ಬುಡ್ಗಾಮ್:  ನಿನ್ನೆಯಷ್ಟೇ ಶೋಪಿಯಾನ್‌ನಲ್ಲಿ ಐವರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದ್ದು ಕಣಿವೆ ರಾಜ್ಯದಲ್ಲಿ ಇಂದು ಬುಡ್ಗಾಮ್ ಜಿಲ್ಲೆಯ ಮಧ್ಯ ಕಾಶ್ಮೀರದ ಪಠಾಣ್‌ಪೋರಾ ಗ್ರಾಮದಲ್ಲಿ ಭದ್ರತಾ ಪಡೆಗಳ ನಡುವೆ ಮತ್ತೆ ಎನ್ಕೌಂಟರ್ (Encounter)  ಮುಂದುವರೆದಿದೆ. 


COMMERCIAL BREAK
SCROLL TO CONTINUE READING

ಬುಡ್ಗಾಮ್ ಜಿಲ್ಲೆಯ ಮಧ್ಯ ಕಾಶ್ಮೀರದ ಪಠಾಣ್‌ಪೋರಾ ಗ್ರಾಮದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಿನ್ನೆ ಮಧ್ಯರಾತ್ರಿಯಿಂದ ಎನ್ಕೌಂಟರ್ ಆರಂಭವಾಗಿದ್ದು ಮುಂಜಾನೆಯೂ ಮುಂದುವರೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.


ಈ ಕುರಿತಂತೆ ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸರ ಟ್ವಿಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡಲಾಗಿದೆ. ಬುಡ್ಗಾಮ್ನ ಪಠಾಣ್ಪೊರಾ ಪ್ರದೇಶದಲ್ಲಿ ಎನ್ಕೌಂಟರ್ ಪ್ರಾರಂಭವಾಗಿದೆ. ಬುಡ್ಗಾಮ್ ಪೊಲೀಸರು ಮತ್ತು ಭದ್ರತಾ ಪಡೆಗಳು ತಮ್ಮ ಕೆಲಸವನ್ನು ಮಾಡುತ್ತಿವೆ ಎಂದು ತಿಳಿಸಲಾಗಿದೆ.


ಕೆಲವು ಭಯೋತ್ಪಾದಕರು ಈ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಪ್ರದೇಶವನ್ನು ಸುತ್ತುವರೆಯಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ನಂತರ ಪೊಲೀಸ್ ಸೈನ್ಯ ಮತ್ತು ಸಿಆರ್‌ಪಿಎಫ್‌ನ (CRPF) ಜಂಟಿ ತಂಡವು ಪಠಾಣ್‌ಪೋರಾದಲ್ಲಿ ಕಾರ್ಡನ್ ಮತ್ತು ಶೋಧ-ಕಾರ್ಯಾಚರಣೆಯನ್ನು ಪ್ರಾರಂಭಿಸಿತು.


ಭದ್ರತಾ ಪಡೆಗಳ ಮೇಲೂ ಭಯೋತ್ಪಾದಕರು ಗುಂಡು ಹಾರಿಸಿದರು. ಅದರ ನಂತರ ಜಂಟಿ ತಂಡ ಪ್ರತೀಕಾರ ತೀರಿಸಿಕೊಂಡಿತು. ಜಂಟಿ ತಂಡ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಬೆಳಿಗ್ಗೆ ಗುಂಡಿನ ದಾಳಿ ನಿಲ್ಲಿಸಿದ ನಂತರ ಈಗ ಶೋಧ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.