Farmer Protest : ಕೇಂದ್ರ ಸರ್ಕಾರ -ರೈತ ಸಂಘಟನೆಗಳ ಮಾತುಕತೆ ; ನಾಲ್ಕು ಬೇಡಿಕೆಗಳ ಪೈಕಿ ಎರಡನ್ನು ಈಡೇರಿಸಲು ಒಪ್ಪಿದ ಸರ್ಕಾರ
ರೈತರ ನಾಲ್ಕು ಬೇಡಿಕೆಗಳ ಪೈಕಿ ಎರಡನ್ನು ಈಡೇರಿಸಲು ಸರ್ಕಾರ ಒಪ್ಪಿದೆ. ಜನವರಿ 4 ರಂದು 7ನೇ ಸುತ್ತಿನ ಮಾತುಕತೆ ನಿಗದಿಪಡಿಸಲಾಗಿದೆ.
ನವದೆಹಲಿ : ಕೃಷಿ ಬಿಲ್ ಕುರಿತಂತೆ ರೈತ ಸಂಘಟನೆಗಳೊಂದಿಗೆ (Farmer unions) ಸರ್ಕಾರದ ಆರನೇ ಸುತ್ತಿನ ಮಾತುಕತೆ ಅಂತ್ಯಗೊಂಡಿದೆ. ರೈತರ ನಾಲ್ಕು ಬೇಡಿಕೆಗಳ ಪೈಕಿ ಎರಡನ್ನು ಈಡೇರಿಸಲು ಸರ್ಕಾರ ಒಪ್ಪಿದೆ. ಜನವರಿ 4 ರಂದು 7ನೇ ಸುತ್ತಿನ ಮಾತುಕತೆ ನಿಗದಿಪಡಿಸಲಾಗಿದೆ. ದೆಹಲಿ ವಾಯುಮಾಲಿನ್ಯ ತಡೆ ಸುಗ್ರೀವಾಜ್ಞೆ ಮೂಲಕ ವಿಧಿಸಲಾಗಿರುವ ಶಿಕ್ಷೆಯನ್ನು ರದ್ದು ಪಡಿಸಲು ಸರ್ಕಾರ ಒಪ್ಪಿದೆ. ಈ ಸುಗ್ರೀವಾಜ್ಞೆ ಪ್ರಕಾರ ಪೈರಿನ ಕಟಾವಿನ ಬಳಿಕ ಉಳಿಯುವ ಕೂಳೆಯನ್ನು ಸುಟ್ಟರೆ ಅದು ಶಿಕ್ಷಾರ್ಹಅಪರಾಧವಾಗಿದೆ. ಅದರಿಂದ ರೈತರಿಗೀಗ ವಿನಾಯಿತಿ ಸಿಕ್ಕಿದೆ.
ಇದಲ್ಲದೆ ವಿದ್ಯುತ್ ಶಕ್ತಿ ಸುಧಾರಣೆ ಮಸೂದೆಯಲ್ಲಿ ಬದಲಾವಣೆ ತರಲು ಸರಕಾರ ಒಪ್ಪಿಕೊಂಡಿದೆ. ಈ ಎರಡೂ ವಿಚಾರದಲ್ಲಿ ಸರಕಾರ ಮತ್ತು ರೈತರ ನಡುವೆ ಸಹಮತ ವ್ಯಕ್ತವಾಗಿದೆ. ಆದರೆ, ಮೂರು ಕೃಷಿ ಕಾನೂನುಗಳ ರದ್ದತಿ, ಎಂಎಸ್ ಪಿ (MSP) ವಿಚಾರದಲ್ಲಿ ಸಹಮತಕ್ಕೆ ಬರಲು ಸಭೆ ವಿಫಲವಾಗಿದೆ. ಜನವರಿ 4 ರಂದು 7 ನೇ ಸುತ್ತಿನ ಮಾತುಕತೆ ನಿಗದಿಪಡಿಸಲಾಗಿದ್ದು, ಈ ಬಗ್ಗೆ ಅದರಲ್ಲಿ ಚರ್ಚೆ ನಡೆಯಲಿದೆ.
