ನವದೆಹಲಿ : ಪ್ರಾಣಿಗಳಿಗೆ ಯಾವತ್ತೂ ತೊಂದರೆ ಕೊಡಲೇಬಾರದು. ತಮಗೆ ತೊಂದರೆಯಾದಾಗ ಮಾತ್ರ ಪ್ರಾಣಿಗಳು ಮನುಷ್ಯನ ಮೇಲೆ ದಾಳಿ ಮಾಡುತ್ತವೆ. ಇನ್ನು ಆನೆಗಳಂತೂ ಮನುಷ್ಯನ ಸ್ನೇಹಿತರಿದ್ದಂತೆ. ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬಂದರೂ ಅವುಗಳು ಅವುಗಳ ಪಾಡಿಗೆ ತಮ್ಮ ಹಾದಿಯಲ್ಲಿ ನಡೆದಾಡುತ್ತವೆ. ಎಲ್ಲಿಯವರೆಗೆ ಅವುಗಳಿಗೆ ಯಾರೂ ತೊಂದರೆ ಮಾಡುವುದಿಲ್ಲವೋ ಅವುಗಳು ಕೂಡಾ ಯಾರಿಗೂತೊಂದರೆ ಕೊಡುವುದಿಲ್ಲ. ಆದರೆ, ಯಾರಾದರೂ ಅವುಗಳ ತಂಟೆಗೆ  ಹೋದರೆ ತಮ್ಮ ಉಗ್ರ ರೂಪ ತೋರಿಸಿ  ಬಿಡುತ್ತವೆ. 


COMMERCIAL BREAK
SCROLL TO CONTINUE READING

ಇದೀಗ ಇಂಥದ್ದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social media) ಹರಿದಾಡುತ್ತಿದೆ. ಇದರಲ್ಲಿ ಆನೆಯೊಂದು ಟ್ರಕ್ ಟ್ರೈವರ್ ಗೆ ಸರಿಯಾಗೇ ಕ್ಲಾಸ್ ತೆಗೆದುಕೊಳ್ಳುತ್ತಿದೆ. ಈ ವಿಡಿಯೋದಲ್ಲಿ ಟ್ರಾಫಿಕ್ ಪೊಲೀಸ್ ನಂತೆ (Traffic Police) ಮಾರ್ಗ ಮಧ್ಯೆ ನಿಂತಿರುವ ಆನೆ ಟ್ರಕ್ ಚಾಲಕನಿಗೆ ತನ್ನ ತಪ್ಪಿನ ಅರಿವು ಮೂಡಿಸುತ್ತಿದೆ.


ಮಂಗಳನ ಮೇಲೊಂದು ಮೆಗಾಸಿಟಿ ಯಾವಾಗ ನಿರ್ಮಾಣವಾಗುತ್ತೆ ಗೊತ್ತಾ..?


ಮಾರ್ಗ ಮಧ್ಯೆ ಒಂದು ಆನೆ ನಿಂತಿರುತ್ತದೆ. ಅಚಾನಾಕಾಗಿ ಒಂದು ಟ್ರಕ್ ಬರುತ್ತದೆ. ಮಾರ್ಗ ಮಧ್ಯೆ ಆನೆಯನ್ನು (Elephant) ನೋಡಿದ ಟ್ರಕ್ ಚಾಲಕ, ಹಾರನ್ ಹಕಲು ಶುರು ಮಾಡುತ್ತಾನೆ. ನಿರಂತರ ಹಾರನ್ ಹಾಕುತ್ತಿರುವುದು ಆನೆಗೂ ಕಿರಿಕಿರಿ ಉಂಟು ಮಾಡುತ್ತದೆ. ನೆರ ಟ್ರಕ್ ಇದ್ದಲ್ಲಿಗೆ ಬಂದ ಆನೆ ಟ್ರಕ್ ಅನ್ನೇ ಅಲುಗಾಡಿಸಲು ಆರಂಭಿಸುತ್ತದೆ. 


ಈ ವಿಡಿಯೋ (Video)  ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಜನರು ಕೂಡಾ ಈ ವಿಡಿಯೋವನ್ನು ಇಷ್ಟಪಡುತ್ತಿದ್ದಾರೆ. ಕಮೆಂಟ್ ಕೂಡಾ ಮಾಡುತ್ತಿದ್ದಾರೆ. ಟ್ರಕ್ ಚಾಲಕನಿಗೆ ಆನೆ ಕಲಿಸಿದ ಪಾಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ : ಕೊರೊನಾ ನಿರ್ವಹಣೆಯಲ್ಲಿ ಜಾಗತಿಕ ಮೆಚ್ಚುಗೆ ಗಳಿಸಿದ ಶೈಲಜಾ ಟೀಚರ್ ಗೆ ಇಲ್ಲ ಸಚಿವ ಸ್ಥಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.