ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ದೆಹಲಿಗೆ ವಾಪಸ್
ಬಿಹಾರದ ಸಮಷ್ಟಿಪುರ, ಒಡಿಶಾದ ಬಾಲಸೋರ್ ಮತ್ತು ಮಹಾರಾಷ್ಟ್ರದ ಸಂಗಮ್‍ನೇರ್‍ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ.
ನವದೆಹಲಿ: 2019 ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಿಹಾರದ ಪಾಟ್ನಾಗೆ ತೆರಳುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿಗೆ ಹಿಂದಿರುಗಿದ ಘಟನೆ ಇಂದು ಬೆಳಿಗ್ಗೆ ನಡೆದಿದ್ದು, ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ರಾಹುಲ್ ಕ್ಷಮೆ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವಿಮಾನದ ಎಂಜಿನ್ ನಲ್ಲಿ ದೋಷ ಕಂಡು ಬಂದದ್ದರಿಂದ ನಾವು ದೆಹಲಿಗೆ ಹಿಂದಿರುಗಬೇಕಾಯಿತು. ಈ ಕಾರಣದಿಂದಾಗಿ ಬಿಹಾರದ ಸಮಷ್ಟಿಪುರ, ಒಡಿಶಾದ ಬಾಲಸೋರ್ ಮತ್ತು ಮಹಾರಾಷ್ಟ್ರದ ಸಂಗಮ್‍ನೇರ್‍ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳು ತಡವಾಗಿವೆ. ಅದಕ್ಕಾಗಿ ಕ್ಷಮೆಯಿರಲಿ ಎಂದಿದ್ದಾರೆ.
ರಾಹುಲ್ ಗಾಂಧಿ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ತನ್ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪೈಲೆಟ್ ಮತ್ತು ಸಹ ಪೈಲೆಟ್‍ರೊಂದಿಗೆ ತಾವು ಇರುವ ಚಿತ್ರವನ್ನು ಸಹ ಅಪ್‍ಲೋಡ್ ಮಾಡಿದ್ದಾರೆ.