ಇಂದೋರ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಇಂದು ಹೊರಬೀಳಲಿರುವ ಫಲಿತಾಂಶ ಬಿಜೆಪಿ ಸರ್ಕಾರದ ಎರಡು ಕ್ಯಾಬಿನೆಟ್ ಮಂತ್ರಿಗಳೂ ಸೇರಿದಂತೆ, 70 ವರ್ಷ ಮೇಲ್ಪಟ್ಟ ಹನ್ನೆರಡು ನಾಯಕರ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತದೆ. ಈ ನಾಯಕರು ಚುನಾವಣೆಗೆ ಸಂಪೂರ್ಣ ಶಕ್ತಿಯಿಂದ ಸ್ಪರ್ಧಿಸುವ ಮೂಲಕ ಅವರ ಸಾಮರ್ಥ್ಯ ಸಾಬೀತುಪಡಿಸಲು ಪ್ರಯತ್ನಿಸಿದ್ದಾರೆ. ನವೆಂಬರ್ 28 ರಂದು ನಡೆದ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು 70 ವರ್ಷ ವಯಸ್ಸಿನ ನಾಯಕರ ಉಮೇದುವಾರಿಕೆಯಲ್ಲಿ ನಂಬಿಕೆ ಹೊಂದಿದ್ದವು.


COMMERCIAL BREAK
SCROLL TO CONTINUE READING

ಬಿಜೆಪಿ ನಾಯಕರ ಪಟ್ಟಿ:
ಸುದೀರ್ಘ ರಾಜಕೀಯ ಅನುಭವ ಹೊಂದಿರುವ ನಾಯಕರಿಗೆ ಬಿಜೆಪಿ ಮಣೆ ಹಾಕಿತ್ತು.  ಬಿಜೆಪಿ ಮಾಜಿ ಸಚಿವ ಮೋತಿ ಕಶ್ಯಪ್ (78), ಲಖರ್ ರಸಾಲ್ ಸಿಂಗ್ (76), ಘೋಡ್ನ ದಿಂದ ರಾಜೇಂದ್ರ ಸಿಂಗ್ (76), ನಾಗಾದ್ ನಿಂದ ಮಾಜಿ ಮಂತ್ರಿ  ನಾಗೇಂದ್ರ ಸಿಂಗ್ (76), ರೆನ್ಗಾವ್ ನಿಂದ ಜುಗಲ್ ಕಿಶೋರ್ ಬಗ್ರಿ (75) ಚುನಾವಣಾ ಕಣದಲ್ಲಿದ್ದರು. ನಿರ್ಗಮಿತ ಆರೋಗ್ಯ ಸಚಿವ ಸಚಿವ ರುಸ್ತಮ್ ಸಿಂಗ್ (73) ಮುರಾಯದಿಂದ ಸ್ಪರ್ಧಿಸಿದ್ದರು. ನಿರ್ಗಮಿತ ಹಣಕಾಸು ಸಚಿವ ಜಯಂತ್ ಮಲೈಯಾ (71) ತನ್ನ ಸಾಂಪ್ರದಾಯಿಕ ದಾಮೋಹ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇದಲ್ಲದೆ, ಇಬ್ಬರು ಬಿಜೆಪಿ ಅಭ್ಯರ್ಥಿಗಳಾದ ಶಿವಬಹದ್ದೂರ್ ಸಿಂಗ್ ಚಂದೇಲ್ ಸಿಂಗ್ಹಹಾಲ್  ಕ್ಷೇತ್ರದಿಂದ ಮತ್ತು ಮಹಾರಾಜಪುರದಿಂದ ಮನೇಂದ್ರ ಸಿಂಗ್ ಅವರು 70-70 ವರ್ಷ ವಯಸ್ಸಿನವರು ಸ್ಪರ್ಧಿಸಿದ್ದರು.


ಕಾಂಗ್ರೆಸ್ ನಲ್ಲೂ ಕೂಡ ಹಿರಿ ತಲೆಗೆ ಮನ್ನಣೆ:
ಮತ್ತೊಂದೆಡೆ ಕಾಂಗ್ರೆಸ್ ನಲ್ಲೂ ಕೂಡ ಹಿರಿ ತಲೆಗೆ ಮನ್ನಣೆ ನೀಡಲಾಗಿತ್ತು. ಮಾಜಿ ಸಚಿವ ಸರ್ತಾಜ್ ಸಿಂಗ್ (78) ಅತ್ಯಂತ ಹಿರಿಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ತಮ್ಮ ಸಾಂಪ್ರದಾಯಿಕ ಶಿವಾನಿ-ಮಾಳ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದ್ದರು. ಇದೀಗ ಅವರು ಹೋಶಂಗಾಬಾದ್ನಿಂದ ಸ್ಪರ್ಧಿಸಿದ್ದಾರೆ. ಮಂಡ್ಸೌರ್ನಿಂದ ತಾಮಲಾಲ್ ಸಹಾರಾ (71), ಕಟಂಗಿಯಿಂದ ಮಾಜಿ ಸಚಿವ ನರೇಂದ್ರ ನಹಾಟಾ (72) ಸ್ಪರ್ಧಿಸಿದ್ದರು.


ಮಾಜಿ ಮಂತ್ರಿ ಕೂಡ ಕಣದಲ್ಲಿ:
ರಾಜ್ಯದ ಅತ್ಯಂತ ಅನುಭವಿ ರಾಜಕಾರಣಿಗಳಾದ ಮಾಜಿ ಕೃಷಿ ಸಚಿವ ರಾಮಕೃಷ್ಣ ಕುಸ್ಮಾರಿಯಾ (75) ಕೂಡಾ ಕಣದಲ್ಲಿದ್ದರು. "ಬಾಬಾಜಿ" ಎಂದು ಜನಪ್ರಿಯವಾಗಿ ಕರೆಯಲಾಗುವ ಕುಸುಮಾರಿಯಾ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ. ಇದರ ನಂತರ, ಅವರು ಸ್ವತಂತ್ರ ಅಭ್ಯರ್ಥಿಯಾಗಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ (88) ಮತ್ತು ಹಿರಿಯ ಬಿಜೆಪಿ ನಾಯಕ ಈ ಬಾರಿ ತಮ್ಮ ಸಾಂಪ್ರದಾಯಿಕ ಗೋವಿಂದಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಭೋಪಾಲ್ನ ಈ ಕ್ಷೇತ್ರದಲ್ಲಿ, ಬಿಜೆಪಿ ಇವರ ಸೊಸೆ 
ಕೃಷ್ಣ ಗೌರ್ (50) ಅವರನ್ನು ಕಣಕ್ಕಿಳಿಸಿದೆ.