ಹಿಮಾಚಲ ಪ್ರದೇಶದಲ್ಲಿ 2017ರ ನವೆಂಬರ್ ನಲ್ಲಿ  ನಡೆದ ಚುನಾವಣೆಯ ಫಲಿತಾಂಶ ಡಿ.18 ರ ಸೋಮವಾರ ಹೊರಬೀಳಲಿದೆ. ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಮೋದಿ ಹವಾ ಬೀಸಿ, ಕಮಲ ಅರಳಲಿದೆಯೇ? ಅಥವಾ ಹಿಮಾಚಲ ಪ್ರದೇಶದ ಜನತೆ ಮತ್ತೆ ಕಾಂಗ್ರೆಸ್  ಪಕ್ಷದ ಕೈ ಹಿಡಿಯುವರೇ?  ಎಂಬುದು ಸೋಮವಾರ ತಿಳಿಯಲಿದೆ.


COMMERCIAL BREAK
SCROLL TO CONTINUE READING

ಆದರೆ ಚುನಾವಣೋತ್ತರ ಸಮೀಕ್ಷೆಗಳು ಈ ಬಗ್ಗೆ ಏನು ಹೇಳುತ್ತಿವೆ ಎಂಬುದನ್ನು ನೋಡೋಣ...


ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ. 



ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಬಿಜೆಪಿ 51 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ 17 ಸ್ಥಾನಗಳನ್ನು ಪಡೆಯಬಹುದೆಂದು ಹೇಳಲಾಗುತ್ತಿದೆ.



ಚಾಣಕ್ಯ ಸಮೀಕ್ಷೆಯ ಪ್ರಕಾರ ಬಿಜೆಪಿ 55 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ 13 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.



ವಿಎಂಆರ್ ಸಮೀಕ್ಷೆಯ ಪ್ರಕಾರ ಬಿಜೆಪಿ 51 ಸ್ಥಾನಗಳನ್ನು ಪಡೆಯಲಿದೆ ಹಾಗೂ ಕಾಂಗ್ರೇಸ್ 16 ಸ್ಥಾನಗಳನ್ನು ಪಡೆಯಬಹುದೆಂದು ಸೂಚಿಸುತ್ತದೆ.



ನ್ಯೂಸ್ ಎಕ್ಸ್ ಸಮೀಕ್ಷೆಯ ಪ್ರಕಾರ ಬಿಜೆಪಿ 47 ರಿಂದ 55 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ಗೆ 18 ರಿಂದ 24 ಸ್ಥಾನಗಳು ಲಭಿಸಲಿದೆ ಎಂದು ಸಮೀಕ್ಷೆ ಹೇಳಿದೆ.