ಮುಂಬೈ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ರೈತನೊಬ್ಬ ಸಾಲದ ಹೊರೆ ತಾಳಲಾರದೆ ನಾನೇ ಚಿತೆಯೊಂದನ್ನು ಸಿದ್ಧಪಡಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಬ್ಯಾಂಕಿನಿಂದ ಬೆಳೆ ಸಾಲ ಪಡೆದಿದ್ದ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ತುರತಿ ಗ್ರಾಮದ ರೈತ ಪೋತಣ್ಣ ರಾಮುಲು ಬೋಲ್ಪಿಲ್ವಾಡ್(65) ಎಂಬವರು ಬೆಳೆ ನಷ್ಟವಾದ ಪರಿಣಾಮ ಸಾಲ ತೀರಿಸಲಾಗದೆ ತಾವೇ ಚಿತೆ ಸಿದ್ಧಪಡಿಸಿ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಈ ಘಟನೆ ಸಂಬಂಧ ಉಮ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇನ್ನು ಮೃತ ರೈತ ಪೋತಣ್ಣ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಗಾಗಿ ಆನ್ ಲೈನ್ ನಲ್ಲಿ
ನೋಂದಾಯಿಸಿದ್ದರೂ ಸಹ ಅವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. 


ಶುಕ್ರವಾರ ಬೆಳಿಗ್ಗೆಯೇ ಜಮೀನಿಗೆ ಹೋಗಿದ್ದ ಪೋತಣ್ಣ, ಸಂಜೆಯಾದರೂ ಮನೆಗ ಬಾರದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಕುಟುಂಬಸ್ಥರು ಜಮೀನಿಗೆ ಹೋಗಿ ಹುಡುಕಾಡಿದ್ದಾರೆ. ಆಗ ರೈತ ಪೋತಣ್ಣ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.