ನವದೆಹಲಿ: ತಮಿಳುನಾಡಿನ ಮೆಕ್ಯಾನಿಕಲ್ ಇಂಜಿನಿಯರ್ ಪರಿಸರ ಸ್ನೇಹಿ ಎಂಜಿನ್ನನ್ನು ಡಿಸ್ಟಿಲ್ಡ್ ವಾಟರ್ ಮೂಲಕ ನಡೆಸುತ್ತಿದ್ದಾರೆ.ಮೂಲತಃ ಕೊಯಮತ್ತೂರಿನವರಾಗಿರುವ ಸೌಂತಿರಾಜನ್ ಕುಮಾರಸ್ವಾಮಿ ವಿನ್ಯಾಸಗೊಳಿಸಿದ ಇಂಜಿನ್ ವಿಶಿಷ್ಟವಾಗಿದೆ. ಇದು ಜಲಜನಕವನ್ನು ಇಂಧನ ಮೂಲವಾಗಿ ಬಳಸಿ ನಂತರ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಸೌಂತಿರಾಜನ್ ಕುಮಾರಸ್ವಾಮಿ "ಈ ಎಂಜಿನ್ ಅಭಿವೃದ್ಧಿಪಡಿಸಲು ಇದು ನನಗೆ 10 ವರ್ಷಗಳನ್ನು ತೆಗೆದುಕೊಂಡಿತು.ಇದು ವಿಶ್ವದ ಈ ರೀತಿಯ ಮೊದಲ ಆವಿಷ್ಕಾರವಾಗಿದೆ.ಇದು ಜಲಜನಕವನ್ನು ಇಂಧನ ಮೂಲವಾಗಿ ಬಳಸಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ" ಎಂದು ಎಂಜಿನಿಯರ್ ತಿಳಿಸಿದರು.ಕೆಲವು ದಿನಗಳಲ್ಲಿ ಜಪಾನ್ ನಲ್ಲಿ ಈ ಇಂಜಿನ್ ಪರಿಚಯಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.ಮುಂಬರುವ ದಿನಗಳಲ್ಲಿ ಭಾರತದಲ್ಲಿ ಅದನ್ನು ಪರಿಚಯಿಸಲಿದ್ದಾರೆ ಎಂದರು.  


"ನನ್ನ ಕನಸು ಭಾರತದಲ್ಲಿ ಈ ಎಂಜಿನ್ ಅನ್ನು ಪರಿಚಯಿಸುವುದು. ನಾನು ಆಡಳಿತಗಾರರ ಎಲ್ಲಾ ಬಾಗಿಲುಗಳನ್ನು ತಟ್ಟಿದ ಮೇಲೆ ನನಗೆ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ ಆದ್ದರಿಂದ ನಾನು ಜಪಾನ್ ಸರ್ಕಾರಕ್ಕೆ ಕೇಳಿ ಈ ಅವಕಾಶವನ್ನು ಪಡೆದುಕೊಂಡೆ. ಎಂದು "ಸೌಂತಿರಾಜನ್ ಕುಮಾರಸ್ವಾಮಿ ಹೇಳಿದರು.