ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪುಲ್ವಾಮಾದ ಟ್ರಾಲಿಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಶನಿವಾರ ಗುಂಡಿನ ಚಕಮಕಿ ನಡೆದಿದೆ. ಇಲ್ಲಿ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿದ್ದು, ಇಬ್ಬರು ಭಯೋತ್ಪಾದಕರು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಎನ್ಕೌಂಟರ್ ಮುಂದುವರೆದಿದೆ. 


COMMERCIAL BREAK
SCROLL TO CONTINUE READING

ಭದ್ರತಾ ಪಡೆಗಳು ಸುತ್ತುವರಿದ ಪ್ರದೇಶದಲ್ಲಿ ಭಯೋತ್ಪಾದಕರನ್ನು ನೋಡಿದಾಗ, ಸ್ಥಳೀಯ ಜನರು ಬೀದಿಗಳಿಗೆ ಬಂದರು. ಈ ಸಮಯದಲ್ಲಿ ಭಯೋತ್ಪಾದಕರನ್ನು ರಕ್ಷಿಸಲು ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಅದರಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ಸುದ್ದಿ ಇಲ್ಲ.