ನವದೆಹಲಿ: ಸಾಮಾಜಿಕ ಮಾಧ್ಯಮ ಸೈಟ್ ಫೇಸ್‌ಬುಕ್ (Facebook) ಇತ್ತೀಚಿನ ದಿನಗಳಲ್ಲಿ ತನ್ನ ಪ್ರತಿಷ್ಠೆ ಕಾಯ್ದುಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ.  ಸುಳ್ಳು ಸುದ್ದಿ ಮತ್ತು ನಕಲಿ ಸುದ್ದಿಗಳನ್ನು ತಡೆಯಲು ಪ್ರಸ್ತುತ ಒಂದು ದೊಡ್ಡ ಹೆಜ್ಜೆ ಇಡಲಿದೆ ಎಂದು ಫೇಸ್‌ಬುಕ್ ಹೇಳಿಕೊಂಡಿದೆ. ಫೇಸ್ ಬುಕ್ ಶೀಘ್ರದಲ್ಲಿಯೇ ತನ್ನ ಮೆಸೆಂಜರ್ ಆಪ್ ನಲ್ಲಿ ವಾಟ್ಸ್ ಆಪ್ ರೀತಿಯಲ್ಲಿ ಫಾರ್ವರ್ಡ್ ಮೆಸೇಜ್ ಮಿತಿಯನ್ನು ನಿರ್ಧರಿಸಲಿದೆ.


COMMERCIAL BREAK
SCROLL TO CONTINUE READING

ಕೇವಲ ಐದು ಜನರು ಅಥವಾ ಗುಂಪುಗಳಿಗೆ ಮೆಸೇಜ್ ಪಾರ್ವರ್ಡ್ ಮಾಡಬಹುದು
ಫೇಸ್‌ಬುಕ್  ತನ್ನ ಮೆಸೆಂಜರ್‌ನಲ್ಲಿಯೂ  ಸಹ, ವಾಟ್ಸ್‌ಆ್ಯಪ್‌ನಲ್ಲಿರುವಂತೆ ಯಾವುದೇ ಸಂದೇಶವನ್ನು ಐದು ಕ್ಕೂ ಹೆಚ್ಚು ಜನರಿಗೆ ಅಥವಾ ಗುಂಪಿನಲ್ಲಿ ಏಕಕಾಲದಲ್ಲಿ ಸಾಧ್ಯವಾಗದ ರೀತಿಯ ವೈಶಿಷ್ಟ್ಯಜೋಡಿಸಲು ಮುಂದಾಗಿದೆ. 2018 ರಲ್ಲಿ, ವಾಟ್ಸಾಪ್ ನಕಲಿ ಸುದ್ದಿಗಳನ್ನು ನಿಲ್ಲಿಸಲು ಐದು ಜನರಿಗೆ ಸೀಮಿತ ಫಾರ್ವರ್ಡ್ ಮಾಡುವುದನ್ನು ಜಾರಿಗೆ ತಂದಿತ್ತು ಹಾಗೂ ಇದೀಗ  ಅದೇ ವೈಶಿಷ್ಟ್ಯವು ಫೇಸ್ಬುಕ್ ಮೆಸೆಂಜರ್ನಲ್ಲಿಯೂ ಬರಲಿದೆ.. ಇದಲ್ಲದೆ, ಲಾಕ್ ಇನ್ ಅಪ್ಲಿಕೇಶನ್‌ನಂತಹ ಗೌಪ್ಯತೆ ವೈಶಿಷ್ಟ್ಯಗಳು ಇತ್ತೀಚೆಗೆ ಮೆಸೆಂಜರ್‌ನಲ್ಲಿ ಬಂದಿವೆ.


ಟೆಸ್ಟಿಂಗ್ ಮೋಡ್ ನಲ್ಲಿದೆ ಈ ವೈಶಿಷ್ಟ್ಯ
ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಂದೇಶ ರವಾನೆ ಮಿತಿಯ ವೈಶಿಷ್ಟ್ಯವು ಪ್ರಸ್ತುತ ಪರೀಕ್ಷೆಯ ಹಂತದಲ್ಲಿದೆ, ಪರೀಕ್ಷೆ ಯಶಸ್ವಿಯಾದ ನಂತರ ಅದನ್ನು ಎಲ್ಲರಿಗೂ ಬಿಡುಗಡೆ ಮಾಡಲಾಗುತ್ತದೆ. ಹೊಸ ಅಪ್‌ಡೇಟ್‌ನಲ್ಲಿ, ಒಂದೇ ಸಂದೇಶವನ್ನು ಐದು ಕ್ಕೂ ಹೆಚ್ಚು ಜನರಿಗೆ ಫಾರ್ವರ್ಡ್ ಮಾಡಿದರೆ, ನೀವು 'ಫಾರ್ವರ್ಡ್ ಮಾಡುವ ಮಿತಿಯನ್ನು ತಲುಪಿದ್ದೀರಿ' ಅಧಿಸೂಚನೆಯನ್ನು ನೀಡಲಿದೆ.


