ಬ್ಯಾಂಕ್ ಲಾಕರ್‌ನಲ್ಲಿ ಪತ್ತೆಯಾದ 500 ಕೋಟಿ ಮೌಲ್ಯದ ಪಚ್ಚೆ ಶಿವಲಿಂಗ..!
ಈ ಪಚ್ಚೆಯಿಂದ ಮಾಡಿದ ಶಿವಲಿಂಗವನ್ನು ಪೂರ್ವ ಏಷ್ಯಾ ಸಾಮ್ರಾಜ್ಯದ ದಕ್ಷಿಣ ಭಾರತದ ಮಹಾರಾಜ ರಾಜೇಂದ್ರ ಚೋಳನು ಖರೀದಿಸಿ ದೇವಾಲಯಕ್ಕೆ ನೀಡಿದ್ದಾನೆ ಎಂದು ನಂಬಲಾಗಿದೆ.
ನವದೆಹಲಿ: ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಐಡಿ ಪೊಲೀಸರು ಉದ್ಯಮಿಯೊಬ್ಬರ ಬ್ಯಾಂಕ್ ಲಾಕರ್‌ನಲ್ಲಿದ್ದ 500 ಕೋಟಿ ರೂ. ಮೌಲ್ಯದ ಪುರಾತನ ಪಚ್ಚೆ ಶಿವಲಿಂಗ(Emerald Shiva Lingam)ವನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಗಳ ಅನ್ವಯ ಇದನ್ನು ತಮಿಳುನಾಡಿನ ಪ್ರಾಚೀನ ದೇಗುಲದಿಂದ ಕದ್ದಿರುವ ಶಂಕೆ ಇದ್ದು, ಆ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಪಚ್ಚೆ ರತ್ನದಿಂದ ತಯಾರಿಸಿದ ಪುರಾತನ ವಿಗ್ರಹ
ತಮಿಳುನಾಡಿನ ತಂಜಾವೂರಿನ(Thanjavur) ಮನೆಯೊಂದರಲ್ಲಿ ಪುರಾತನ ಶಿವಲಿಂಗವಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆ ಸಿಐಡಿ ಪೊಲೀಸರು ಶನಿವಾರ ತಂಜಾವೂರಿನ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಆದರೆ ಮನೆಯಲ್ಲಿ ಅಂತಹ ಯಾವುದೇ ಶಿವಲಿಂಗ ಪತ್ತೆಯಾಗಿರಲಿಲ್ಲ. ಆದರೆ ತೀವ್ರ ವಿಚಾರಣೆ ಬಳಿಕ ಮನೆಯ ಮಾಲೀಕ ಸಾಮಿಯಪ್ಪನ್‌ರ ಪುತ್ರ ಅರುಣ್ ಎಂಬಾತ ತಮ್ಮ ತಂದೆ ಬ್ಯಾಂಕ್ ಲಾಕರ್‌ನಲ್ಲಿ ಶಿವಲಿಂಗ ಇಟ್ಟಿರುವ ಮಾಹಿತಿ ನೀಡಿದ್ದ. ಅಲ್ಲದೆ ಇದು ಅವರಿಗೆ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದ.
ಎಡಿಜಿಪಿ ಜಯಂತ್ ಮುರಳಿ(ADGP Jayantha Murali) ಈ ಬಗ್ಗೆ ಮಾಹಿತಿ ನೀಡಿದ್ದು, ‘ತಂಜಾವೂರಿನ ಮನೆಯೊಂದರಲ್ಲಿ ಪುರಾತನ ವಿಗ್ರಹವನ್ನು ಇರಿಸಲಾಗಿದೆ ಎಂಬ ಸುಳಿವು ಸಿಕ್ಕಿತ್ತು. 500 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಹೇಳಲಾಗಿರುವ ಈ ಶಿವಲಿಂಗವನ್ನು ಪಚ್ಚೆ ರತ್ನಗಳಿಂದ ತಯಾರಿಸಲಾಗಿದೆ. ಇದನ್ನು ಉದ್ಯಮಿ ಬ್ಯಾಂಕ್ ಲಾಂಕರ್ ನಲ್ಲಿಟ್ಟಿದ್ದರು’ ಅಂತಾ ತಿಳಿಸಿದ್ದಾರೆ.
ಇದನ್ನೂ ಓದಿ: Bank Locker : ಇಂದಿನಿಂದ ಬದಲಾಗಿದೆ ಬ್ಯಾಂಕ್ ಲಾಕರ್ ನಿಯಮಗಳು!
