ನವದೆಹಲಿ: ಇದೇ ಮೊದಲ ಬಾರಿಗೆ ಸೈಬರ್ ದಾಳಿಯನ್ನು ನಿಷೇಧಿಸಿರುವ ಯುರೋಪಿಯನ್ ಒಕ್ಕೂಟ (Europian Union) ರಷ್ಯಾ ಮಿಲಿಟರಿ ಏಜೆಂಟರು, ಚೀನೀ ಸೈಬರ್ ಗೂಢಚಾರಿಕೆ ಮತ್ತು ಉತ್ತರ ಕೊರಿಯ ಕಂಪನಿಗಳು ಸೇರಿದಂತೆ ಇತರೆ ಸಂಘಟನೆಗಳ ಮೇಲೆ ನಿಷೇಧ ವಿಧಿಸಿದೆ.


COMMERCIAL BREAK
SCROLL TO CONTINUE READING

ಈ ನಿರ್ಬಂಧಗಳನ್ನು ವಿಧಿಸಲಾಗಿರುವ ಆರು ಜನರು ಮತ್ತು ಮೂರು ಗುಂಪುಗಳಲ್ಲಿ ರಷ್ಯಾದ ಜಿಆರ್‌ಯು ಮಿಲಿಟರಿ ಇಂಟೆಲಿಜೆನ್ಸ್ ಏಜೆನ್ಸಿ ಕೂಡ ಶಾಮೀಲಾಗಿದೆ. ಯುರೋಪಿಯನ್ ಯೂನಿಯನ್ ಪ್ರಧಾನ ಕಚೇರಿಯು 2017 ರ 'ವಾನಾ ಕ್ರೈ' ರಾನ್ಸಮವೇರ್ ಮತ್ತು 'ನೋಟ್‌ಪೇಟ್ಯಾ' ಮಾಲ್‌ವೇರ್ ದಾಳಿಗಳು ಮತ್ತು 'ಕ್ಲೌಡ್ ಹಾಪರ್' ಸೈಬರ್ ಗೂಢಚಾರ್ಯ ಕಾರ್ಯಾಚರಣೆಗಳಿಗೆ ಕಾರಣವಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಇದಕ್ಕೆ ಸಂಬಂಧಿಸಿದಂತೆ ಗುರುವಾರ ಹೇಳಿಕೆ ನೀಡಿದ್ದ ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿಗಳ ಮುಖ್ಯಸ್ಥ ಜೋಸೆಫ್ ಬೋರೆಲ್, ಈ ನಿಷೇಧ ವ್ಯಕ್ತಿಗಳಿಗೆ ಸಂಬಂಧಿಸಿದ ಯಾತ್ರೆ ಹಾಗೂ ಆಸ್ತಿಗಳ ಲೇವಾದೇವಿ ಹಾಗೂ ಸ್ವತ್ತುಗಳ ವರ್ಗಾವಣೆಯನ್ನು ಒಳಗೊಂಡಿರುತ್ತದೆ ಎಂದು ಹೇಳಿದ್ದರು.


GRU ಸದಸ್ಯರೆಂದು ಗುರಿತಿಸಲಾದ ನಾಲ್ಕು ರಷ್ಯಾ ನಾಗರಿಕರ ಮೇಲೆ ನೆದರ್ಲ್ಯಾಂಡ್ಸ್ ಸಂಘಟನೆ 'ಪ್ರೊಹಿಬಿಶನ್ ಆಫ್ ಕೆಮಿಕಲ್ ವೆಪನ್ಸ್' ಅಥವಾ OPCW ವೈಫೈ ನೆಟ್ವರ್ಕ್ ಅನ್ನು ಹ್ಯಾಕ್ ಮಾಡಿದ ಆರೋಪವಿದೆ. ಈ ಸಂಘಟನೆ ಸಿರಿಯಾದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆಯ ತನಿಖೆ ನಡೆಸಿತ್ತು. 2018 ರಲ್ಲಿ ನಡೆದಿದ್ದ ಈ ದಾಳಿಯನ್ನು ಡಚ್ ಅಧಿಕಾರಿಗಳು ವಿಫಲಗೊಳಿಸಿದ್ದರು.


ಉಕ್ರೇನ್‌ನೊಂದಿಗೆ ವ್ಯಾಪಾರ ಮಾಡುವ ಕಂಪನಿಗಳನ್ನು ಗುರಿಯಾಗಿಸಿಕೊಂಡು ವಿಶ್ವದಾದ್ಯಂತ ಶತಕೋಟಿ ಡಾಲರ್‌ಗಳಷ್ಟು ಹಾನಿ ಮಾಡಿದ ಮತ್ತು 2015 ಮತ್ತು 2016 ರಲ್ಲಿ ಉಕ್ರೇನ್‌ನ ಪವರ್ ಗಿಡ್ ಮೇಲೆ ಸೈಬರ್ ದಾಳಿಗೆ ಕಾರಣವಾದ ನೋಟ್‌ಪ್ಯಾಟಾಗಾಗಿಯೂ ಕೂಡ ಜಿಆರ್‌ಯು ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ.


ಇನ್ನೊಂದೆಡೆ ಇಬ್ಬರು ಚೀನಾದ ಪ್ರಜೆಗಳು 'ಆಪರೇಷನ್ ಕ್ಲೌಡ್ ಹಾಪರ್' ನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ, ಇಯು ಆರು ದ್ವೀಪಗಳಲ್ಲಿನ ಕಂಪನಿಗಳನ್ನು ಕ್ಲೌಡ್ ಸೇವಾ ಪೂರೈಕೆದಾರರ ಮೂಲಕ ಪರಿಣಾಮ ಬೀರಲಾಗಿದ್ದು ಮತ್ತು ವಾಣಿಜ್ಯಾತ್ಮಕವಾಗಿ ಸೂಕ್ಷ್ಮ ದತ್ತಾಂಶಗಳಿಗೆ ಅನಧಿಕೃತ ಪ್ರವೇಶವನ್ನು ಪಡೆದು ಸಾಕಷ್ಟು ಆರ್ಥಿಕ ನಷ್ಟವನ್ನು ಮಾಡಲಾಗಿದೆ ಎಂದು ಇಯು ಹೇಳಿದೆ.


ಇದಲ್ಲದೆ, ವಾನಾ ಕ್ರೈ ಸೈಬರ್ ದಾಳಿ, ಸೋನಿ ಪಿಕ್ಚರ್ಸ್ ಹ್ಯಾಕಿಂಗ್ ಮತ್ತು ವಿಯೆಟ್ನಾಮೀಸ್ ಮತ್ತು ಬಾಂಗ್ಲಾದೇಶದ ಬ್ಯಾಂಕುಗಳ ಸೈಬರ್ ದರೋಡೆಗಳಲ್ಲಿ ಸಹಕರಿಸಿದೆ ಎನ್ನಲಾಗಿರುವ ಉತ್ತರ ಕೊರಿಯಾದ ಕಂಪನಿ ಚೋಸುನ್ ಎಕ್ಸ್ ಪೋ ಮೇಲೆಯೂ ಕೂಡ ಇಯು ನಿರ್ಬಂಧ ವಿಧಿಸಿದೆ.