% ಮತಗಳನ್ನು ಪಡೆದುಕೊಂಡಿತು ಮತ್ತು ಕೆಳಮನೆಯಲ್ಲಿ ಒಟ್ಟು 543 ಸ್ಥಾನಗಳಲ್ಲಿ 353 ಸ್ಥಾನಗಳನ್ನು ಗೆಲ್ಲುವ ಮೂಲಕ ಅವರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 303 ಸ್ಥಾನಗಳನ್ನು ಗೆದ್ದಿತು. ಹಿಂದಿನ 2014 ರ ಚುನಾವಣೆಯಲ್ಲಿ, ಬಿಜೆಪಿ ಶೇ 31% ಮತಗಳೊಂದಿಗೆ  282 ಸ್ಥಾನಗಳನ್ನು ಗೆದ್ದಿದ್ದರೆ, ಅದರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಒಟ್ಟು 336 ಸ್ಥಾನಗಳನ್ನು ಗೆದ್ದಿತ್ತು. ಆದಾಗ್ಯೂ ಚುನಾವಣೆಗಳು ಬಿಜೆಪಿ ಪರವಾಗಿವೆ ಎಂದು ಯಾರೂ ಹೇಳಿಲ್ಲ.


ಆದರೂ, ಭಾರತವನ್ನು 'ಚುನಾವಣಾ ನಿರಂಕುಶಾಧಿಕಾರ' ಎಂದು ಕರೆಯಲಾಗಿದೆ ಏಕೆಂದರೆ,  ಸ್ಥಳೀಯರಾಗಿರುವ ನಾವು ಈ ಪಾಶ್ಚಿಮಾತ್ಯ ತಜ್ಞರು ಮತ್ತು ವಿವಿಧ ರೇಟಿಂಗ್ ಏಜೆನ್ಸಿಗಳಿಂದ ಇನ್ನೂ ಪ್ರಜಾಪ್ರಭುತ್ವದ ಪಾಠಗಳನ್ನು ಕಲಿಯಬೇಕಾಗಿದೆ.


ವಿವರಿಸಲಾಗದದನ್ನು ವಿವರಿಸಲು ನಾವು ಹೊಸ ಪದವನ್ನು ಹುಡುಕುತ್ತಾ ಹೊರಟರೆ, ಈ ಸಂದರ್ಭದಲ್ಲಿ ಅದನ್ನು ನಾವು 'ಚುನಾವಣಾ ಪ್ರಜಾಪ್ರಭುತ್ವ' ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಬೆಕ್ಕು-ನಾಯಿ ಸಂರಚನೆಯು ಬೆಕ್ಕು ಅಥವಾ ನಾಯಿ ಅಲ್ಲ, ಅದೂ ಎರಡನ್ನು ಒಳಗೊಂಡಿರುವ ರಚನೆಯಾಗಿದೆ.ಕೆಲವು ವಿದೇಶಿಗರು ಮತ್ತು ನಮ್ಮ ತಾಳಕ್ಕೆ ತಕ್ಕಂತೆ ಕುಣಿಯಲು ಸಿದ್ಧರಾಗಿರುವ ಕೆಲವು ಭಾರತೀಯರು ಇರುವಾಗ ಈ ಹೈಬ್ರಿಡ್ ನಮ್ಮ ಕಲ್ಪನೆಯಲ್ಲಿ ಮಾತ್ರ ಅಸ್ತಿತ್ವದಲ್ಲಿದೆ ಎನ್ನುವ ಸಂಗತಿ ಅಷ್ಟಾಗಿ ಮುಖ್ಯವೆನಿಸುವುದಿಲ್ಲ.


ಭಾರತದಲ್ಲಿ ಚುನಾವಣೆಗಳು ನಡೆಯುತ್ತಿರುವುದರಿಂದ, ನಾವು ಇದನ್ನು ಪ್ರಜಾಪ್ರಭುತ್ವ ಎನ್ನಬಹುದು.ಪ್ರಧಾನಿ ಮೋದಿ ಅಧಿಕಾರದಲ್ಲಿರುವುದರಿಂದ ಅವರು ತಮಗಿಷ್ಟ ಬಂದ ಹಾಗೆ ನಡೆದುಕೊಳ್ಳಬಹುದುದು ಹೀಗಾಗಿ ಅವರು ಕೆಟ್ಟ ನಿರಂಕುಶಾಧಿಕಾರಿಯಾಗಿರಬೇಕು.ಆದ್ದರಿಂದ, ನಾವು ಇದನ್ನು ಬೆಕ್ಕು-ನಾಯಿ ರಾಜಕೀಯ ವ್ಯವಸ್ಥೆ ಎಂದು ಕರೆಯೋಣ. ಇದಲ್ಲದೆ, ಮೋದಿಯವರ ನಂಬಿಕೆಯ ಬಣ್ಣವನ್ನು ನಾವು ಇಷ್ಟಪಡದಿರುವುದರಿಂದ ಭಾರತೀಯ ಪ್ರಜಾಪ್ರಭುತ್ವ ಮತ್ತು ಭಾರತೀಯ ಮತದಾರರನ್ನು ಅವಹೇಳನ ಮಾಡಲು ಮತ್ತು ನಮ್ಮ ಪಕ್ಷಪಾತವನ್ನು ಹಂಚಿಕೊಳ್ಳುವವರಲ್ಲಿ ಬೆಂಬಲವನ್ನು ಕಂಡುಕೊಳ್ಳಲು ನಮಗೆ ಇನ್ನಷ್ಟು ಸುಲಭವಾಗುತ್ತದೆ.


ವರ್ಣಭೇದ ನೀತಿ ಮತ್ತು ಬೂಟಾಟಿಕೆಗಳನ್ನು ಒಂದೆಡೆ ಸೇರಿಸಿದರೆ ಅದು 'ಜನಾಂಗೀಯ-ಬೂಟಾಟಿಕೆ'ಯ ಉಗಮಕ್ಕೆ ಕಾರಣವಾಗುತ್ತದೆ.ಇದು ಬೆಕ್ಕು-ನಾಯಿಗಿಂತ ಹೆಚ್ಚು ನೈಜವಾದ ಹೇಸರಗತ್ತೆಯಂತೆಯೇ ಇರುತ್ತದೆ. ಹೇಸರಗತ್ತೆಯು ಕತ್ತೆ ಮತ್ತು ಹೆಣ್ಣು ಕುದುರೆಯ ಸಾಮ್ಯತೆಯನ್ನೊಳಗೊಂಡ ಹೈಬ್ರಿಡ್ ಸಂತತಿಯಾಗಿದೆ ಮತ್ತು ಮೇಲಾಗಿ ಸುಲಭವಾಗಿ ದಕ್ಕಬಹುದಾದ ಪ್ರಾಣಿಯಾಗಿದೆ. ವಾಸ್ತವವಾಗಿ ಜನಾಂಗೀಯ-ಕಪಟಿಗಳು ಚುನಾವಣಾ ನಿರಂಕುಶಾಧಿಕಾರಿಗಳಿಗಿಂತ ಹೆಚ್ಚು ನೈಜರಾಗಿರುತ್ತಾರೆ.


ಈ ಹೋಲಿಕೆ ಹೈಬ್ರಿಡ್ ರೇಟಿಂಗ್ ಏಜೆನ್ಸಿಗಳ ಚುಕ್ಕಾಣಿ ಹಿಡಿದಿರುವ ತಜ್ಞರ ಬಗ್ಗೆ ವಿವರಿಸುತ್ತದೆ, ಅವರು ಸ್ವಯಂ-ವಿನ್ಯಾಸಗೊಳಿಸಿದ ಮಾನದಂಡಗಳು, ಓರೆಯಾದ ಸಮೀಕ್ಷೆಯ ಪ್ರಶ್ನೆಗಳು ಮತ್ತು ದೋಷಪೂರಿತ ಸಂಶೋಧನಾ ವಿಧಾನಗಳ ಮೂಲಕ ತಮ್ಮ ವರ್ಣಭೇದ ನೀತಿ ಮತ್ತು ಬೂಟಾಟಿಕೆಯನ್ನು ಅಕಾಡೆಮಿಯ ಮುಖವಾಡದ ಹಿಂದೆ ಮರೆಮಾಡಲು ಪ್ರಯತ್ನಿಸುತ್ತಾರೆ ಎನ್ನುವುದನ್ನು ತಿಳಿಯಬಹುದಾಗಿದೆ.


