ಪ್ರಪಂಚದ ಖ್ಯಾತ ಸಾಮಾಜಿಕ ಮಾಧ್ಯಮ ತಾಣವಾಗಿರುವ ಫೇಸ್ಬುಕ್ ಕಾಲೇಜು ವಿದ್ಯಾರ್ಥಿಗಳಿಗಾಗಿ Campus ಹೆಸರಿನ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಆದರೆ, ಇದನ್ನು ಕೇವಲ ಕಾಲೇಜು ವಿದ್ಯಾರ್ಥಿಗಳು ಮಾತ್ರ ಬಳಕೆ ಮಾಡಬಹುದು ಎನ್ನಲಾಗಿದ್ದು, ಇದಕ್ಕೆ ID Card ಅವಶ್ಯಕತೆ ಕೂಡ ಇದೆ.


COMMERCIAL BREAK
SCROLL TO CONTINUE READING

ಖ್ಯಾತ ಸಾಮಾಜಿಕ ಮಾಧ್ಯಮ ಜಾಲತಾಣ ಫೇಸ್ ಬುಕ್ ಕಾಲೇಜ್ ಕ್ಯಾಂಪಸ್ ನಿಂದಲೇ ಆರಂಭಗೊಂಡಿತ್ತು. ಹೌದು, ಈ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ ಹಾರ್ವರ್ಡ್ ನಲ್ಲಿ ಅಧ್ಯಯನ ನಡೆಸುತ್ತಿದ್ದ ವೇಳೆ ಕಾಲೇಜು ಕೋಣೆಯೊಂದರಿಂದಲೇ ಫೇಸ್ ಬುಕ್ ಆರಂಭಿಸಿದ್ದರು ಎನ್ನಲಾಗಿದೆ.


ಆದರೆ ಇದೀಗ ನಿಜವಾಗಿಯೂ ಕೂಡ ಫೇಸ್ಬುಕ್ 'Campus' ಹೆಸರಿನ ವೈಶಿಷ್ಟ್ಯವೊಂದನ್ನು ಪರೀಕ್ಷಿಸಲು ಮುಂದಾಗಿದೆ. ವರದಿಗಳ ಪ್ರಮಾರ 'Campus' ಹೆಸರಿನ ಈ ವೈಶಿಷ್ಟ್ಯವನ್ನು ಕೇವಲ ವಿದ್ಯಾರ್ಥಿಗಳು ಮಾತ್ರ ಎಕ್ಸಸ್ ಮಾಡಬಹುದಾಗಿದೆ ಎನ್ನಲಾಗಿದೆ. ಈ ವೈಶಿಷ್ಟ್ಯಕ್ಕೆ ಲಾಗಿನ್ ಆಗಲು ವಿದ್ಯಾರ್ಥಿಗಳು ತಮ್ಮ ಕಾಲೇಜ್ ID ಬಳಕೆ ಮಾಡುವುದು ಅವಶ್ಯಕವಾಗಿದೆ.


ಹಾಂಗ್ ಕಾಂಗ್ ಮೂಲಕ ಹ್ಯಾಕರ್ ಆಗಿರುವ Jane Manchun Wong, ಫೇಸ್ ಬುಕ್ ಪರಿಚಯಿಸಲು ಹೊರಟಿರುವ ಈ ಹೊಸ ವೈಶಿಷ್ಟ್ಯದ ಕುರಿತು ಎಲ್ಲಕ್ಕಿಂತ ಮೊದಲು ಟ್ವೀಟ್ ಮಾಡಿದ್ದಾರೆ. ಸಾಮಾನ್ಯವಾಗಿ ಜೇನ್, ಯಾವುದೇ ಒಂದು ಆಪ್ ಅಥವಾ ಸೈಟ್ ತನ್ನ ಹೊಸ ವೈಶಿಷ್ಟ್ಯವನ್ನು ಪರಿಚಯಿಸುವುದಕ್ಕೂ ಮುನ್ನವೇ ಆ ವೈಶಿಷ್ಟ್ಯಗಳ ಕುರಿತು ವಿವರಗಳನ್ನು ಬಹಿರಂಗಪಡಿಸುತ್ತಾರೆ.


