ರಾಮ ಮತ್ತು ಕೃಷ್ಣ ಸಹ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು- ರಾಜನಾಥ್ ಸಿಂಗ್
ಲಕ್ನೋ: ರಾಜಕೀಯವೂ ಸ್ವಾತಂತ್ರಕ್ಕೂ ಮೊದಲೇ ಭಾರತದ ಭಾಗವಾಗಿತ್ತು, ರಾಮ ಮತ್ತು ಕೃಷ್ಣರು ಸಹ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಶನಿವಾರದಂದು ತಿಳಿಸಿದ್ದಾರೆ.
ಲಕ್ನೋ ದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ "ಸ್ವಾತಂತ್ರ್ಯಕ್ಕೂ ಮೊದಲೆ ರಾಜಕೀಯವು ಭಾರತದ ಭಾಗವಾಗಿದ್ದು, ಶ್ರೀರಾಮ ಮತ್ತು ಕೃಷ್ಣ ಕೂಡ ರಾಜಕಾರಣದಲ್ಲಿ ತೊಡಗಿದ್ದರು. ರಾಮನಿಗೆ 'ರಾಮ ರಾಜ್ಯ' ನಿರ್ಮಿಸುವುದು ಅವರ ರಾಜಕೀಯ ಗುರಿಯಾಗಿತ್ತು, ಆದ್ದರಿಂದ ರಾಮನು ರಾಜಕೀಯವನ್ನು ಭಕ್ತಿ ಪೂರಕವಾಗಿ ಮಾಡಿದರು" ಎಂದು ತಿಳಿಸಿದರು .
ರಾಜನಾಥ್ ಸಿಂಗ್ ತಮ್ಮ ಸಂಸದೀಯ ಕ್ಷೇತ್ರ ಲಕ್ನೋಗೆ ಏಪ್ರಿಲ್ 27 ರಿಂದ ಎರಡು ದಿನ ಭೇಟಿ ಪ್ರವಾಸವನ್ನು ಆರಂಭಿಸಿದ್ದಾರೆ.