ಮೋದಿಯವರ ಈ ತೀವ್ರ ಬೆಳವಣಿಗೆಗೆ ಎರಡು ಪ್ರಮುಖ ಕಾರಣಗಳನ್ನು ಗುರುತಿಸಬಹುದು. ಮೊದಲನೆಯದು ಈ ಹಿಂದಿನ ಸರ್ಕಾರಗಳ ಅಲ್ಪಸಂಖ್ಯಾತರ ಓಲೈಕೆ ಹಿಂದುಗಳಲ್ಲಿ ಒಂದು ರೀತಿ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.ಅದರಲ್ಲೂ ಸಾಮಾಜಿಕ ಮಾಧ್ಯಮಗಳ ಮೂಲಕ ಹೊರಹೊಮ್ಮಿದ ಈ ಆಕ್ರೋಶವು ಒಮ್ಮೆಗೆ ಆಸ್ಪೋಟಗೊಂಡಿತು.


ಬಿಜೆಪಿಗೆ 2014 ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಮತದಾರರು ಮತ ಚಲಾಯಿಸಿದ್ದರಿಂದಾಗಿ ಅದನ್ನು ಹಿಂದೂ-ಪರವಾದ ಪಕ್ಷವೆಂದು ಕರೆಯಲಾಗುತ್ತಿದೆ.ಇದರ ಜೊತೆ ಮೋದಿ ಅವರು ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ ಮತ್ತು ಅವರ ಹಲವಾರು ಉಪಕ್ರಮಗಳು ವ್ಯಾಪಕ ರೀತಿಯಲ್ಲಿ ಮತದಾರರಲ್ಲಿ ಪ್ರಭಾವ ಬೀರಿವೆ.ಇದಕ್ಕೆ ಪ್ರಮುಖ ಕಾರಣ ಅವರ ಸರ್ಕಾರದ ಯೋಜನೆಗಳು ಕೇವಲ ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಭಾರತೀಯರಿಗೆ ಅನುಕೂಲವಾಗಿವೆ. 2019 ರ ಚುನಾವಣೆಯ ಸಮಯದಲ್ಲಿ, ಅನೇಕ ಮುಸ್ಲಿಂ ಪುರುಷರು ಮತ್ತು ಮಹಿಳೆಯರು ಅವರನ್ನು ಹೊಗಳಿದ್ದಾರೆ,ಇದು ಈ ಹಿಂದೆ ಇದ್ದಿರುವುದಕ್ಕಿಂತಲೂ ಬದಲಾಗಿದೆ.ಇದರಿಂದಾಗಿ 2019 ರಲ್ಲಿ ಬಿಜೆಪಿ ಗೆದ್ದ ಮತಗಳ ಹಂಚಿಕೆ ಮತ್ತು ಸ್ಥಾನಗಳಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಯಿತು.


ಮೋದಿಯವರ ಜನಪ್ರಿಯತೆಗೆ ಎರಡನೇ ಕಾರಣವೆಂದರೆ ವಿಭಜಿತ ಮತ್ತು ಕಳಪೆ ನೇತೃತ್ವದ ಪ್ರತಿಪಕ್ಷ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಗಾಂಧಿ ಕುಟುಂಬದ ದೋಷರಹಿತ ಶ್ರೇಷ್ಠತೆಗೆ ಒತ್ತು ನೀಡುವುದರೊಂದಿಗೆ, ಅವರ ಅಸಮರ್ಥತೆ ಮತ್ತು ಆಡಳಿತದಲ್ಲಿ ಯಾವುದೇ ಅನುಭವದ ಕೊರತೆಯ ನಿರಾಕರಿಸಲಾಗದ ಪುರಾವೆಗಳ ಮುಖಾಂತರ, ನಿರಂತರವಾಗಿ ತನ್ನ ಕಾಲಿಗೆ ತಾನೇ  ಗುಂಡು ಹಾರಿಸುತ್ತಿದೆ. ಈಗ ಕಾಂಗ್ರೆಸ್ ಪಕ್ಷದ ನಾಯಕರಿಗೆ ಗಾಂಧಿ ಕುಟುಂಬವು  ತಮ್ಮನ್ನು ಹಿಡಿದಿಟ್ಟುಕೊಳ್ಳುವ ಏಕೈಕ ಮಾರ್ಗ ಎಂದು ನಂಬಿರುವುದರಿಂದ ಈ ಪಕ್ಷದ ಅವನತಿ ಹಾಗೆ ಮುಂದುವರೆಯುವುದು ಖಚಿತವಾಗಿದೆ.


