ನವದೆಹಲಿ: ಈಗ ಸಾಮಾಜಿಕ ಮಾಧ್ಯಮಗಳಲ್ಲಿ  #FaceAppChallenge ಹೊಸ ಬಿರುಗಾಳಿಯನ್ನೇ ಸೃಷ್ಟಿಸಿದೆ. ಎಲ್ಲರೂ ಈಗ ಈ ಆಪ್ ನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ತರುಣ, ಹರೆಯ, ವೃದ್ಧಾವಸ್ಥೆ ಎಲ್ಲ ಹಂತಗಳನ್ನು ಈ ಆಪ್ ಮೂಲಕ  ಒಮ್ಮೆಗೆ ನೋಡುತ್ತಿದ್ದಾರೆ. 



COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತ್ರ ಇದೆಲ್ಲದಕ್ಕೂ ಭಿನ್ನವಾದ ಟ್ವಿಸ್ಟ್ ನೀಡಿದ್ದಾರೆ. ಅಷ್ಟಕ್ಕೂ ಅವರು ಮಾಡಿದ್ದೇನು ಅಂತೀರಾ? 'ಕ್ಯೂಂಕಿ ಸಾಸ್ ಭಿ ಬಾಹು ತಿ' ಎನ್ನುವ ಶೋವೊಂದರ ಫೋಟೋವೊಂದನ್ನುಅವರು ಈಗ ತಮ್ಮ ಇನ್ಸ್ಟಾ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸುಮಾರು ಹತ್ತು ವರ್ಷಗಳ ಹಿಂದಿನದು ಎಂದು ಹೇಳಲಾಗುತ್ತಿದೆ. ಆಗ ಸ್ಮೃತಿ ಇರಾನಿಯವರು  ಈ ಷೋ ನಲ್ಲಿ ತುಳಸಿ ವಿರಾಣಿ ಪಾತ್ರದಲ್ಲಿ ನಟಿಸಿದ್ದರು.


ಈಗ ಇದೆ ಫೋಟೋ ವನ್ನು ಅವರು ಶೇರ್ ಮಾಡಿಕೊಂಡು #FaceAppChallenge ಬರುವುದಕ್ಕೂ ಮೊದಲೇ ಏಕ್ತಾ ಕಪೂರ್ ಹೀಗೆ ಮಾಡಿದ್ದರು ಎಂದು ಅವರು ಬರೆದುಕೊಂಡಿದ್ದಾರೆ. ಅಂದರೆ ಇದರರ್ಥ ಅವರು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಫೋಟೋ ನಿಜವಾದದ್ದು ಹೊರತು ಯಾವುದೇ ಆಪ್ ಮೂಲಕ ಮಾಡಿರುವಂತದ್ದಲ್ಲ ಎನ್ನುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.