500 ಕೋಟಿ ರೂ. ಬೆಲೆ ಇದೆ
ಈ ಪಚ್ಚೆ ಲಿಂಗವನ್ನು ಮಾರ್ಗಟ್ ಲಿಂಗ(Marghat Lingam) ಎಂದೂ ಕರೆಯುತ್ತಾರೆ. ಈ ಪಚ್ಚೆ ಲಿಂಗದ ಬೆಲೆ 500 ಕೋಟಿ ರೂ. ಎಂದು ಹೇಳಲಾಗುತ್ತಿದೆ. 2016ರಲ್ಲಿ ನಾಗಪಟ್ಟಣಂ ಬಳಿಯ ತಿರುಕ್ಕುವಲೈನಲ್ಲಿರುವ ಹಳೆಯ ತ್ಯಾಗರಾಜ ಸ್ವಾಮಿ ದೇವಸ್ಥಾನದಿಂದ ಕಳ್ಳತನವಾಗಿತ್ತು. ಈ ಲಿಂಗವನ್ನು ಬ್ಯಾಂಕ್ ಲಾಕರ್‌ನಿಂದ ವಶಪಡಿಸಿಕೊಳ್ಳಲಾಗಿದೆ.
ಮಾಹಿತಿ ಆಧರಿಸಿ ಬ್ಯಾಂಕ್ ಲಾಕರ್(Bank Locker) ತೆಗೆದಾಗ ಅಲ್ಲಿ 8 ಸೆಂ.ಮೀ. ಎತ್ತರ, 530 ಗ್ರಾಂ ತೂಕವಿರುವ ಪಚ್ಚೆಯ ಅಪರೂಪದ ಶಿವಲಿಂಗ ಪತ್ತೆಯಾಗಿದೆ. ಬಳಿಕ ವಿಗ್ರಹವನ್ನು ರತ್ನಶಾಸ್ತ್ರಜ್ಞರ ಬಳಿ ಕೊಂಡೊಯ್ಯಲಾಗಿದ್ದು, ಅವರು ಕೂಡ ಇದು ಪಚ್ಚೆಯ ಶಿವಲಿಂಗ ಎಂದು ಖಚಿತಪಡಿಸಿದ್ದಾರೆ. ಜೊತೆಗೆ ಇದರ ಮೌಲ್ಯ 500 ಕೋಟಿ ರೂ. ಆಗಬಹುದು ಎಂದು ಅಂದಾಜಿಸಿದ್ದಾರೆ.
ಇದನ್ನೂ ಓದಿ: Bank Holidays : ಬ್ಯಾಂಕ್ ಗ್ರಾಹಕರೆ ಗಮನಿಸಿ : ಜನವರಿಯಲ್ಲಿ 16 ದಿನ ಬ್ಯಾಂಕ್ ಬಂದ್!
ಸಾವಿರ ವರ್ಷಗಳಷ್ಟು ಹಳೆಯ ಶಿವಲಿಂಗ
ಮೂಲಗಳ ಪ್ರಕಾರ ಇದನ್ನು ಯಾವಾಗ ಮಾಡಿರಬೇಕು ಎಂದು ವೈಜ್ಞಾನಿಕ ತನಿಖೆಯಿಂದ ತಿಳಿದಿಲ್ಲ. ಆದರೆ ಇದು ಸಾವಿರ ವರ್ಷಗಳಷ್ಟು ಹಳೆಯದಾದ ಶಿವಲಿಂಗ ಎಂದು ನಂಬಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಡುವೆ ಶಿವಲಿಂಗ ಅಡಗಿಸಿಟ್ಟಿದ್ದ ಸಾಮಿಯಪ್ಪನ್, ಇದು ತನಗೆ ಸೇರಿದ್ದು ಎಂದು ಖಚಿತಪಡಿಸುವ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ ಇದು ಆತನ ಕೈಸೇರಿದ್ದು ಹೇಗೆ ಎಂಬುದು ಸೇರಿದಂತೆ ನಾನಾ ವಿಷಯಗಳ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ. ವೈಜ್ಞಾನಿಕ ಆಧಾರಗಳ ಮೂಲಕ ಇದು ಯಾವ ದೇಗುಲಕ್ಕೆ ಸೇರಿರಬಹುದು ಎಂಬುದರ ಪತ್ತೆ ನಡೆಸಿದ್ದೇವೆ ಎಂದು ಸಿಐಡಿ ಪೊಲೀಸರು ಹೇಳಿದ್ದಾರೆ.
ಈ ಶಿವಲಿಂಗ ಭಾರತಕ್ಕೆ ಬಂದಿದ್ದು ಹೀಗೆ
ಈ ಪಚ್ಚೆಯಿಂದ ಮಾಡಿದ ಶಿವಲಿಂಗವನ್ನು ಪೂರ್ವ ಏಷ್ಯಾ ಸಾಮ್ರಾಜ್ಯದ ದಕ್ಷಿಣ ಭಾರತದ ಮಹಾರಾಜ ರಾಜೇಂದ್ರ ಚೋಳನು ಖರೀದಿಸಿ ದೇವಾಲಯಕ್ಕೆ ನೀಡಿದ್ದಾನೆ ಎಂದು ನಂಬಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.