ವಿವಿಧ ಕಂಪನಿಗಳಿಗೆ ಅಡ್ವೈಸರಿ ಜಾರಿಗೊಳಿಸಿದ EPFO ಹೇಳಿದ್ದೇನು?

ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹಲವು ಕಾರ್ಮಿಕರು ತಮ್ಮ ತಮ್ಮ ಕಂಪನಿಗಳಿಗೆ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ.
ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಜಾರಿಯಲ್ಲಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹಲವು ಕಾರ್ಮಿಕರು ತಮ್ಮ ತಮ್ಮ ಕಂಪನಿಗಳಿಗೆ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾರ್ಮಿಕ ಸಚಿವಾಲಯ ಎಲ್ಲ ಕಂಪನಿಗಳಿಗೆ ಅಡ್ವೈಸರಿ ಜಾರಿಗೊಳಿಸಿದೆ. ಕಾರ್ಮಿಕ ಸಚಿವಾಲಯ ಜಾರಿಗೊಳಿಸಿರುವ ಈ ಅಡ್ವೈಸರಿ ಮಾಹಿತಿಯನ್ನು EPFO, SMS ಮೂಲಕ ತನ್ನ ಗ್ರಾಹಕರಿಗೆ ಹಾಗೂ ಕಂಪನಿಗಳಿಗೆ ತಲುಪಿಸುವಲ್ಲಿ ನಿರತವಾಗಿದೆ.
EPFO ಜಾರಿಗೊಳಿಸಿದೆ ಈ ಅಡ್ವೈಸರಿ
EPFO ವತಿಯಿಂದ ಕಳುಹಿಸಲಾಗುತ್ತಿರುವ ಸಂದೇಶದಲ್ಲಿ ಮಹಾಮಾರಿ ಕೊವಿಡ್-19 ವಿರುದ್ಧ ಹೋರಾಟ ನಡೆಸಲು ಇಡೀ ದೇಶವೇ ಒಗ್ಗಟ್ಟಾಗಿ ನಿಂತಿದೆ. ಈ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು ದೆಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಮನವಿಯನ್ನು ಆಧರಿಸಿ EPFO ಎಲ್ಲ ಖಾಸಗಿ ಹಾಗೂ ಸರ್ಕಾರಿ ಕಂಪನಿಗಳಿಗೆ ಅಡ್ವೈಸರಿ ಜಾರಿಗೊಳಿಸಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಕೆಲಸಕ್ಕೆ ಬರದೆ ಇರುವ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸದೆ ಇರಲು ಹಾಗೂ ವೇತನ ಕಡಿತಗೊಳಿಸದೆ ಇರಲು ಸೂಚನೆ ನೀಡಿದೆ.
ಸಮಯಕ್ಕೆ ಸಿಗಲಿದೆ ಪೆನ್ಷನ್
ಈ ಕುರಿತು ನಿರ್ದೇಶನಗಳನ್ನು ನೀಡಿರುವ EPFO ಪೆನ್ಶನ್ ಧಾರಕರಿಗೆ ಸರಿಯಾದ ಸಮಯಕ್ಕೆ ಪೆನ್ಶನ್ ನೀಡಲು ಸೂಚನೆ ನೀಡಿದೆ. ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ನೌಕರರ ಭವಿಷ್ಯನಿಧಿ ಸಂಘಟನೆ EPFO ಅಡಿ ಬರುವ ಸುಮಾರು 65 ಲಕ್ಷ ಪೆನ್ಷನ್ ಧಾರಕರಿಗೆ ಸರಿಯಾದ ಸಮಯಕ್ಕೆ ಪೆನ್ಷನ್ ನೀಡಲು ಸೂಚಿಸದೆ.
ನೆಮ್ಮದಿಯ ಸುದ್ದಿ ನೀಡಿದ EPFO
ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್ ಡೌನ್ ಘೋಷಿಸಿದ್ದಾರೆ. ಈ ಅವಧಿಯಲ್ಲಿ ದೇಶದ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಿದ್ದಂತೆ ತಡೆಯಲು ಹಲವು ಹೆಜ್ಜೆಗಳನ್ನು ಇಡಲಾಗುತ್ತಿದೆ. ಈ ಕುರಿತು ಭಾನುವಾರ ದೊಡ್ಡ ಘೋಷಣೆಯೊಂದನ್ನು ಮೊಳಗಿಸಿರುವ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಕಾರ್ಮಿಕರಿಗೆ ನೆಮ್ಮದಿ ನೀಡುವ ಸುದ್ದಿಯೊಂದನ್ನು ಪ್ರಕಟಿಸಿದೆ. ಈ ಘೋಷಣೆ ಅಡಿ ನೌಕರರು ತಮ್ಮ ಕೇಂದ್ರ ಭವಿಷ್ಯ ನಿಧಿ ಖಾತೆಯಿಂದ ಯಾವುದೇ ಅನುಮತಿ ಇಲ್ಲದೆ ತಮ್ಮ ಖಾತೆಯಿಂದ ಹಣವನ್ನು ಪಡೆದುಕೊಳ್ಳಬಹುದು ಎಂದು ಹೇಳಿದೆ. ಅದರಲ್ಲೂ ವಿಶೇಷವಾಗಿ ಈ ಹಣವನ್ನು ಪುನರ್ ಪಾವತಿಸುವ ಅವಶ್ಯಕತೆಯೂ ಇಲ್ಲ ಎಂದಿದೆ.
ಈ ಕಾಯ್ದೆಯದಿ ನೀಡಲಾಗಿದೆ ಈ ಸೌಕರ್ಯ
ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ EPFO ಯೋಜನೆಗೆ ತಿದ್ದುಪಡಿ ತರಲು ಜಾರಿಗೊಳಿಸಲಾಗಿರುವ ಅಧಿಸೂಚನೆ GSR 225(ಈ) ಅಡಿ ಈ ಸೌಕರ್ಯವನ್ನು ಕಾರ್ಮಿಕರಿಗೆ ನೀಡಿದೆ. ದೇಶಾದ್ಯಂತ ಕೊವಿಡ್ ಮಹಾಮಾರಿಯ ಹಿನ್ನೆಲೆ ಕಾರ್ಮಿಕರಿಗೆ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಈ ಸೌಲಭ್ಯದ ಅಡಿ EPFO ಗ್ರಾಹಕರು ತಮ್ಮ PF ಖಾತೆಯಲ್ಲಿ ಜಮೆಯಾಗಿರುವ ಒಟ್ಟು ಮೊತ್ತದ ಶೇ.75 ರಷ್ಟನ್ನು ಹಿಂದಕ್ಕೆ ಪಡೆಯಬಹುದಾಗಿದ್ದು, ಅದನ್ನು ಪುನರ್ಪಾವತಿಸುವ ಅನಿವಾರ್ಯತೆ ಇಲ್ಲ ಎಂದು ಹೇಳಿದೆ.