ನವದೆಹಲಿ: ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಮಾಲೀಕತ್ವದ Jio ಸಂಷ್ಟೇಯಲ್ಲಿ ವಿಶ್ವದ ಅತಿ ದೊಡ್ಡ ಸಾಮಾಜಿಕ ಮಾಧ್ಯಮ ಸಂಸ್ಥೆಯಾಗಿರುವ Facebook, ಶೇ.10ರಷ್ಟು ಪಾಲುದಾರಿಕೆಯನ್ನು ಪಡೆಯಲು ಬಯಸಿದೆ ಎಂದು ವರದಿಯಾಗಿದೆ. ಇದಕ್ಕಾಗಿ Facebook ಸಂಸ್ಥೆ ರಿಲಯನ್ಸ್ ಸಂಸ್ಥೆಯ ಜೊತೆಗೆ ಹಲವು ಬಿಲಿಯನ್ ಡಾಲರ್ ನ ಹೂಡಿಕೆ ಕುರಿತು ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದಕ್ಕೆ ಸಂಬಂಧಿಸಿದಂತೆ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಸುಮಾರು 5000-5350 ಕೋಟಿ ರೂ. ಮೌಲ್ಯ ಹೊಂದಿದೆ. ಇದರಲ್ಲಿ 6.5 -7 ಬಿಲಿಯನ್ ಪಾಲುದಾರಿಕೆಯನ್ನು Facebook ಖರೀದಿಸಲು ಬಯಸುತ್ತಿದೆ ಎನ್ನಲಾಗಿದೆ. ಇನ್ನೊಂದೆಡೆ ವಿಶ್ವದ ಖ್ಯಾತ ಸರ್ಚ್ ಇಂಜಿನ್ ದೈತ್ಯ Google ಕೂಡ Reliance ಸಂಸ್ಥೆಯ ಜೊತೆಗೆ ಪಾಲುದಾರಿಕೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದೆ ಎಂದೂ ಕೂಡ ವರದಿಗಳು ಹೇಳಿವೆ. ಆದರೆ, ಈ ಕುರಿತು ಜಿಯೋ ಆಗಲಿ ಅಥವಾ ಯಾವುದೇ ಸಂಸ್ಥೆಯಾಗಲಿ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿಲ್ಲ.


2015 ರಲ್ಲಿ ಭಾರತೀಯ ಟೆಲಿಕಾಂ ಮಾರುಕಟ್ಟೆಗೆ ಕಾಲಿಟ್ಟ Reliance Jio, ಫೆಬ್ರುವರಿ 2020 ರವೆರೆಗೆ ಸುಮಾರು 25 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಅಷ್ಟೇ ಅಲ್ಲ ತನ್ಮೂಲಕ ಕಂಪನಿ ಭಾರತದಲ್ಲಿ ನಂ.1 ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿದೆ. ರಿಲಯನ್ಸ್ ಜಿಯೋ ಕಂಪನಿಯ ಇತರೆ ಪ್ಲಾನ್ ಗಳೂ ಕೂಡ ತುಂಬಾ ಆಕರ್ಷಕವಾಗಿವೆ. ಇವುಗಳಲ್ಲಿ ಜಿಯೋ ಟಿವಿ, ಜಿಯೋ ಸಿನೆಮಾ, ಜಿಯೋ ನ್ಯೂಸ್, ಜಿಯೋ ಸಾವನ್ ಇತ್ಯಾದಿಗಳು ಶಾಮೀಲಾಗಿವೆ.