Atique Ahmed Latest News: ಫೆಬ್ರವರಿ 24ರಂದು ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಅಂದು ವಕೀಲ ಉಮೇಶ್ ಪಾಲ್ ಕೊಲೆಯಾಗಿತ್ತು. ಅಂದಿನಿಂದ ಮಾಫಿಯಾ ಅತೀಕ್ ಅಹ್ಮದ್’ನ ಮಗ ಅಸಾದ್ ಮತ್ತು ಶೂಟರ್ ಗುಲಾಮ್ ಎಲ್ಲರ ಕಣ್ತಪ್ಪಿಸಿ ಅಡಗಿಕೊಂಡಿದ್ದರು. ಮಾಹಿತಿ ಪ್ರಕಾರ, ಉಮೇಶ್ ಪಾಲ್ ಹತ್ಯೆಯ ನಂತರ ಎಲ್ಲಾ ಶೂಟರ್‌ಗಳು ಸುಮಾರು 36 ಗಂಟೆಗಳ ಕಾಲ ನಗರದ ವಿವಿಧ ಸ್ಥಳಗಳಲ್ಲಿ ಅಡಗಿಕೊಂಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿರಾಟ್-ರೋಹಿತ್ ಹಿಂದಿಕ್ಕಿ ಇತಿಹಾಸ ಬರೆದ MS Dhoni: ಯಾರಿಂದಲೂ ಟಚ್ ಮಾಡೋಕಾಗಲ್ಲ ಅನ್ಸುತ್ತೆ ಈ ದಾಖಲೆ!


ಅತೀಕ್ ಅಹ್ಮದ್ ಪುತ್ರ ಅಸಾದ್ ಮತ್ತು ಶೂಟರ್ ಗುಲಾಮ್ ಫೆಬ್ರವರಿ 26 ರಂದು ಕಾನ್ಪುರಕ್ಕೆ ಬೈಕ್‌’ನಲ್ಲಿ ತೆರಳಿದರೆ, ಮತ್ತೊಬ್ಬ ಅಪರಾಧಿ ಗುಡ್ಡು ಮುಸ್ಲಿಂ ಬಸ್‌’ನಲ್ಲಿ ಹೋಗಿದ್ದ. ನಂತರ ಅಲ್ಲಿಂದ ಬಸ್ ಹಿಡಿದು ದೆಹಲಿ ಬಂದಿದ್ದಾರೆ. ಇದಾದ ನಂತರ ಗುಡ್ಡು ಮುಸ್ಲಿಂ ಮೀರತ್‌’ಗೆ ಹೋಗಿದ್ದಾನೆ. ಇನ್ನು ಅಸಾದ್ ಮತ್ತು ಗುಲಾಮ್ 49 ದಿನಗಳ ಕಾಲ ಒಟ್ಟಿಗೆ ನಿಗೂಢವಾಗಿ ಅಡಗಿದ್ದರೆಂದು ತಿಳಿದುಬಂದಿದೆ.


ಮುಂಬೈ, ಪಶ್ಚಿಮ ಬಂಗಾಳ, ಬಿಹಾರ ಮಾರ್ಗವಾಗಿ ರಾಜಸ್ಥಾನದ ಅಜ್ಮೀರ್ ಬಂದಾಗ ಎಸ್’ಟಿಎಫ್ ಕೈಗೆ ಸಿಕ್ಕಿಬಿದ್ದಿದ್ದಾನೆ.  ಇದಕ್ಕೂ ಮುನ್ನ ಅನೇಕ ಬಾರಿ ಪೊಲೀಸರು ಮತ್ತು ಎಸ್‌ಟಿಎಫ್ ತಂಡವು ಅಸ್ಸಾದ್‌’ನ ಬಂಧಿಸಲು ಮುಂದಾಗಿತ್ತು, ಆದರೆ ನಿಮಿಷಗಳ ಅಂತರದಲ್ಲಿ ಕೈತಪ್ಪಿ ಹೋಗಿದ್ದ ಈ ಕಿರಾತಕ.  


ಮಗ ಅಸಾದ್‌’ನ ಎನ್ಕೌಂಟರ್ ನಂತರ, ಅತೀಕ್ ಅಹ್ಮದ್ ರಾತ್ರಿಯಿಡೀ ಆಘಾತಕ್ಕೀಡಾಗಿ ಅಳುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಸಾದ್ ಮತ್ತು ಗುಲಾಮ್’ನನ್ನು ಗುರುವಾರದಂದು ಝಾನ್ಸಿಯ ಪರಿಚಾದಲ್ಲಿ ಎನ್‌ಕೌಂಟರ್ ಮಾಡಲಾಗಿತ್ತು. ಅಸಾದ್ ಅತೀಕ್ ಅಹ್ಮದ್ ಅವರ ಮೂರನೇ ಮಗನಾದ ಈತ ಅಸಾದ್ ಅತೀಕ್ ಸಾಮ್ರಾಜ್ಯವನ್ನು ನಡೆಸುತ್ತಿದ್ದ.


ಇದೇ ವೇಳೆ ಮಾಫಿಯಾ ಅತೀಕ್ ಅಹ್ಮದ್’ಗೆ ಅಬು ಸಲೇಂ ಸಂಪರ್ಕವೂ ಇತ್ತು ಎಂಬ ವಿಚಾರ ಬಯಲಿಗೆ ಬಂದಿದೆ. ಅಸಾದ್ ಮತ್ತು ಗುಲಾಂನನ್ನು ಅಡಗಿಸಲು ಅಬು ಸಲೇಂ ಸಹಾಯ ಮಾಡಿದ್ದ ಎಂದು ಹೇಳಲಾಗುತ್ತಿದೆ. ಹಲವು ಸಹಾಯಕರ ಹೆಸರೂ ಪತ್ತೆಯಾಗಿದೆ.


ಇದನ್ನೂ ಓದಿ: CSK vs RR ಪಂದ್ಯದಲ್ಲಿ ಅಂಪೈರ್ ವಿರುದ್ಧ ಗಂಭೀರ ಆರೋಪ ಮಾಡಿದ ಅಶ್ವಿನ್! ಹುಟ್ಟಿಕೊಂಡ ಹೊಸ ವಿವಾದ ಏನು?


ಇನ್ನು ಕಳೆದ ರಾತ್ರಿ ಝಾನ್ಸಿಯಲ್ಲಿ ಅಸಾದ್ ಮತ್ತು ಗುಲಾಮ್ ಅವರ ಪೋಸ್ಟ್‌ಮಾರ್ಟಂ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ವೀಡಿಯೋಗ್ರಾಫಿ ಕೂಡ ಮಾಡಲಾಗಿದೆ. ಆದರೆ ಕುಟುಂಬದ ಯಾರೂ ಇನ್ನೂ ಝಾನ್ಸಿ ತಲುಪಿಲ್ಲ. ಅಸಾದ್ ಅವರ ಅಜ್ಜ ಝಾನ್ಸಿ ತಲುಪಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಸಂಜೆ ವೇಳೆಗೆ ಅಸಾದ್ ಅವರ ಪಾರ್ಥಿವ ಶರೀರ ಪ್ರಯಾಗರಾಜ್ ತಲುಪಲಿದ್ದು, ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ಈ ಮಧ್ಯೆ, ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿ ಅತೀಕ್ ಅವರ ಪತ್ನಿ ಇಂದು ಶರಣಾಗಬಹುದು ಎಂಬ ಊಹಾಪೋಹಗಳು ದಟ್ಟವಾಗಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.