ಆಮ್ ಆದ್ಮಿ ಪಾರ್ಟಿಯಂತಹ ಪಕ್ಷವು ತನ್ನನ್ನು ಅಪ್ರಬುದ್ಧ ಮತ್ತು ರಾಷ್ಟ್ರೀಯ ನಾಯಕತ್ವಕ್ಕೆ ಸೂಕ್ತವಲ್ಲ ಎಂದು ತೋರಿಸಿಕೊಂಡಿದೆ. ಇತರ ವಿರೋಧ ಪಕ್ಷಗಳು ಸಹ ಬಿಜೆಪಿ ವಿರುದ್ಧ ಏಕೀಕೃತ ಬ್ಲಾಕ್ ಅನ್ನು ರಚಿಸಲು ಸಾಧ್ಯವಾಗದ ಅಹಂ ಚಾಲಿತ ವ್ಯಕ್ತಿಗಳಿಂದ ಮುನ್ನಡೆಸಲ್ಪಡುತ್ತವೆ. ಇದು, ‘ಶ್ರೀ ಮೋದಿಯವರ ಬದಲಿಗೆ, ಯಾರು? ವಿರೋಧ ಪಕ್ಷದ ನಾಯಕರಿಂದ ಏಕತೆಯ ಸಾರ್ವಜನಿಕ ಘೋಷಣೆಗಳಿಗೆ ಕಾರಣವಾಗುವ ಪ್ರಶ್ನೆ ಮತ್ತು ಈ ಪ್ರಶ್ನೆಗೆ ಉತ್ತರದಲ್ಲಿ ಹೆಸರಿಸಲು ಯಾರು ಅರ್ಹರು ಎಂಬುದರ ಕುರಿತಾಗಿ ಖಾಸಗಿ ಭಿನ್ನಾಭಿಪ್ರಾಯಗಳು ಅವರಲ್ಲಿ ಹಾಗೆಯೇ ಇವೆ.


ಈ ಸಮಯದಲ್ಲಿ ಶ್ರೀ ಮೋದಿಯವರ ವಿರುದ್ಧ ಅಥವಾ ಅವರ ಕೆಲವು ಮಂತ್ರಿಗಳ ವಿರುದ್ಧ ಗೆಲ್ಲುವ ವರ್ಚಸ್ಸು ಹೊಂದಿರುವ ಯಾವುದೇ ರಾಷ್ಟ್ರೀಯ ವಿರೋಧ ಪಕ್ಷದ ನಾಯಕರಿಲ್ಲ.ರಾಷ್ಟ್ರೀಯ ಮಟ್ಟದ ಒಬ್ಬ ಸಮರ್ಥ, ವರ್ಚಸ್ವಿ ನಾಯಕ ಹುಟ್ಟುವವರೆಗೆ, ಇದು ಏಕಪಕ್ಷೀಯ ಆಟವಾಗಿ ಉಳಿಯುತ್ತದೆ.


ಇದು ಸದ್ಯದ ನಮ್ಮ ಭಾರತೀಯ ಪ್ರಜಾಪ್ರಭುತ್ವದ ಸ್ಥಿತಿಯಾಗಿದೆ. ಇದನ್ನು ಪಾಶ್ಚಿಮಾತ್ಯ ತಜ್ಞರು ಬೇಕಾದರೆ ಬೆಕ್ಕು-ನಾಯಿ ಎಂದು ಕರೆಯಲಿ ಅಥವಾ ಅವರ ಜನಾಂಗೀಯ-ಬೂಟಾಟಿಕೆ ಮನಸ್ಥಿತಿಯ ಮೂಲಕ ಬೇರೆ ಯಾವುದನ್ನಾದರೂ ಕರೆಯಲಿ, ಇದು ಭಾರತೀಯ ಮತದಾರನಿಗೆ ಅಂತಹ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ.


