ಒಡಿಶಾ : ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ  27 ವರ್ಷದ ಮಹಿಳೆಯೊಬ್ಬರು ಒಂಭತ್ತು ತಿಂಗಳಿನಿಂದ ನಕಲಿ ಗರ್ಭಧಾರಣೆಯ ನಾಟಕವಾಡಿದ್ದಾರೆ. ಇದೀಗ ಮಹಿಳೆಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಒಂಭತ್ತು ತಿಂಗಳಿನಿಂದ ತಾನು ಗರ್ಭಿಣಿ ಎಂದು ಎಲ್ಲರನ್ನೂ ನಂಬಿಸಿದ್ದ ಮಹಿಳೆ, ಇದೀಗ ತನ್ನ ನವಜಾತ ಶಿಶು ಕಳುವಾಗಿದೆ ಎಂದು ಹೊಸ ವರಸೆ ತೆಗೆದಿದ್ದಾರೆ. 


COMMERCIAL BREAK
SCROLL TO CONTINUE READING

ಮಹಿಳೆ ಈ ರೀತಿ ಯಾವ ಉದ್ದೇಶದಿಂದ ಮಾಡಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಗರ್ಭಿಣಿಯಾಗಬೇಕೆಂದು ಪತಿ ಒತ್ತಾಯಿಸಿದ್ದರಿಂದ ಮಹಿಳೆ ಈ ರೀತಿಯ ಕಥೆಯನ್ನು ಹೆಣೆದಿರಬಹುದು ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು  ಗರ್ಭಿಣಿ ಮತ್ತು ಬಾಣಂತಿಯರಿಗೆ ರಾಜ್ಯ ಸರ್ಕಾರ ನೀಡುವ ಸವಲತ್ತುಗಳನ್ನು ಪಡೆಯುವ ಸಲುವಾಗಿ ಈ ರೀತಿ ಮಾಡಿರಬಹುದು ಎಂದು  ಹೇಳಿದ್ದಾರೆ. 


ಇದನ್ನೂ ಓದಿ : ದೆಹಲಿಯಲ್ಲಿ ಕಂಪಿಸಿದ ಭೂಮಿ, ಆತಂಕದಿಂದ ಹೊರಗೆ ಬಂದ ಜನ


ಬಿರೇನಪಲ್ಲಿ ಗ್ರಾಮದ ಕೌಸಲ್ಯ ಭೂಮಿಯಾ ಎಂಬ ಮಹಿಳೆ ವಿರುದ್ಧ ಮತ್ತಿಲಿ ಪೊಲೀಸ್ ಠಾಣೆಯಲ್ಲಿ ಫೋರ್ಜರಿ ಪ್ರಕರಣ ದಾಖಲಾಗಿದೆ ಎಂದು ಮಲ್ಕನಗಿರಿ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ ಪ್ರಫುಲ್ಲಾನಂದ  ಹೇಳಿದ್ದಾರೆ. 


ಒಡಿಶಾ ಸರ್ಕಾರವು ಮಮತಾ ಯೋಜನೆಯಡಿಯಲ್ಲಿ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಮೊದಲ ಎರಡು ಹೆರಿಗೆಗಾಗಿ 5,000  ರೂಪಾಯಿಯನ್ನು ಎರಡು ಕಂತುಗಳಲ್ಲಿ ನೀಡುತ್ತದೆ. ಈ ನಿರ್ಣಾಯಕ ತಿಂಗಳುಗಳಲ್ಲಿ ಪೋಷಣೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಮಹಿಳೆಯರಿಗೆ ಈ ಸೌಲಭ್ಯ ನೀಡುತ್ತದೆ.  ಆದರೆ ಮಹಿಳೆ ಇದೇ ಉದ್ದೇಶದಿಂದ ಈ ರೀತಿ ಸುಳ್ಳು ಗರ್ಭಧಾರಣೆಯ ನಾಟಕವಾಡಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಅಲ್ಲದೆ, ಮಹಿಳೆ ಆರ್ಥಿಕ ಪ್ರಯೋಜನಗಳನ್ನು ಪಡೆದಿದ್ದಾರೆಯೇ ಎನ್ನುವುದರ ಬಗ್ಗೆ ಕೂಡಾ ನಿಖರ ಮಾಹಿತಿ ಇಲ್ಲ. 


ಇದನ್ನೂ ಓದಿ : 80 ಸಾವಿರ ಪೊಲೀಸರಿದ್ದರೂ ಅಮೃತಪಾಲ್ ಎಸ್ಕೇಪ್ ಆಗಿದ್ದು ಹೇಗೆ? ಪಂಜಾಬ್ ಸರ್ಕಾರಕ್ಕೆ ಹೈಕೋರ್ಟ್ ತರಾಟೆ


ಮಹಿಳೆ ಸ್ಥಳೀಯ ಸಹಾಯಕ ನರ್ಸ್ ಮಿಡ್‌ವೈಫ್ (ANM) ಕೆಲಸಗಾರರೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.  ಆದರೆ ಆಶಾ ಕಾರ್ಯಕರ್ತೆಯರ ಬಾಲಿ ತಮ್ಮ ಹೆಸರು ನೊಂದಾಯಿಸಿ ಕೊಂಡಿರಲಿಲ್ಲ. ಐಸಿಡಿಎಸ್ ಯೋಜನೆಯಡಿ ಸರ್ಕಾರದಿಂದ ನೀಡಲಾಗುವ ಮೊಟ್ಟೆ ಮತ್ತು ಇತರ ಪೌಷ್ಟಿಕಾಂಶದ ಪೂರಕಗಳನ್ನು  ಮಹಿಳೆ ಪಡೆದುಕೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.