ALSO READ : Farmers Protest: ನಾವು ಸಹ ರೈತರೊಂದಿಗೆ ಇದ್ದೇವೆ, ರೈತರನ್ನು ಬೆಂಬಲಿಸಿದ ಟ್ಯಾಕ್ಸಿ ಯೂನಿಯನ್
ಸಮಿತಿ ರಚನೆ ಪ್ರಸ್ತಾಪಕ್ಕೆ ರೈತರ ವಿರೋಧ :
ಇಂದಿನ ಸಭೆಯಲ್ಲಿ ಕೃಷಿ ಕಾನೂನನ್ನು ಏಕಾಏಕಿ ರದ್ದು ಪಡಿಸುವ ಪ್ರಸ್ತಾಪವನ್ನು ಸರ್ಕಾರ ನಿರಾಕರಿಸಿತ್ತು. ಆದರೆ, ಕೃಷಿ ಕಾನೂನಿನಲ್ಲಿ ರೈತರು (Farmers) ವ್ಯಕ್ತಪಡಿಸಿರುವ ಆಕ್ಷೇಪಗಳನ್ನು ಜಾರಿಗೆ ತರಲು ಸಮಿತಿ (committee) ರಚಿಸುವ ಪ್ರಸ್ತಾಪವನ್ನು ಸರ್ಕಾರ ಸಭೆಯ ಮುಂದಿಟ್ಟಿತು. ಆದರೆ, ಸಮಿತಿ ರಚಿಸುವ ಪ್ರಸ್ತಾಪವನ್ನು ರೈತ ನಾಯಕರು ನಿರಾಕರಿಸಿದರು.
ರೈತರೊಂದಿಗೆ ಊಟ ಮಾಡಿದ ಸಚಿವರು:
ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ರೈತರಿಗೆ ರೈತರೇ ಊಟದ ವ್ಯವಸ್ಥೆ ಮಾಡಿದ್ದರು. ಸಚಿವರಾದ ನರೇಂದ್ರ ಸಿಂಗ್ ತೋಮರ್ (Narendra Singh Tomar), ಪಿಯೂಶ್ ಗೋಯಲ್ (Piyush Goyal) ಮತ್ತು ಸೋಮ್ ಪ್ರಕಾಶ್ (Som Parkash) ರೈತರೊಂದಿಗೆ ಸೇರಿ ಲಂಗರ್ ಸವಿದರು. ಹಿಂದಿನ ಸಭೆಯಲ್ಲಿ ಸರ್ಕಾರದ ಊಟ ಸೇವಿಸಲು ರೈತರು ನಿರಾಕರಿಸಿದ್ದರು.
ALSO READ : ಜನವರಿ 31ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯ ಮೇಲೆ ನಿರ್ಬಂಧ ವಿಸ್ತರಣೆ
ಕೃಷಿ ಕಾನೂನು ರದ್ದತಿಗೆ ರೈತರ ಹಠ :
ಸಭೆ ಮುಗಿದ ಬಳಿಕ ಮಾತನಾಡಿದ ಹಲವಾರು ರೈತ ನಾಯಕರು, ಇಂದಿನ ಮಾತುಕತೆ ಸಕಾರಾತ್ಮಕವಾಗಿ ಸಾಗಿತ್ತು ಎಂದು ಸಮಧಾನ ವ್ಯಕ್ತ ಪಡಿಸಿದ್ದಾರೆ. ತಮ್ಮ ಎರಡು ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಉಳಿದ ವಿಚಾರಗಳನ್ನೂ ಮುಕ್ತ ಮನಸ್ಸಿನಿಂದ ಚರ್ಚಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಜನವರಿ 4 ರಂದು ಮಾತುಕತೆ ಮುಂದುವರಿಯಲಿದೆ. ಆದರೆ, ಕೃಷಿ ಕಾನೂನು ರದ್ದತಿಯಾಗದ ಹೊರತು ರೈತರು ಪ್ರತಿಭಟನೆಯಿಂದ (Farmer Protest) ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ಬೇಡಿಕೆ ಈಡೇರುವ ತನಕ ರೈತರ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.