ಜನಾಂಗೀಯ-ಬೂಟಾಟಿಕೆ ತಜ್ಞರ ಹೊರತಾಗಿ, ಅವರ ಉದ್ವೇಗದಿಂದ ಉತ್ತೇಜಿತವಾಗಿರುವ ಅಂತರಾಷ್ಟ್ರೀಯ ಶ್ರೇಯಾಂಕದ ಏಜೆನ್ಸಿಗಳನ್ನು ನಾವು ಹೊಂದಿದ್ದೇವೆ, ಅವರ ಕೆಲಸವನ್ನು ಸಹ ಮಾಡುತ್ತಿದ್ದೇವೆ. ಆಶ್ಚರ್ಯಕರವಾಗಿ, ಅವರು ಇದೇ ರೀತಿಯ ಪಕ್ಷಪಾತದ ಮನಸ್ಥಿತಿಯನ್ನು ಪ್ರದರ್ಶಿಸುತ್ತಾರೆ.


ಈ ಮನಸ್ಥಿತಿಗೆ ಇತ್ತೀಚಿನ ಉದಾಹರಣೆಯನ್ನು ನೀಡುವುದಾದರೆ ಭಾಗಶಃ ಜಾರ್ಜ್ ಸೊರೊಸ್ ಅನುದಾನಿತ ವಿ-ಡೆಮ್ ಇನ್‌ಸ್ಟಿಟ್ಯೂಟ್ ಆಫ್ ಸ್ವೀಡನ್‌ನ ಶ್ರೇಯಾಂಕ. ಅವರ ಶೈಕ್ಷಣಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ, ಭಾರತವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕಿಂತ ಕೆಳಗಿದೆ. ಅಫ್ಘಾನಿಸ್ತಾನವು ತನ್ನ ವಿಶ್ವವಿದ್ಯಾನಿಲಯಗಳಿಂದ ಮಹಿಳೆಯರನ್ನು ನಿಷೇಧಿಸುವ ಮುಂಚೆಯೇ ಇದನ್ನು ವಿಚಿತ್ರ ಎಂದು ಕರೆಯಬಹುದು. ಇನ್ನೊಂದೆಡೆಗೆ ಜಾಗತಿಕ ಆಹಾರ ಭದ್ರತೆ ಸೂಚ್ಯಂಕ ಕೂಡ ಅಂತಹ ಮತ್ತೊಂದು ತಮಾಷೆಗೆ ನಿದರ್ಶನವಾಗಿದೆ, ಆದರೂ ಕೆಲವು ಜನರು ಮತ್ತು ಸಂಸ್ಥೆಗಳು ತಮ್ಮ ಸ್ವಂತ ಕಾರ್ಯಸೂಚಿಗಳನ್ನು ಮುಂದುವರಿಸಲು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ನಟಿಸುತ್ತಾರೆ.


ಈ ಸೂಚ್ಯಂಕಗಳು ಯಾವುದೇ ಗಂಭೀರ ವಿಶ್ಲೇಷಕರಿಗೆ ಯಾವುದೇ ಉಪಯೋಗವಾಗದಂತೆ ಹಲವಾರು ನ್ಯೂನತೆಗಳಿಂದ ಬಳಲುತ್ತವೆ. ಈ ನ್ಯೂನತೆಗಳನ್ನು ಅನೇಕ ಲೇಖನಗಳಲ್ಲಿ ಎತ್ತಿ ತೋರಿಸಲಾಗಿದೆ. ಆದರೂ, ಪ್ರೇರಿತ ಜನರು ಅವರಿಗೆ ಪ್ರಾಮುಖ್ಯತೆಯನ್ನು ನೀಡುತ್ತಲೇ ಇರುತ್ತಾರೆ. ಬೆಕ್ಕು-ನಾಯಿ 'ಚುನಾವಣಾ ಪ್ರಜಾಪ್ರಭುತ್ವ' ಲೇಬಲ್‌ನಂತೆ, ಇವುಗಳನ್ನು ಸಹ ನಿರ್ಲಕ್ಷಿಸುವುದೇ ಉತ್ತಮ.


-ಕಿಶೋರ್ ಅಸ್ತಾನ


ಗುರುಗ್ರಾಮ


kishore.asthana@gmail.com


ದೂರವಾಣಿ: +91 9818148602


ಸೂಚನೆ -ಈ ಲೇಖನವು ಕಿಶೋರ್ ಅಸ್ತಾನ ಅವರ Electoral Autocracy– India in the crosshairs of Racist Hypocrites ಎನ್ನುವ ಇಂಗ್ಲೀಶ್ ಲೇಖನದ ಕನ್ನಡದ ಅನುವಾದವಾಗಿದೆ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.