ನವದೆಹಲಿ:ಇನ್ಮುಂದೆ ಆನ್ಲೈನ್ ನಲ್ಲಿ ನಿಮ್ಮ ಭವಿಷ್ಯ ನಿಧಿ ಠೇವಣಿ ಹಿಂಪಡೆಯುವುದು ಇನ್ನಷ್ಟು ಸುಲಭವಾಗಲಿದೆ. ಇದಕ್ಕಾಗಿ EPFO ಪ್ರಾವಿಡೆಂಟ್ ಫಂಡ್ ಹಿಂಪಡೆಯಲು ಬಯಸುತ್ತಿರುವವರಿಗೆ ನೂತನ ಮೇಕಾನಿಸಂ ಸಿದ್ಧಪಡಿಸುತ್ತಿದೆ. ಇದಕ್ಕಾಗಿ ಆನ್ಲೈನ್ ಭವಿಷ್ಯ ನಿಧಿ ಸೆಟಲ್ಮೆಂಟ್ ಅರ್ಜಿ ಸಲ್ಲಿಸಿದ ದಿನವೇ ಫೈನಲ್ ಪ್ರೋಸೆಸ್ ಗೆ ಹಾಕಬೇಕಾಗಲಿದೆ. ಇದರಿಂದ ನಿಮ್ಮ ಭವಿಷ್ಯ ನಿಧಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಜಮೆಯಾಗಲಿದೆ. ಮೂಲಗಳ ಪ್ರಕಾರ, ದಿನದಲ್ಲಿ ಸಾವಿರಾರು ನೌಕರರು ಆನ್ಲೈನ್ ನಲ್ಲಿ ತಮ್ಮ ಠೇವಣಿಯನ್ನು ಕ್ಲೇಮ್ ಮಾಡುತ್ತಿರುವುದನ್ನು ಸುವ್ಯವಸ್ಥಿತವಾಗಿ ನಿಯಂತ್ರಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಆನ್ಲೈನ್ ನಲ್ಲಿ ತಮ್ಮ ಭವಿಷ್ಯ ನಿಧಿ ಠೇವಣಿ ಹಿಂಪಡೆಯಲು ಬಯಸುವವರಿಗೆ ಟೈಮ್ ಫ್ರೇಮ್ ಸಿದ್ಧಪಡಿಸಲು ನಿರ್ಧರಿಸಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈ ಮೊದಲು ನೀವು ಫೈನಲ್ ಸೆಟಲ್ಮೆಂಟ್ ಗಾಗಿ ಅರ್ಜಿ ಸಲ್ಲಿಸಿದ 3-5ದಿನಗಳ ಬಳಿಕ EPFO ತನ್ನ ಪ್ರೋಸೆಸ್ ಆರಂಭಿಸುತ್ತಿತ್ತು. ಆ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಹಣ ವರ್ಗಾವಣೆಯಾಗಲು 3 ದಿನಗಳ ಕಾಲಾವಕಾಶ ಬೇಕಾಗುತ್ತಿತ್ತು. ಅಂದರೆ, ಇದಕ್ಕಾಗಿ ಒಟ್ಟಾರೆ ಒಂದು ವಾರಗಳ ಕಾಲಾವಧಿ ಬೇಕಾಗುತ್ತಿತ್ತು. ಆದರೆ, ಶೀಘ್ರವೇ ಇದನ್ನು ಒಂದೇ ದಿನದ ಪ್ರಕ್ರಿಯೆಯನ್ನಾಗಿಸಲು ಸಿದ್ಧತೆಗಳು ನಡೆದಿವೆ. ಹೀಗಾಗಿ ಒಂದು ವೇಳೆ ನೀವೂ ಕೂಡ ನಿಮ್ಮ ಪ್ರಾವಿಡೆಂಟ್ ಫಂಡ್ ನಿಂದ ಆಂಶಿಕ ಅಥವಾ ಸಂಪೂರ್ಣ ಹಣ ಹಿಂಪಡೆಯಲು ಬಯಸುತ್ತಿದ್ದರೆ, ಈ ಕೆಲಸವನ್ನು ನೀವು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಮಾಡಬಹುದಾಗಿದೆ.


ಕೆಲವೇ ಗಂಟೆಗಳಲ್ಲಿ ನಿಮ್ಮ ಹಣ ನಿಮ್ಮ ಖಾತೆಗೆ ಬರಲಿದೆ
ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ EPFO ಹಿರಿಯ ಅಧಿಕಾರಿಯೊಬ್ಬರು, ಇನ್ಮುಂದೆ EPFO ನಿಂದ ಹಣ ಹಿಂಪಡೆಯುವ ಪ್ರಕ್ತಿಯೇ ಇನ್ನಷ್ಟು ಸುಲಭವಾಗಲಿದ್ದು, ಅರ್ಜಿದಾರರು ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಅವರ ಖಾತೆಗೆ ಹಣ ವರ್ಗಾವಣೆಯಾಗಲಿದೆ ಮತ್ತು ಇದಕ್ಕಾಗಿ EPFO ನೂತನ ಮಾದರಿಯೊಂದನ್ನು ಸಿದ್ಧಪಡಿಸಿದೆ ಎಂದಿದ್ದಾರೆ.


