ನವ ದೆಹಲಿ: ಬಹುಕೋಟಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾಗೆ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.


COMMERCIAL BREAK
SCROLL TO CONTINUE READING

ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಭರತ್ ಪರಾಶರ್, ಕೋಲ್ಕತ್ತಾ ಮೂಲದ ವಿನಿ ಐರನ್ ಮತ್ತು ಸ್ಟೀಲ್ ಉದ್ಯೋಗ್ ಲಿಮಿಟೆಡ್ ಕಂಪನಿಗೆ ತಪ್ಪೋಪ್ಪಿಗೆಯಾಗಿ 50 ಲಕ್ಷ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ಮಧು ಕೋಡಾಗೆ ಜೈಲು ಶಿಕ್ಷೆಯೊಂದಿಗೆ 5 ಲಕ್ಷ ರೂ. ದಂಡ ಮತ್ತು ಗುಪ್ತಾ ಗೆ 1 ಲಕ್ಷ ರೂ. ದಂಡ ಅಥವಾ 2 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 


ಇದರೊಂದಿಗೆ ಕೋಡಾ ಅವರ ಆಪ್ತ ಸಹಾಯಕ ವಿಜಯ್ ಜೋಶಿಗೆ 45 ಲಕ್ಷ ರೂ. ದಂಡ ವಿಧಿಸಲಾಗಿದ್ದು ಜಾರ್ಖಂಡ್ ಮಾಜಿ ಮುಖ್ಯ ಕಾರ್ಯದರ್ಶಿ ಎ.ಕೆ.ಬಸು ಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. 


ಕಲ್ಲಿದ್ದಲು ನಿಕ್ಷೇಪ ಹಗರಣದಲ್ಲಿ ಮಧು ಕೋಡಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತ, ಮಾಜಿ ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಬಸುವನ್ನು ಸಿಬಿಐ ಕೋರ್ಟ್ ಬುಧವಾರ ದೋಷಿ ಎಂದು ತೀರ್ಪು ನೀಡಿತ್ತು.


ಈ ಕಲ್ಲಿದ್ದಲು ಹಗರಣದಲ್ಲಿ ಬಸಂತ್‌ ಭಟ್ಟಾಚಾರ್ಯ, ಬಿಪಿನ್‌ ಬಿಹಾರಿ ಸಿಂಗ್‌ (ಇಬ್ಬರೂ ಸರಕಾರಿ ಅಧಿಕಾರಿಗಳು), ವಿಸುಲ್‌ನ ನಿರ್ದೇಶಕ ವೈಭವ್‌ ತುಳಸಿಯಾನ್‌, ಕೋಡ ಅವರ ನಿಕಟವರ್ತಿ ವಿಜಯ್‌ ಜೋಷಿ ಮತ್ತು ಚಾರ್ಟರ್ಡ್‌ ಅಕೌಂಟೆಂಟ್‌ ಆಗಿರುವ ನವೀನ್‌ ಕುಮಾರ್‌ ತುಲಸಿಯಾನ್‌ ಅವರು ಇತರ ಆರೋಪಿಗಲಾಗಿದ್ದಾರೆ. 


ಎಂಟು ಮಂದಿ ಆರೋಪಿಗಳು ಈ ಹಿಂದೆ ತಮಗೆ ಸಮನ್ಸ್‌ ಜಾರಿಯಾದುದನ್ನು ಅನುಸರಿಸಿ ಕೋರ್ಟಿಗೆ ಹಾಜರಾಗಿದ್ದು ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.