ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅವರ ಗೆಳೆಯ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು, 65 ವರ್ಷಗಳ ಕಾಲ ವಾಜಪೇಯಿ ತಮ್ಮ ಸ್ನೇಹಿತರಾಗಿದ್ದರು ಎಂದಿದ್ದಾರೆ. 


COMMERCIAL BREAK
SCROLL TO CONTINUE READING

"ಅಟಲ್ ಬಿಹಾರಿ ವಾಜಪೇಯಿ ಅವರು ಕೆಲವ ಸಹೋದ್ಯೋಗಿ ಆಗಿರಲಿಲ್ಲ, ನನ್ನ ಆಪ್ತ ಸ್ನೇಹಿತರಾಗಿದ್ದರು. ದೇಶದ ಮೊದಲ ಕಾಂಗ್ರೆಸೇತರ ಸರ್ಕಾರವನ್ನು ಮುನ್ನಡೆಸಿದ ಧೀಮಂತ ನಾಯಕ ವಾಜಪೇಯಿ. ಅವರನ್ನು ಇಡೀ ದೇಶವೇ ನೆನೆಯಲಿದೆ. ಅವರೊಂದಿಗೆ 6 ವರ್ಷಗಳ ಕಾಲ ಕೆಲಸ ನಿರ್ವಹಿಸಿದ ಸೌಭಾಗ್ಯ ನನ್ನದಾಗಿದೆ" ಎಂದು ಅಡ್ವಾಣಿ ಹೇಳಿದ್ದಾರೆ. 



ದೇಶಭಕ್ತಿ, ದಯೆ, ಕರುಣೆ, ಎಲ್ಲಕ್ಕಿಂತ ಮಿಗಿಲಾಗಿ ವಿರೋಧಿಗಳ ಹೃದಯವನ್ನೂ ಗೆಲ್ಲುತ್ತಿದ್ದ ಅವರ ಸಾಮರ್ಥ್ಯ ನನ್ನ ಮೇಲೆ ಸಾಕಷ್ಟು ಪರಿಣಾಮ ಬಿರಿದೆ. ಅವರ ಮಹತ್ವದ ಗುಣಗಳನ್ನು ನಾನು ನನ್ನ ಜೀವನದಲ್ಲಿಯೂ ಸಾಕಷ್ಟು ಅಳವಡಿಸಿಕೊಂಡಿದ್ದೇನೆ. ಅವರ ಆಕರ್ಷಕ ನಾಯಕತ್ವದ ಗುಣಗಳು ಎಲ್ಲರಿಗೂ ಮಾದರಿ ಎಂದು ಆಹ್ವಾನಿ ಹೇಳಿದ್ದಾರೆ.


ಕಳೆದ ಎರಡು ತಿಂಗಳಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಜೂ.11ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಮೃತಪಟ್ಟಿದ್ದಾರೆ. ಇವರ ಅತ್ಯಕ್ರಿಯೇ ಆಗಸ್ಟ್ 17ರಂದು  ಸಂಜೆ ದೆಹಲಿಯ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಂಜೆ 5 ಗಂಟೆಗೆ ನೆರವೇರಲಿದೆ. ವಾಜಪೇಯಿ ಅವರ ನಿಧನಕ್ಕೆ ಕೇಂದ್ರ ಸರ್ಕಾರ ದೇಶಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಿದೆ.