ನವದೆಹಲಿ: ದಕ್ಷಿಣ ಕಾಶ್ಮೀರದ ಅನಂತ್ ನಾಗ್ ನ ಕಾಜ್ವಾನ್ ಅರಣ್ಯ ಪ್ರದೇಶ ಖುಂಡ್ರು ಬಳಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಎನ್ಕೌಂಟರ್ ಮೂಲಕ ಹತ್ಯೆಗೈದಿದ್ದಾರೆ. ಆದರೆ ಇದುವರೆಗೂ ಉಗ್ರರ ಮೃತದೇಹಗಳನ್ನು ವಶಪಡಿಸಿಕೊಂಡಿಲ್ಲವೆನ್ನಲಾಗಿದೆ. ಈ ಪ್ರದೇಶದಲ್ಲಿ ಇನ್ನು ಅಧಿಕ ಉಗ್ರರು ಸೇರೆ ಸಿಕ್ಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

"ಅನಂತ್ ನಾಗ್ ಜಿಲ್ಲೆಯ ಕೊಕರ್ನಾಗ್ ಕಚ್ವಾನ್ ಅರಣ್ಯ ಪ್ರದೇಶದಲ್ಲಿ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು "ಎಂದು ಪೊಲೀಸರು ಧೃಡಪಡಿಸಿದ್ದಾರೆ. ಸದ್ಯ ಗುಂಡಿನ ಚಕಮಕಿ ಇನ್ನು ಮುಂದುವರೆದಿದ್ದು ಉಗ್ರರು ಸ್ಥಳದಿಂದ ತಪ್ಪಿಸಿಕೊಳ್ಳದಂತೆ ಈಗ ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ.  


ಸೋಮವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾದಲ್ಲಿನ ಬಾಬಾಗುಂಡ್ ಪ್ರದೇಶದಲ್ಲಿ 39 ವರ್ಷ ವಯಸ್ಸಿನ ಶಂಕಿತ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ. ಇದಕ್ಕೂ ಮೊದಲು ಜಕೀರ್ ಮುಸ ಎನ್ನುವ ಉಗ್ರನನ್ನು ಪುಲ್ವಾಮಾದಲ್ಲಿ  ಎನ್ಕೌಂಟರ್ ಮೂಲಕ ಕೊಲ್ಲಲ್ಪಡಲಾಗಿದೆ. ಮುಸಾ ಎನ್ನುವ ಉಗ್ರನು ಅಲ್ ಖೈದಾದ ಮುಖ್ಯಸ್ಥ ಅನ್ಸರ್ ಗಝ್ವಾತ್-ಉಲ್ ಹಿಂದ್ ನೊಂದಿಗೆ ಸಂಪರ್ಕ ಹೊಂದಿದ್ದನು.