ನವದೆಹಲಿ: ಸಾಮಾಜಿಕ ಮಾಧ್ಯಮದ ಮೂರು ಅತಿ ದೊಡ್ಡ ಪ್ಲಾಟ್ಫಾರ್ಮ್ ಗಳಾಗಿರುವ ಇನ್ಸ್ಟಾಗ್ರಾಮ್, ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ಮೆಸೆಂಜರ್ ಗಳನ್ನು ಸಂಯೋಜಿಸಲು ಫೇಸ್ ಬುಕ್(Facebook) ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಸ್ತುತ ಅವರು ಈ ಪ್ರಕ್ರಿಯೆಗೆ ಅಮೇರಿಕಾದಲ್ಲಿ ಚಾಲನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, Instagram ಹಾಗೂ ಫೇಸ್ಬುಕ್ ಮೆಸೆಂಜರ್ ಚಾಟ್ಸ್ ನ ಹೊಸ ಮರ್ಜರ್ ಅನ್ನು ಹಲವು ಬಳಕೆದಾರರಿಗಾಗಿ ಈಗಾಗಲೇ ಬಿಡುಗಡೆ ಮಾಡಲಾಗಿದೆ.  ಈ ಕುರಿತಾಗಿ ಪ್ರಕಟಗೊಂಡಿರುವ ವರದಿಯೊಂದರ ಪ್ರಕಾರ Instagram ಆಪ್ ತನ್ನ ಬಳಕೆದಾರರಿಗೆ pop-ups ಬಿಡುಗಡೆ ಮಾಡಲು ಆರಂಭಿಸಿದೆ. ಇದರಿಂದ ಇನ್ಸ್ಟಾ ಗ್ರಾಮ್  ಮೂಲಕವೇ ಬಳಕೆದಾರರು Facebook ಮೆಸೆಂಜರ್ ಬಳಕೆ ಮಾಡಬಹುದು. ಒಂದು ಬಾರಿ ಅಪ್ಡೇಟ್ ಮಾಡಿದ ಬಳಿಕ ಬಳಕೆದಾರರು ತಮ್ಮ ವೈಶಿಷ್ಟ್ಯಗಳಲ್ಲಿ ಬದಲಾವಣೆ ಮಾಡಬಹುದು ಹಾಗೂ ಎರಡೂ ಚಾಟ್ ಗಳನ್ನು ಮರ್ಜ್ ಮಾಡಬಹುದು.


ಈ ಕುರಿತು ಪ್ರಕಟಗೊಂಡ ವರದಿಯಲ್ಲಿ ಪ್ರಸ್ತುತ ಫೇಸ್ ಬುಕ್ ಜೊತೆಗೆ ಫ್ರೆಂಡ್ಸ್ ವೈಶಿಷ್ಟ್ಯವನ್ನು ನೀಡಲಾಗಿಲ್ಲ. ಆದರೆ, ಅಪ್ಡೇಟ್ ಮಾಡಿದ ಬಳಿಕ ಉಳಿದೆಲ್ಲ ವೈಶಿಷ್ಟ್ಯಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕಾಗಿ DM ಐಕಾನ್ ಅನ್ನು ಮೆಸೆಂಜರ್ ಐಕಾನ್ ಮೂಲಕ ಬದಲಾಯಿಸಲಾಗಿದೆ. ಈ ನೂತನ ವೈಶಿಷ್ಟ್ಯ ಸೇರ್ಪಡೆಗೊಂಡ ಬಳಿಕ ಇನ್ಸ್ಟಾಗ್ರಾಮ್ ಚಾಟ್ ಇನ್ನಷ್ಟು ಕಲರ್ ಫುಲ್ ಆಗಿ ಕಾಣಿಸಲಾರಂಭಿಸಿದೆ. ಪ್ರಸ್ತುತ ಫೇಸ್ ಬುಕ್ ಇನ್ಸ್ಟಾಗ್ರಾಮ್-ಮೆಸೆಂಜರ್ ಸಂಯೋಜನೆಯ ಸೆಟ್ಟಿಂಗ್ ನಲ್ಲಿ ತೊಡಗಿದೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಅಧಿಕೃತವಾಗಿ ಎಲ್ಲಿಯೂ ಸಂಸ್ಥೆ ಹೇಳಿಕೊಂಡಿಲ್ಲ.