ಫೇಸ್ ಬುಕ್ ನ ಈ ವೈಶಿಷ್ಟ್ಯದ ಕುರಿತು ಟ್ವೀಟ್ ಮಾಡಿರುವ ಜೇನ್, "Facebook, ಕ್ಯಾಂಪಸ್ ಹೆಸರಿನ ಹೊಸ ಫೀಚರ್ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇದು ಕೇವಲ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರಲಿದೆ. Facebook ನ ಈ ವೈಶಿಷ್ಟ್ಯದಲ್ಲಿ ಗ್ರೂಪ್ಸ್, ಇವೆಂಟ್ಸ್ ಗಳಂತಹ ಆಪ್ಶನ್ ಗಲಿವೆ ಎಂದು ಜೇನ್ ಹೇಳಿದ್ದಾಳೆ.


ತನ್ನ ಟ್ವೀಟ್ ನಲ್ಲಿ ಜೇನ್ ಒಂದು ಸ್ಕ್ರೀನ್ ಶಾಟ್ ಕೂಡ ಹಂಚಿಕೊಂಡಿದ್ದು, ಇದರಲ್ಲಿ Campus ವೈಶಿಷ್ಟ್ಯವನ್ನು ನೋಡಬಹುದಾಗಿದೆ. ಇದರಲ್ಲಿ ನೀವು ನಿಮ್ಮ ಕಾಲೇಜು ಮಾಹಿತಿ ನಮೂದಿಸುವುದು ಅಗತ್ಯವಾಗಿದ್ದು, ಅದನ್ನೇ ಆಧಾರವಾಗಿಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಇತರೆ ವಿದ್ಯಾರ್ಥಿಗಳ ಜೊತೆಗೆ ಕನೆಕ್ಟ್ ಆಗಬಹುದು.


Facebook ತನ್ನ ಈ ವೈಶಿಷ್ಟ್ಯದ ಮೂಲಕ ಟೀನೇಜ್ ಯುವಕ ಯುವತಿಯರನ್ನು ಫೋಕಸ್ ಮಾಡಿದೆ ಎಂಬುದು ಇಲ್ಲಿ ಗಮನಾರ್ಹ. ಏಕೆಂದರೆ ಅಮೇರಿಕಾದಲ್ಲಿ ಟೀನೇಜ್ ವಯಸ್ಸಿನ ಯುವಕ-ಯುವತಿಯರು ಹೆಚ್ಚಿನ ಪ್ರಮಾಣದಲ್ಲಿ ಇನ್ಸ್ಟಾಗ್ರಾಮ್ ಹಾಗೂ ಶೇರ್ ಚಾಟ್ ಗಳಂತಹ ವೈಶಿಷ್ಟ್ಯಗಳತ್ತ ಹೆಚ್ಚು ವಾಲಿದ್ದಾರೆ. ಈ ಕುರಿತು ಪ್ರಕಟಗೊಂಡ ವರದಿಯೊಂದರ ಪ್ರಕಾರ 2014-15ರಲ್ಲಿ ಸುಮಾರು ಶೇ.71 ರಷ್ಟು ಟೀನೇಜ್ ಯುವಕ-ಯುವತಿಯರು ಫೇಸ್ ಬುಕ್ ಬಳಕೆ ಮಾಡುತ್ತಿದ್ದರು, ಆದರೆ, 2018 ಇದು ಇಳಿಕೆಯಾಗಿ ಶೇ.51 ಕ್ಕೆ ಬಂದು ತಲುಪಿದೆ. 


ಆದರೆ, ಇದುವರೆಗೆ Facebookನ ಈ ವೈಶಿಷ್ಟ್ಯದ ಕುರಿತಾಗಲೀ ಅಥವಾ ಅದರ ವೈಶಿಷ್ಟ್ಯದ ಕುರಿತಾಗಲೀ ಫೇಸ್ಬುಕ್ ಅಧಿಕೃತವಾಗಿ ಯಾವುದೇ ಮಾಹಿತಿನನ್ನು ಪ್ರಕಟಿಸಿಲ್ಲ. ಆರಂಭದಲ್ಲಿ ಕೇವಲ ಸೀಮಿತ ಬಳಕೆದಾರರಿಗೆ ಮಾತ್ರ ಕಂಪನಿ ಇದನ್ನು ಟೆಸ್ಟಿಂಗ್ ಗಾಗಿ ಬಳಕೆಮಾಡಲು ಅನುಮತಿ ನೀಡಲಿದೆ ಎನ್ನಲಾಗಿದೆ.