ಈ ಹೊಸ ವೈಶಿಷ್ಟ್ಯದ ಬಗ್ಗೆ, ಹೇಳಿಕೆ ನೀಡಿರುವ ಫೇಸ್ ಬುಕ್ 'ಫಾರ್ವರ್ಡ್ ಮಾಡುವುದನ್ನು ನಿರ್ಬಂಧಿಸುವುದು ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯುವಲ್ಲಿ ಬಹಳ ಪರಿಣಾಮಕಾರಿಯಾಗಿದೆ, ವಾಟ್ಸಾಪ್ ವಿಷಯದಲ್ಲಿ ನಮಗೆ ಇದರಿಂದ ಸಾಕಷ್ಟು ಲಾಭ ಸಿಕ್ಕಿದೆ. ಅದರ ನಂತರ ನಾವು ಅದನ್ನು ಮೆಸೆಂಜರ್‌ಗಾಗಿ ಬಿಡುಗಡೆ ಮಾಡಿದ್ದೇವೆ 'ಫೇಸ್‌ಬುಕ್ ಮೆಸೆಂಜರ್‌ನ ಈ ವೈಶಿಷ್ಟ್ಯವನ್ನು ಈ ವರ್ಷದ ಮಾರ್ಚ್‌ನಲ್ಲಿ ಪರೀಕ್ಷೆಯ ಸಮಯದಲ್ಲಿ ಮೊದಲು ಗಮನಿಸಲಾಗಿತ್ತು ಮತ್ತು ಇದೀಗ  ಕಂಪನಿಯು ಅದನ್ನು ಆಯ್ದ ಕೆಲವು ಬಳಕೆದಾರರಿಗೆ ಬಿಡುಗಡೆ ಮಾಡುತ್ತಿದೆ. ಫೇಸ್‌ಬುಕ್ ಮೆಸೆಂಜರ್‌ನಲ್ಲಿನ ಸಂದೇಶ ರವಾನೆ ಮಿತಿ  ವೈಶಿಷ್ಟ್ಯವು ಸೆಪ್ಟೆಂಬರ್ 24 ರಿಂದ ಜಾಗತಿಕವಾಗಿ ಬಿಡುಗಡೆಯಾಗಲಿದೆ.


ಇದರ ಅವಶ್ಯಕತೆ ಏನು?
ಫೇಸ್‌ಬುಕ್ ಈ ಕ್ರಮವನ್ನು ಏಕೆ ತೆಗೆದುಕೊಳ್ಳುತ್ತಿದೆ ಎಂಬುದು ಹಲವರ ಪ್ರಶ್ನೆಯಾಗಿದೆ. ವಾಸ್ತವವಾಗಿ, ಫೇಸ್‌ಬುಕ್‌ನಲ್ಲಿ ನಕಲಿ ಸುದ್ದಿಗಳನ್ನು ಪ್ರಚಾರ ಮಾಡಲಾಗಿದೆಯೆಂದು ಆರೋಪಿಸಲಾಗಿದೆ, ಅದರ ನಿಸ್ಪಕ್ಷತನ ಕೂಡ ಹಲವು ವರ್ಷಗಳಿಂದ ಪ್ರಶ್ನಾರ್ಹವಾಗಿದೆ. ಯುಎಸ್ ಸೆನೆಟ್ನಲ್ಲಿ ಮಾರ್ಕ್ ಜುಕರ್‌ಬರ್ಗ್‌ ಅವರ ಬೆವರಿಳಿಸುವ ವಿಚಾರಣೆಗಳು ಕೂಡ ನಡೆದಿವೆ. ಇದೀಗ ಭಾರತ ಸರ್ಕಾರ ಕೂಡ ರಾಷ್ಟ್ರೀಯತಾವಾದಿ ದೃಷ್ಟಿಕೋನಗಳನ್ನು ಫೇಸ್ ಬುಕ್ ಹತ್ತಿಕ್ಕುತ್ತಿದೆ ಎಂದು ಆರೋಪಿಸಿ ಫೇಸ್‌ಬುಕ್‌ ಮಾಲೀಕರಿಗೆ ಪತ್ರ ಬರೆದಿದೆ.