ನವದೆಹಲಿ:ನೌಕರರಿಗೆ , ಪಿಎಫ್ (Provident Fund) ಖಾತೆಯಲ್ಲಿ ಠೇವಣಿ ಇರಿಸಿದ ಹಣ ಮತ್ತು ಅದರಿಂದ ಬರುವ ಬಡ್ಡಿ ಬಹಳ ಮುಖ್ಯ. ಏತನ್ಮಧ್ಯೆ, ಕೇಂದ್ರ ಸರ್ಕಾರವು ನೌಕರರ ಭವಿಷ್ಯ ನಿಧಿ (ಇಪಿಎಫ್) ಗೆ ನೀಡಲಾಗುವ ಬಡ್ಡಿಯ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.  ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಬುಧವಾರ ಅಂದರೆ ಸೆಪ್ಟೆಂಬರ್ 9 ರಂದು ಮಹತ್ವದ ಸಭೆ ನಡೆಸಲಿದೆ.


COMMERCIAL BREAK
SCROLL TO CONTINUE READING

ಬಡ್ಡಿ ದರ ಘೋಷಣೆಯಲ್ಲಿ ವಿಳಂಬ ವಿಷಯದ ಕುರಿತು ಚರ್ಚೆ ಸಂಭವ
ನಮ್ಮ ಸಹಯೋಗಿ ವೆಬ್ ಸೈಟ್ zeebiz.com ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಈ ಸಭೆಯಲ್ಲಿ ಬಡ್ಡಿ ದರ ನಿಗದಿ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ. 2019-20ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಶೇ .8.5 ರಷ್ಟು ಬಡ್ಡಿಯನ್ನು ನಿಗದಿಪಡಿಸಲಾಗಿದೆ, ಆದರೆ ಇದುವರೆಗೂ ಕುರಿತು ಅಧಿಸೂಚನೆ ನೀಡಲಾಗಿಲ್ಲ. ಇಂತಹುದರಲ್ಲಿ ಈ ವಿಳಂಬದ ಕುರಿತು ಚರ್ಚೆ ನಡೆಸಲಾಗುವ ಸಾಧ್ಯತೆ ಇದೆ. ನಾಳೆ ನಡೆಯುವ ಸಭೆಯಲ್ಲಿ ಬಡ್ಡಿದರಗಳ ಘೋಷಣೆಯ ಮೇಲೆ ಮುದ್ರೆ ಬೀಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.


7 ವರ್ಷಗಳ ಕನಿಷ್ಠ ದರ ಇದಾಗುವ ಸಾಧ್ಯತೆ
EPFOನ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಈ ವರ್ಷ ಮಾರ್ಚ್ 5 ರಂದು ನಡೆಸಿದ ಸಭೆಯಲ್ಲಿ EPF ಮೇಲೆ ವರ್ಷ 2019-20ರ ಅವಧಿಗಾಗಿ ಶೇ.8.50 ರಷ್ಟು ಬಡ್ಡಿ ದರ ಸಿಫಾರಸ್ಸು ಮಾಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.0.15 ರಷ್ಟು ಕಡಿಮೆಯಾಗಿದೆ. ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. EPF ಪ್ರಸ್ತಾಪಿಸಿರುವ ಈ ದರ ಕಳೆದ 7 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಬಡ್ಡಿದರ ಆಗಿರಲಿದೆ ಎನ್ನಲಾಗಿದೆ.


CBT ಕೈಗೊಂಡ ಈ ನಿರ್ಣಯವನ್ನು ಕೇಂದ್ರ ಹಣಕಾಸು ಸಚಿವಾಲಯದ ಅನುಮತಿಗೆ ಕಳುಹಿಸಲಾಗಿತ್ತು. ಆದರೆ, ಇದುವರೆಗೆ ಕೇಂದ್ರ ಹಣಕಾಸು ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿಲ್ಲ. ಕೇಂದ್ರ ಹಣಕಾಸು ಸಚಿವಾಲಯದ ಅನುಮತಿಯ ಬಳಿಕವೇ EPF ವಾರ್ಷಿಕ ಬಡ್ಡಿದರಗಳನ್ನು ಜಾರಿಗೊಲಿಸಾಲಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.