ಆನ್ಲೈನ್ ನಲ್ಲಿ ನಿಮ್ಮ PF ಠೇವಣಿ ಹಿಂಪಡೆಯುವುದು ಹೇಗೆ?
- ಮೊದಲು https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಿ.
- ನಂತರ ಅಲ್ಲಿ ನಿಮ್ಮ UAN ನಂಬರ್, ಪಾಸ್ವರ್ಡ್ ಹಾಗೂ ಕ್ಯಾಪ್ಚಾ ಕೋಡ್ ಬಳಸಿ ಲಾಗಿನ್ ಆಗಿ.
- ನಂತರ ನಿಮ್ಮ ಖಾತೆಯಲ್ಲಿರುವ ಮ್ಯಾನೆಜ್ ವಿಭಾಗದ ಮೇಲೆ ಕ್ಲಿಕ್ಕಿಸಿ, ನಿಮ್ಮ ಖಾತೆಗೆ ಸಂಬಂಧಿಸಿದಂತೆ KYC ವಿವರ ಪೂರ್ಣವಾಗಿದೆಯಾ       ಎಂಬುದನ್ನು ಪರೀಕ್ಷಿಸಿ.
- ನಂತರ ಆನ್ಲೈನ್ ಸರ್ವಿಸಸ್ ಗುಂಡಿಯ ಮೇಲೆ ಕಿಕ್ಕಿಸಿ, ಬಳಿಕ ತೆರೆದುಕೊಳ್ಳಲಿರುವ ಡ್ರಾಪ್ ಮೇನ್ಯೂ ನಿಂದ ಕ್ಲೇಮ್ ಆಯ್ಕೆ ಮಾಡಿ. 
- ನಿಮ್ಮ ಕ್ಲೇಮ್ ಫಾರಂ ಅನ್ನು ಸಬ್ಮಿಟ್ ಮಾಡಲು 'ಪ್ರೋಸೀಡ್ ಫಾರ್ ಆನ್ಲೈನ್ ಕ್ಲೇಮ್' ಕ್ಲಿಕ್ಕಿಸಿ.


ಹಣ ಹಿಂಪಡೆಯಲು ಮೂರು ಆಯ್ಕೆಗಳಿವೆ
ಆನ್ಲೈನ್ ನಲ್ಲಿ ನಿಮ್ಮ ಅರ್ಜಿ ಸಲ್ಲಿಸಲು ನಿಮಗೆ ಮೂರು ಆಯ್ಕೆಗಳನ್ನು ನೀಡಲಾಗಿದೆ. ಇದಕ್ಕಾಗಿ ಮೊದಲು ನೀವು ‘I Want To Apply For’ ಮೇಲೆ ಕ್ಲಿಕ್ಕಿಸಿ. ಇದರಲ್ಲಿ Full EPF Settlement, EPF Part withdrawal (loan/advance) या pension withdrawal ಎಂಬ ಮೂರು ಆಯ್ಕೆಗಳಿವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಇವುಗಳಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿ. ಅದಾದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಕಳುಹಿಸುವ ಮೂಲಕ ಇದನ್ನು ಖಚಿತಪಡಿಸಿಕೊಳ್ಳಲಾಗುವುದು. ನೀವು OTP ನಮೂದಿಸುತ್ತಿದ್ದಂತೆ ನಿಮ್ಮ ಅರ್ಜಿ EPFO ಬಳಿ ತಲುಪಲಿದೆ. 


ಮೇಲೆ ಸೂಚಿಸಲಾಗಿರುವ ಕ್ರಮದಿಂದ ಒಟ್ಟು 5-10 ದಿನಗಳ ಒಳಗಾಗಿ ನಿಮ್ಮ ಅಧಿಕೃತ ಬ್ಯಾಂಕ್ ಖಾತೆಗೆ ನಿಮ್ಮ ಹಣ ವರ್ಗಾವಣೆ ಮಾಡಲಾಗುವುದು. ಅಷ್ಟೇ ಅಲ್ಲ ಇದರ ಮಾಹಿತಿಯನ್ನೂ ಸಹ ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ SMS ಕಳುಹಿಸುವ ಮೂಲಕ ತಲುಪಿಸಲಾಗುತ್ತದೆ. ಆದರೆ, ನಿಮ್ಮ EPF ಖಾತೆಗೆ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಆಗಿದ್ದರೆ ಮಾತ್ರ ನೀವು ಈ ಆನ್ಲೈನ್ ಪ್ರಕ್ರಿಯೆಯನ್ನು ಮಾಡಬಹುದಾಗಿದೆ.