ಶ್ರೀಕಾಕುಲಂ: ಸಾಲಭಾದೆ ತಾಳಲಾರದೆ ಶ್ರೀಕಾಕುಲಂ ಜಿಲ್ಲೆಯ ಮಂದಾಸ ಗ್ರಾಮದಲ್ಲಿ ಗುರುವಾರ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


COMMERCIAL BREAK
SCROLL TO CONTINUE READING

ಅಧಿಕಾರಿಗಳ ಪ್ರಕಾರ, ರೈತ, ಕೊಂಡೆ ದಾನಯ್ಯ, ತನ್ನ ಕೃಷಿ ಭೂಮಿಯಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಕೊಂಡೆ ದಾನಯ್ಯ ಎಂಬ ರೈತರೊಬ್ಬರು ಸಾಲಭಾದೆ ತಾಳಲಾರದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು  ಮಂದಾಸಾ ಸಬ್ ಇನ್ಸ್‌ಪೆಕ್ಟರ್ ಸಿ ಪ್ರಸಾದ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಕೊಂಡೆದಾನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಹೇಳಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಪ್ರಸಾದ್ ತಿಳಿಸಿದ್ದಾರೆ.


ಮಾಹಿತಿ ಪ್ರಕಾರ, ಟಿಟ್ಲಿ ಚಂಡಮಾರುತದಲ್ಲಿ ಕೊಂಡೆ ದಾನಯ್ಯ ಅವರ ಬೆಳೆಗಳು ನಾಶವಾಗಿದ್ದು, ಅವರಿಗೆ ಯಾವುದೇ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರೊಬ್ಬರಾದ ಡೊಕ್ಕರಿ ದಾನಯ್ಯ ಹೇಳಿಕೊಂಡಿದ್ದಾರೆ. "ಅವರಿಗೆ ಜಯರಾಮ್ ಮತ್ತು ಕೃಷ್ಣಯ್ಯ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರು ಮೂರು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅವನ ಬೆಳೆ ಹಾನಿಗೊಳಗಾಯಿತು. ಆದರೆ ಅವನಿಗೆ ಪರಿಹಾರ ಸಿಗಲಿಲ್ಲ. ಸಾಲಗಳಿಗೆ ಹೆದರಿ ಆಟ ಆತ್ಮಹತ್ಯೆ ಮಾಡಿಕೊಂಡಿದ್ದಾನೆ "ಎಂದು ಅವರು ಹೇಳಿದ್ದಾರೆ.


ಪೊಲೀಸರು ಸೆಕ್ಷನ್ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.