ಜಮ್ಮು: Farooq Abdullah - ನ್ಯಾಷನಲ್ ಕಾನ್ಫರೆನ್ಸ್ (National Conference) ಅಧ್ಯಕ್ಷ ಡಾ.ಫಾರೂಕ್ ಅಬ್ದುಲ್ಲಾ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಕೇಂದ್ರದಿಂದ ಕಿತ್ತುಕೊಳ್ಳಲಾಗಿರುವ ನಮ್ಮ ಹಕ್ಕುಗಳನ್ನು ಮರಳಿ ಪಡೆಯಲು ರೈತರಂತೆ (Farmer Protest) ಬಲಿದಾನ ನೀಡಬೇಕಾಗಬಹುದು’ ಎಂದು ಅಬ್ದುಲ್ಲಾ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ. ಕೇಂದ್ರಾಡಳಿತ ಪ್ರದೇಶಕ್ಕೆ (Jammu And Kashmir) ಸಂಪೂರ್ಣ ರಾಜ್ಯ ಸ್ಥಾನಮಾನ ಸಿಗುವಂತೆ ಮಾಡಲು ಪ್ರತ್ಯೇಕ ವೇದಿಕೆ ಸಿದ್ಧಪಡಿಸುವಂತೆ ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಯುವಕರಿಗೆ ಅಬ್ದುಲ್ಲಾ ಕರೆ
ಹಜರತ್‌ಬಾಲ್‌ನಲ್ಲಿ ತಮ್ಮ ತಂದೆ ಶೇಖ್ ಅಬ್ದುಲ್ಲಾ ಅವರ ಪುಣ್ಯತಿಥಿಯಂದು ತಮ್ಮ ಪಕ್ಷದ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ನೀವು ಯುವಕರು, ನೀವು ಈ ರಾಜಪ್ರಭುತ್ವದ ಹೊರೆಯನ್ನು ನಿಮ್ಮ ಹೆಗಲ ಮೇಲೆ ಹೊತ್ತುಕೊಳ್ಳಬೇಕು. ನೀವು ಯಾರೊಂದಿಗೆ ಹೇಗೆ ಸಂಬಂಧ ಹೊಂದಲು ಬಯಸುತ್ತೀರಿ ಎಂಬುದನ್ನು ನೀವು ನಿರ್ಧರಿಸಬೇಕು ಎಂದಿದ್ದಾರೆ.


ಇದನ್ನೂ ಓದಿ-ಯಾತ್ರಿಗಳ ಗಮನಕ್ಕೆ...! ಇನ್ಮುಂದೆ ಟ್ರೈನ್ ನಲ್ಲಿ ಬರ್ತ್ ಖಾಲಿಯಾದ ತಕ್ಷಣ ನಿಮಗೆ ಅಲರ್ಟ್ ಸಿಗಲಿದೆ


ರೈತರಂತೆ ಬಲಿದಾನ(New Farm Laws) ನೀಡಬೇಕು
ಇದಕ್ಕೂ ಮುಂದುವರೆದು ಮಾತನಾಡಿರುವ ಫಾರೂಕ್ ಅಬ್ದುಲ್ಲಾ, 'ನಮಾಜ್ ಹಾದಿಯಲ್ಲಿ ಇರಿ. ಅಲ್ಲಾಹನ ಮಾರ್ಗವನ್ನು ಅನುಸರಿಸಿ, ಎಲ್ಲಿಯೂ ತಲೆಬಾಗುವ ಅಗತ್ಯವಿಲ್ಲ. ಇಷ್ಟೇ ಅಲ್ಲ, 'ಕೇಂದ್ರವು ನಮ್ಮಿಂದ ಕಸಿದುಕೊಂಡಿರುವ ಹಕ್ಕುಗಳನ್ನು ಮರಳಿ ಪಡೆಯಲು ನಾವು ರೈತರಂತೆಯೇ ಬಲಿದಾನ ನೀಡಬೇಕಾಗಬಹುದು' ಎಂಬ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. 


ಇದನ್ನೂ ಓದಿ-Injuction Phobia:ನಿಮಗೂ ಇಂಜೆಕ್ಷನ್ ಅಂದ್ರೆ ಭಯಾನಾ? ಇದರ ಹಿಂದಿನ Science ಏನು ಗೊತ್ತಾ?


ಹೈದರ್ಪೋರಾ ಎನ್ಕೌಂಟರ್ ಪ್ರಶ್ನಿಸಿದ ಫಾರೂಕ್ ಅಬ್ದುಲ್ಲಾ 
ಹೈದರ್‌ಪೋರಾ ಎನ್‌ಕೌಂಟರ್ ಅನ್ನು ಪ್ರಶ್ನಿಸಿಸ್ದ ಫಾರೂಕ್ ಅಬ್ದುಲ್ಲಾ , ಹತ್ಯೆಯಾದ ಮೂವರ ಕುಟುಂಬಸ್ತರ ಭಾರೀ ವಿರೋಧದ ನಂತರ ಪೊಲೀಸರು ಮತ್ತು ಆಡಳಿತವು ಎರಡು ಶವಗಳನ್ನು ಹೊರತೆಗೆಯಬೇಕಾಯಿತು. ಇದಾದ ನಂತರ ಅವರನ್ನು ಸಂತ್ರಸ್ತರ ಕುಟುಂಬಗಳಿಗೆ ಹಸ್ತಾಂತರಿಸಬೇಕಾಯಿತು. ಇನ್ನು ಮೂರನೇ ವ್ಯಕ್ತಿಯ ಮೃತದೇಹವನ್ನು ಉಧಂಪುರದಲ್ಲಿರುವ ಆತನ ಕುಟುಂಬಕ್ಕೆ ಹಸ್ತಾಂತರಿಸಬೇಕಿದೆ ಎಂದಿದ್ದಾರೆ. 


ಇದನ್ನೂ ಓದಿ - Bike Stunts Video: ಹುಡ್ಗಿಯರ ಮುಂದೆ ಡೌಲು ಹೊಡೆಯಲು ಹೋಗಿ ಬೈಕ್ ಮೇಲಿಂದ ಬಕ್ ಬಾರ್ ಬಿದ್ದ ಭೂಪ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.