ಇದು ಫ್ಯಾನ್ಸಿ ಯೋಜನೆಗಳ ಹೊಂದಾಣಿಕೆಯಿಲ್ಲದ ಬಜೆಟ್ - ರಾಹುಲ್ ಗಾಂಧಿ
ಕೇಂದ್ರ ಬಜೆಟ್ 2018 ಯಾವುದೇ ಹೊಂದಾಣಿಕೆಯ ಬಜೆಟ್ಗಳಿಲ್ಲದೆ ಕೇವಲ ಫ್ಯಾನ್ಸಿ ಯೋಜನೆಗಳನ್ನು ಒಳಗೊಂಡಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ನವದೆಹಲಿ : ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್ 2018 ಯಾವುದೇ ಹೊಂದಾಣಿಕೆಯ ಬಜೆಟ್ಗಳಿಲ್ಲದೆ ಕೇವಲ ಫ್ಯಾನ್ಸಿ ಯೋಜನೆಗಳನ್ನು ಒಳಗೊಂಡಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, NDA ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಕಳೆದರೂ ರೈತರು ನ್ಯಾಯೋಚಿತ ಬೆಲೆ ಪಡೆಯುತ್ತಿಲ್ಲ, ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಿಲ್ಲ. ಅಲ್ಲದೆ, ಈ ಸರ್ಕಾರದ ಯಾವುದೇ ಯೋಜನೆಗಳಿಗೆ ಬಜೆಟ್ ಹೊಂದಿಕೆಯಾಗುವುದಿಲ್ಲ ಎಂಡು ಅಭಿಪ್ರಾಯಿಸಿದ್ದಾರೆ.
ಮುಂದುವರೆದು ಬರೆದಿರುವ ಅವರು "ನಮ್ಮ ಅದೃಷ್ಟಕ್ಕೆ ಈ ಸರ್ಕಾರದ ಅವಧಿ ಪೂರ್ಣಗೊಳ್ಳಲು ಕೇವಲ 1 ವರ್ಷ ಮಾತ್ರ ಇದೆ" ಎಂದಿದ್ದಾರೆ.
NDA ಸರ್ಕಾರದ ಆರ್ಥಿಕ ನೀತಿಗಳ ಕುರಿತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮೇಲೆ ನಿರಂತರ ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ, ಗುಜರಾತ್ ಚುನಾವಣಾ ಪ್ರಚಾರದ ಸಮಯದಲ್ಲಿ, ಅವರು GSTಯನ್ನು 'ಗಬ್ಬರ್ ಸಿಂಗ್ ತೆರಿಗೆ' ಎಂದು ಕರೆದಿದ್ದರು. ಅಲ್ಲದೆ, ಬೆಳೆಯುತ್ತಿರುವ ನಿರುದ್ಯೋಗ ಸಮಸ್ಯೆಯ ಕುರಿತು ತೀವ್ರ ವಾಗ್ದಾಳಿ ನಡೆಸಿದ್ದರು.