ಬೆಂಗಳೂರು : ದೇವರು ಕೊಡಬೇಕೆನಿಸಿದಾಗ ಕೊಟ್ಟೇ ಕೊಡುತ್ತಾರೆ ಎಂದು ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರಬಹುದು. ಅಂತಹದೇ ಒಂದು ಸುದ್ದಿ ಮಧ್ಯ ಪ್ರದೇಶದ ಪನ್ನಾದಿಂದ ಬಂದಿದೆ. ಇಲ್ಲಿ ಬಡ ರೈತನೊಬ್ಬ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಇದನ್ನು ಕೇಳಿದವರಿಗೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ.


COMMERCIAL BREAK
SCROLL TO CONTINUE READING

ಈ ರೈತನ (Farmer) ಹೆಸರು ಲಖನ್ ಯಾದವ್. ಲಖನ್ ಯಾದವ್ ಕುಟುಂಬಕ್ಕೆ ಕೃಷಿಯೇ ಮೂಲ ಆಧಾರ. ಆದರೆ ಅವರ ಅದೃಷ್ಟವೇ ಬದಲಾಗಿದ್ದು ಪ್ರತಿಯೊಬ್ಬ ರೈತನೂ ದೇವರು ಕಣ್ಣು ಬಿಟ್ಟರೆ ನಮಗೂ ಇಂತಹ ಅದೃಷ್ಟ ಒಲಿಯಬಹುದು ಎಂಬ ಕನಸು ಕಾಣುವಂತೆ ಮಾಡಿದೆ.


45 ವರ್ಷದ ಯಾದವ್ ಕಳೆದ ತಿಂಗಳು 10 × 10 ಅಳತೆಯ ಭೂಮಿಯನ್ನು 200 ರೂ.ಗೆ ಗುತ್ತಿಗೆ ಪಡೆದಿದ್ದರು. ಅಲ್ಲಿ ಅವರು ಕೃಷಿ (Agriculture) ಮಾಡಲೆಂದು ಭೂಮಿಯನ್ನು ಅಗೆಯುವಾಗ  ಅದರಲ್ಲಿ ಹೊಳೆಯುವ 'ಬೆಣಚುಕಲ್ಲು' ಕಂಡಿತು. ಅದು ಸಾಮಾನ್ಯವಾದ ಕಲ್ಲಲ್ಲ ಎಂದು ತಿಳಿದ ರೈತ ಅದನ್ನು ಪರೀಕ್ಷಿಸುವುದು ಸೂಕ್ತವೆಂದು ನಿರ್ಧರಿಸಿದರು.


ಒಂದು ರಾತ್ರಿಯಲ್ಲಿ ಸರ್ಕಾರಿ ನೌಕರನಾದ ರೈತ, ಮುಂದೆ ಆಗಿದ್ದೇ ಬೇರೆ...


ತನಿಖೆಯ ವೇಳೆ ಆತನಿಗೆ 14.98 ಕ್ಯಾರೆಟ್ ವಜ್ರ (Diamond) ಸಿಕ್ಕಿರುವುದು ಪತ್ತೆಯಾಗಿದೆ. ಈ ಬಗ್ಗೆ ತಿಳಿದು ಏನಾಗುತ್ತಿದೆ ಎಂದು ರೈತ ಯೋಚಿಸುವಷ್ಟರಲ್ಲೇ ಈ ಸುದ್ದಿ ಇಡೀ ಪ್ರದೇಶದಲ್ಲಿ ಬೆಂಕಿಯಂತೆ ಹರಡಿತು. ಬಳಿಕ ಕಳೆದ ಶನಿವಾರ ಈ ವಜ್ರವನ್ನು 60.6 ಲಕ್ಷ ರೂಪಾಯಿಗಳಿಗೆ ಹರಾಜು ಮಾಡಲಾಗಿದೆ.


ಈ ಕುರಿತಂತೆ ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ರೈತ ಯಾದವ್, ನನ್ನ ಜೀವನವೇ ಬದಲಾಗಿದೆ. ಆ ವಜ್ರವನ್ನು ಕಂಡುಕೊಂಡ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಹಣವನ್ನು ಏನು ಮಾಡಬೇಕೆಂದು ನಾನು ಯೋಚಿಸಲಿಲ್ಲ. ಸದ್ಯಕ್ಕೆ, ನಾನು ನನ್ನ 4 ಮಕ್ಕಳ ಅಧ್ಯಯನದ ಬಗ್ಗೆ ಗಮನ ಹರಿಸುತ್ತೇನೆ ಎಂದಿದ್ದಾರೆ. 


ಪ್ರತಿದಿನ 8 ಗಂಟೆಗಳ ಕಾಲ ಕೆಲಸ ಮಾಡ್ತಾರೆ 91ರ ಹರೆಯದ ಈ ರೈತ


ವಿಶೇಷವೆಂದರೆ ಪನ್ನಾದಲ್ಲಿ ರೈತನೊಬ್ಬನಿಗೆ ವಜ್ರ ದೊರೆತಿರುವುದು ಇದೇ ಮೊದಲೇನಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ, ಅನೇಕ ರೈತರಿಗೆ ಇದೇ ರೀತಿಯ ವಜ್ರ ದೊರೆತಿದೆ. ಇದರ ಒಟ್ಟು ಮೌಲ್ಯ 1 ಕೋಟಿಗಿಂತ ಹೆಚ್ಚು.