Tractor Rally: ಹಿಂಸಾಚಾರದ ಬೆನ್ನಲ್ಲೇ `ಟ್ರಾಕ್ಟರ್ ರ‍್ಯಾಲಿ` ಹಿಂಪಡೆದ ರೈತ ಸಂಘಟನೆಗಳು..!
ಕೃಷಿ ಕಾನೂನು ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾರೂಪಕ್ಕೆ ತಿರುಗಿದ ಬೆನ್ನಲ್ಲೇ ರ‍್ಯಾಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿರುವುದಾಗಿ ರೈತರ ಪರ ಸಂಘಟನೆಗಳು ಘೋಷಣೆ ಮಾಡಿವೆ.
ನವದೆಹಲಿ: ಕೃಷಿ ಕಾನೂನು ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾರೂಪಕ್ಕೆ ತಿರುಗಿದ ಬೆನ್ನಲ್ಲೇ ರ‍್ಯಾಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿರುವುದಾಗಿ ರೈತರ ಪರ ಸಂಘಟನೆಗಳು ಘೋಷಣೆ ಮಾಡಿವೆ.
ಈ ಕುರಿತಂತೆ ಮಾತನಾಡಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ವಕ್ತಾರರು, ತತ್ ಕ್ಷಣದಿಂದಲೇ ಟ್ರಾಕ್ಟರ್ ರ‍್ಯಾಲಿ(Tractor Rally)ಯನ್ನು ನಾವು ಹಿಂದಕ್ಕೆ ಪಡೆದಿದ್ದೇವೆ. ಕೂಡಲೇ ರೈತರು ಪ್ರತಿಭಟನಾ ನಿರತ ಪ್ರದೇಶಕ್ಕೆ ವಾಪಸ್ ಆಗಬೇಕು. ನಮ್ಮ ಹೋರಾಟ ಶಾಂತಿಯುತವಾಗಿ ಮುಂದುವರೆಯಲಿದೆ. ಮುಂದಿನ ನಿರ್ಧಾರದ ಕುರಿತು ರೈತ ಮುಖಂಡರೊಂದಿಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಟ್ರ್ಯಾಕ್ಟರ್ ರ್ಯಾಲಿಯಿಂದಾಗಿ ರೈಲುಗಳನ್ನು ತಪ್ಪಿಸಿಕೊಂಡವರಿಗೆ ಹಣ ಹಿಂತಿರುಗಿಸಲು ಮುಂದಾದ ರೈಲ್ವೆ ಇಲಾಖೆ
ಇನ್ನು ದೆಹಲಿಯಲ್ಲಿ ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ರಾಷ್ಟ್ರ ರಾಜಧಾನಿ ಪ್ರಕ್ಷುಬ್ಧಗೊಂಡಿತ್ತು. ಈ ನಡುವೆ ಕೆಂಪುಕೋಟೆಯಲ್ಲಿ ಪ್ರತಿಭಟನಾ ನಿರತ ರೈತರು ಸಿಖ್ ಧ್ವಜ ಹಾರಿಸಿದ್ದಕ್ಕೆ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿತ್ತು.
ರೈತರ ಬಂಡಾಯ: ದೆಹಲಿಯ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸ್ಥಗಿತ
ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ, ತಮಗೂ ಈ ಹಿಂಸಾಚಾರಕ್ಕೂ ಸಂಬಂಧವಿಲ್ಲ. ರೈತರ ಟ್ರಾಕ್ಟರ್ ರ‍್ಯಾಲಿ ವೇಳೆ ಕೆಲ ಸಮಾಜ ವಿದ್ರೋಹಿ ವ್ಯಕ್ತಿಗಳು ನುಸುಳಿ ಪ್ರತಿಭಟನೆಯ ಹಾದಿ ತಪ್ಪಿಸಿದ್ದಾರೆ. ನಮ್ಮ ಪ್ರತಿಭಟನೆ ಶಾಂತಿಯುತವಾಗಿಯೇ ಇತ್ತು. ಆದರೆ ಕೆಲವು ಸಮಾಜಘಾತುಕ ಶಕ್ತಿಗಳು ನಮ್ಮ ನಡುವೆ ಸೇರಿಕೊಂಡು ಈ ಹಿಂಸಾಚಾರ ನಡೆದಿದೆ. ಶಾಂತಿ ಎಂದಿಗೂ ಅತಿ ದೊಡ್ಡ ಶಕ್ತಿ ಹಾಗೂ ನಿಯಮಗಳ ಉಲ್ಲಂಘನೆ ಚಳುವಳಿಗೆ ಒಳಿತಲ್ಲ ಎಂದು ಹೇಳಿದೆ.
PM Kisan Yojana: ಶೀಘ್ರವೇ ರೈತರ ಖಾತೆ ಸೇರಲಿದೆ ಬಾಕಿ ಮೊತ್ತ , ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.